ಆಂಜನೇಯರಿಂದ ನಯಾಪೈಸೆ ಕೆಲಸ ಆಗಿಲ್ಲ, ಈಗ ಗ್ಯಾರೆಂಟಿ ಕಾರ್ಡ್ ಯಾಕೆ?: ಶಾಸಕ ಎಂ ಚಂದ್ರಪ್ಪ ಕಿಡಿ
ಎಲ್ಲಿ ಹೇಗೆ ಹಣ ತರುತ್ತೇನೆಂದು ಕೇಳಬೇಡಿ. ಚಿಟಿಕೆ ಹೊಡೆದರೆ ವಿಧಾನಸೌಧದ ಖಜಾನೆಯಿಂದ ಕೋಟಿ ಕೋಟಿ ಹಣ ತರುವ ಶಕ್ತಿಯಿದೆ. ಯಾವ ಕೆಲಸವೇ ಆಗಲಿ ಸ್ಥಳದಲ್ಲೇ ಹಣ ಹಾಕುವ ತಾಕತ್ತು ನನ್ನದು ಎಂದು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಚಂದ್ರಪ್ಪ ಕ್ಷೇತ್ರದ ಜನತೆಗೆ ಭರವಸೆ ನೀಡಿದರು.
ಸಿರಿಗೆರೆ (ಏ.15) : ಎಲ್ಲಿ ಹೇಗೆ ಹಣ ತರುತ್ತೇನೆಂದು ಕೇಳಬೇಡಿ. ಚಿಟಿಕೆ ಹೊಡೆದರೆ ವಿಧಾನಸೌಧದ ಖಜಾನೆಯಿಂದ ಕೋಟಿ ಕೋಟಿ ಹಣ ತರುವ ಶಕ್ತಿಯಿದೆ. ಯಾವ ಕೆಲಸವೇ ಆಗಲಿ ಸ್ಥಳದಲ್ಲೇ ಹಣ ಹಾಕುವ ತಾಕತ್ತು ನನ್ನದು ಎಂದು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ಚಂದ್ರಪ್ಪ ಕ್ಷೇತ್ರದ ಜನತೆಗೆ ಭರವಸೆ ನೀಡಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ(Holalkere assembly constituency)ದ ಸಿರಿಗೆರೆ, ಬಿ. ದುರ್ಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಳಗವಾಡಿ, ಮೆದಿಕೇರಿಪುರ, ದೊಡ್ಡಿಗನಹಾಳ್, ಜಮ್ಮೇನಹಳ್ಳಿ, ಪಳಿಕೆಹಳ್ಳಿ, ಪುಡಕಲಹಳ್ಳಿ ಮುಂತಾದ ಗ್ರಾಮಗಳಲ್ಲಿ ಬಿರುಸಿನ ಮತಯಾಚಿಸಿ ಮಾತನಾಡಿದರು.
ಸುಳ್ಳು, ಭ್ರಷ್ಟಾಚಾರ ಹೊಳಲ್ಕೆರೆ ಬಿಜೆಪಿ ಶಾಸಕರ ಮನೆದೇವರು; ಮಾಜಿ ಸಚಿವ ಆಂಜನೇಯ ವಾಗ್ದಾಳಿ
ತಾಲೂಕಿನಾದ್ಯಂತ ಎಲ್ಲಾ ಹಳ್ಳಿಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡು ಕ್ಷೇತ್ರದ ಸವಾಂರ್‍ಗೀಣ ಅಭಿವೃದ್ಧಿಗೆ ಹಗಲು-ರಾತ್ರಿ ಶ್ರಮಿಸುತ್ತಿದ್ದೇನೆ. ಯಾವ ಕೆಲಸವೇ ಆಗಲಿ ಗುಣಮಟ್ಟಬಾಳಿಕೆ ಬರುವಂತೆ ನಿಗಾ ಇಟ್ಟಿದ್ದೇನೆ. ಹಿರಿಯೂರಿನ ಮಾರಿಕಣಿವೆಯಿಂದ ನೀರು ತಂದು ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಸಿ.ಸಿ. ರಸ್ತೆ, ಟಾರ್ ರಸ್ತೆ, ಕೆರೆ ಕಟ್ಟೆ, ಸೇತುವೆಗಳ ನಿರ್ಮಾಣ. ಬೇಸಿಗೆಯಲ್ಲಿ ರೈತರಿಗೆ ಐದು ಗಂಟೆಗಳ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುವಂತೆ ಮಾಡಿದ್ದು, ಕ್ಷೇತ್ರದಲ್ಲಿ ಯಾವ ಹಳ್ಳಿಗೆ ಹೋದರೂ ಕಣ್ಣಿಗೆ ಕಾಣುವ ರೀತಿಯಲ್ಲಿ ಕೆಲಸವಾಗಿದೆ ಎಂದು ಹೇಳಿದರು.
ಅರವತ್ತು ಎಪ್ಪತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ನಂಬಿಕೆ ಕಳೆದುಕೊಂಡಿದೆ. ನಯಾ ಪೈಸೆ ಕೆಲಸ ಮಾಡಿಲ್ಲ. ಇಲ್ಲಿಂದ ಗೆದ್ದು ಮಂತ್ರಿಯಾದ ಎಚ್. ಆಂಜನೇಯ ಈಗ ಬಂದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಡುವ ಅಗತ್ಯವಿಲ್ಲ. ಬಿ.ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಇವರು ನನ್ನ ಕ್ಷೇತ್ರದ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ನೀಡಿದ್ದಾರೆ. ಮತ್ತೊಮ್ಮೆ ಬಸವರಾಜ್ ಬೊಮ್ಮಾಯಿ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಅದಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ಚುನಾವಣೆಯಲ್ಲಿ ಮತ ಹಾಕುವುದು ಒಂದು ನಿಮಿಷದ ಕೆಲಸ. ಯಾರು ನಿಮ್ಮ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾರೆ ಎನ್ನುವುದನ್ನು ಆಲೋಚಿಸಿ ಮತ ನೀಡಿ. ಕ್ಷೇತ್ರದಲ್ಲಿ ಎಲ್ಲಿಯೂ ಗದ್ದಲ ಗಲಾಟೆಯಾಗದಂತೆ ನೋಡಿಕೊಂಡಿದ್ದೇನೆ. ಜಾತಿ ನಿಂದನೆ ಕೇಸು ದಾಖಲಾಗಲು ಬಿಟ್ಟಿಲ್ಲ. ಎಲ್ಲಾ ಜಾತಿಯವರನ್ನು ಸಮಾನವಾಗಿ ಕಂಡಿದ್ದೇನೆ. ಮುಂದಿನ ತಿಂಗಳು ನಡೆಯುವ ಚುನಾವಣೆಗೆ ಇದೇ ತಿಂಗಳ ಹತ್ತೊಂಬತ್ತರಂದು ನಾಮಪತ್ರ ಸಲ್ಲಿಸುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಕ್ತಿ ಪ್ರದರ್ಶಿಸಿ ಎಂದು ಮತದಾರರಲ್ಲಿ ಎಂ. ಚಂದ್ರಪ್ಪ ವಿನಂತಿಸಿದರು.
Chitradurga: ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಬೆಂಬಲಿಗನಿಂದ ದರ್ಪ: ಮಾರಣಾಂತಿಕ ಹಲ್ಲೆ ಆರೋಪ
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಡಿ.ವಿ. ಶರಣಪ್ಪ, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್, ಯುವ ಮೋರ್ಚಾ ಉಪಾಧ್ಯಕ್ಷ ಕೆ.ಬಿ. ಮೋಹನ್, ತಿಪ್ಪಣ್ಣ, ಡಾ. ಉಮಾಪತಿ, ಪುರಸಭೆ ಸದಸ್ಯ ಬಸಯ್ಯ, ಪಂಚಣ್ಣ, ಬಸವರಾಜ್, ಮೂರ್ತಿ, ಕುಬೇರಮ್ಮ, ಮುಂತಾದವರು ಪಾಲ್ಗೊಂಡಿದ್ದರು.