Asianet Suvarna News Asianet Suvarna News

Himachal Pradesh Election Results 2022: ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳಿವು..

ಈ ಬಾರಿಯೂ ಆಡಳಿತ ವಿರೋಧಿ ಅಲೆ ವರ್ಕೌಟ್‌ ಆದಂತಿದೆ. ಕಳೆದ ಕೆಲ ಚುನಾವಣೆಗಳಿಂದಲೂ ಹಿಮಾಚಲ ಪ್ರದೇಶ ಮತದಾರರು ಒಂದೇ ಪಕ್ಷದ ಪರ ವಾಲುವುದಿಲ್ಲ ಎನ್ನುವುದನ್ನು ಮತ್ತೆ ಸಾಬೀತುಪಡಿಸುತ್ತಿದ್ದಾರೆ.

himachal pradesh vidhan sabha chunav results 2022 bjp loss main reasons explained ash
Author
First Published Dec 8, 2022, 3:28 PM IST

ಒಂದೆಡೆ, ಗುಜರಾತ್‌ ವಿಧಾನಭಾ ಚುನಾವಣೆಯಲ್ಲಿ (Gujarat Assembly Elections 2022) ಬಿಜೆಪಿ (BJP) 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಬಹುತೇಕ ಪಕ್ಕಾ ಆಗಿದ್ದು, ತನ್ನ ಹಳೆಯ ದಾಖಲೆಗಳನ್ನ ತಾನೇ ಉಡೀಸ್‌ ಮಾಡಿದೆ. ಇನ್ನೊಂದೆಡೆ, ಹಿಮಾಚಲ ಪ್ರದೇಶದಲ್ಲಿ (Himachal Pradesh) ಬಿಜೆಪಿ 30 ಸ್ಥಾನಗಳನ್ನು ಪಡೆಯಲು ಸಹ ಪರದಾಡುತ್ತಿದ್ದು, ಕಾಂಗ್ರೆಸ್‌ (Congress) ಮತ್ತೆ ಸರಳ ಬಹುಮತ ಪಡೆಯುವುದು ಬಹುತೇಕ ನಿಚ್ಚಳವಾಗಿದೆ. ಈ ಹಿನ್ನೆಲೆ ಹಿಮಾಚಲ ಪ್ರದೇಶದಲ್ಲಿ ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಬಹುತೇಕ ಖಚಿತವಾಗಿದೆ. ಆಡಳಿತ ವಿರೋಧಿಯ ಜತೆಗೆ ಬಿಜೆಪಿ 2022ರ ವಿಧಾನಸಭೆ ಚುನಾವಣೆಯಲ್ಲಿ ಸೋಲಲು ಇತರೆ ಕಾರಣಗಳು ಹೀಗಿದೆ ನೋಡಿ..

ಆಡಳಿತ ಶೈಲಿಯೇ ಮುಳುವಾಯ್ತಾ..?
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ (Jai Ram Thakur) ಅವರು ತಮ್ಮ ಸ್ಥಾನವನ್ನು ಪ್ರಭಾವಶಾಲಿ ಅಂತರದಿಂದ ಗೆದ್ದಿರಬಹುದು. ಏಕೆಂದರೆ ಅವರು ಸುಮಾರು ಶೇ. 76 ರಷ್ಟು ಮತ ಪಡೆದಿದ್ದಾರೆ. ಆದರೆ, ಜೈರಾಮ್‌ ಠಾಕೂರ್‌ ಅವರ ಆಡಳಿತ ಶೈಲಿಯೇ ಹಿಮಾಚಲ ಪ್ರದೇಶದಲ್ಲಿ ಮತ್ತೆ ಕಮಲ ಅರಳಲು ವಿಫಲವಾಗಿದೆ ಎಂದು ಬಿಜೆಪಿಯ ಅನೇಕರು ಆರೋಪಿಸುತ್ತಾರೆ.

ಇದನ್ನು ಓದಿ: ಮೈನ್‌ಪುರಿ ಉಪಚುನಾವಣೆಯಲ್ಲಿ ಎಸ್‌ಪಿಯದ್ದೇ ಕಾರುಬಾರು: ‘ಸೊಸೆ’ ಡಿಂಪಲ್‌ ಯಾದವ್‌ ಎದುರು ಮಂಕಾದ ಕಮಲ..!

ಮತ್ತೆ ಆಡಳಿತ ವಿರೋಧಿ ಅಲೆ..!
ಈ ಬಾರಿಯೂ ಆಡಳಿತ ವಿರೋಧಿ ಅಲೆ ವರ್ಕೌಟ್‌ ಆದಂತಿದೆ. ಕಳೆದ ಕೆಲ ಚುನಾವಣೆಗಳಿಂದಲೂ ಹಿಮಾಚಲ ಪ್ರದೇಶ ಮತದಾರರು ಒಂದೇ ಪಕ್ಷದ ಪರ ವಾಲುವುದಿಲ್ಲ ಎನ್ನುವುದನ್ನು ಮತ್ತೆ ಸಾಬೀತುಪಡಿಸುತ್ತಿದ್ದಾರೆ. 2007 ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರೆ, 2012 ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಆದರೆ, 2022 ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕೈಗೆ ಬಹುಮತ ಲಭಿಸುತ್ತಿದ್ದು, ಅಧಿಕಾರ ಹಿಡಿಯುವುದು ಬಹುತೇಕ ಖಚಿತ. ಹೀಗೆ, ಪ್ರತಿ ಚುನಾವಣೆಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಬದಲಾಗುವ ಗುಡ್ಡಗಾಡು ರಾಜ್ಯದಲ್ಲಿ ಬದಲಾವಣೆಯ ಬಲವಾದ ಹಂಬಲದಿಂದ ಬಿಜೆಪಿಗೆ ಅಡ್ಡಿಯುಂಟಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ದೇಶಾದ್ಯಂತ ಕೊನೆಯಿಲ್ಲದ ಚುನಾವಣಾ ಹಿನ್ನಡೆಗಳಿಂದ ಜರ್ಜರಿತವಾಗಿರುವ ಕಾಂಗ್ರೆಸ್, 39 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದು, 68 ಸದಸ್ಯ ಬಲದ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯಲಿದೆ. ಆದರೆ, ಬಿಜೆಪಿ 44 ರಿಂದ 26 ಕ್ಕೆ ಇಳಿದಿದೆ. 

ಕಮಲ, ಮೋದಿಗೆ ಮತ ನೀಡಿ ಅನ್ನೋದು ವರ್ಕೌಟ್‌ ಆಗಿಲ್ಲ..!
ಸ್ಥಳೀಯ ಸಮಸ್ಯೆಗಳ ಮೇಲೆ ಕಾಂಗ್ರೆಸ್‌ ಗಮನವು ಕೆಲಸ ಮಾಡಿದೆ. ಇನ್ನು, ತನಗೆ ಮತ ನೀಡುವಂತೆ ಪ್ರಧಾನಿ ಮೋದಿ ಮಾಡಿದ ಮನವಿಯು ಮತದಾರರನ್ನು ಅಷ್ಟಾಗಿ ಓಲೈಸುವಂತೆ ತೋರುತ್ತಿಲ್ಲ. ಇದು ರಾಜ್ಯದಲ್ಲಿ ಬಿಜೆಪಿ ವಿರುದ್ಧದ ಭಾವನೆ ಮತ್ತು ರಾಜ್ಯಾದ್ಯಂತ ಬದಲಾವಣೆಯ ಹಂಬಲದ ಪ್ರತಿಬಿಂಬವಾಗಿ ಕಂಡುಬರುತ್ತದೆ. ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ನಾಯಕತ್ವಕ್ಕೆ ಒತ್ತು ನೀಡುವ ಕಾಂಗ್ರೆಸ್ ಅಭಿಯಾನವು ಉತ್ತಮ ಫಲ ನೀಡಿದೆ ಎಂದು ಹಿಮಾಚಲ ಪ್ರದೇಶದ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ವೀಕ್ಷಕರು ಹೇಳಿದ್ದಾರೆ.

ಇದನ್ನೂ ಓದಿ: Gujarat Election Results 2022: ಮೋರ್ಬಿ ಸೇತುವೆ ದುರಂತದ ಕ್ಷೇತ್ರದಲ್ಲೂ ಬಿಜೆಪಿಗೆ ಭಾರಿ ಮುನ್ನಡೆ..!

ಮನೆ-ಮನೆ ಪ್ರಚಾರ ಮತ್ತು ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಬಹಿರಂಗಪಡಿಸುವುದರ ಮೇಲೆ ಕಾಂಗ್ರೆಸ್ ಕೇಂದ್ರೀಕರಿಸಿತ್ತು. ಬಿಜೆಪಿಯ ರಾಜ್ಯ ಘಟಕದ ದೌರ್ಬಲ್ಯ ಮತ್ತು ಮುಖ್ಯಮಂತ್ರಿಗಳ ದೌರ್ಬಲ್ಯವನ್ನು ಗ್ರಹಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹಿಮಾಚಲ ಪ್ರದೇಶದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಮತ್ತು ತನಗೆ ವೈಯಕ್ತಿಕವಾಗಿ ಮತ ನೀಡುವಂತೆ ಮತದಾರರಿಗೆ ಮನವಿ ಮಾಡಿದ್ದರು. ಆದರೆ ಮತದಾರರು ವಿಧಾನಸಭೆ ಚುನಾವಣೆಯೇ ಬೇರೆ ಲೋಕಸಭೆ ಚುನಾವಣೆಯೇ ಬೇರೆ ಎನ್ನುವಂತೆ ಮತ ಹಾಕಿದ್ದಾರೆ. 

ಹಿಮಾಚಲ ಬಿಜೆಪಿಯಲ್ಲಿ ಜಟಾಪಟಿಯೂ ಕಾರಣ..!
ಹಿಮಾಚಲದ ಬಿಜೆಪಿ ಪಾಳಯದೊಳಗಿನ ಜಟಾಪಟಿ ಚುನಾವಣೆಯಲ್ಲಿ ಪಕ್ಷಕ್ಕೆ ಪೆಟ್ಟು ಕೊಟ್ಟಂತಿದೆ. ನಡ್ಡಾ ಪಾಳಯ ಮತ್ತು ಪ್ರೇಮ್ ಕುಮಾರ್ ಧುಮಾಲ್ ಅವರ ನಿಕಟವರ್ತಿಗಳ ನಡುವಿನ ಜಗಳಕ್ಕೆ ಹಿಮಾಚಲ ಪ್ರದೇಶ ಬಿಜೆಪಿ ಘಟಕ ಸಾಕ್ಷಿಯಾಗಿತ್ತು ಎನ್ನಲಾಗಿದೆ. ಹಾಗೆ, ಸುಮಾರು 20 ಸ್ಥಾನಗಳಲ್ಲಿ, ರಾಷ್ಟ್ರೀಯ ನಾಯಕರು ರಾಜ್ಯ ನಾಯಕತ್ವದ ಮನವಿಗೆ ಯಾವುದೇ ಗಮನ ಕೊಡಲಿಲ್ಲ ಎಂದು ಮೂಲಗಳು ತಿಳಿಸಿವೆ. ಹಾಗೆ, ರಾಷ್ಟ್ರೀಯ ನಾಯಕತ್ವವು ರಾಜ್ಯ ಘಟಕದಲ್ಲಿನ ಬಂಡಾಯವನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Gujarat, HP Election Results 2022 Live: HP ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಜಯರಾಮ್ ಠಾಕೂರ್‌ಗೆ ಜಯ

ಹಳೆಯ ಪಿಂಚಣಿ ಯೋಜನೆ ಪರ ನಿಂತಿದ್ದ 'ಕೈ'
ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದ ಜನರ ಭಾವನೆಗಳನ್ನು ನಗದು ಮಾಡಿಕೊಳ್ಳುವ ಕಾಂಗ್ರೆಸ್‌ ಪ್ಲ್ಯಾನ್‌ ಫಲಿಸಿದಂತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಸ್ಕೀಂ ಅನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ರಾಜ್ಯದಲ್ಲಿ ಸುಮಾರು 2.5 ಲಕ್ಷ ಸರ್ಕಾರಿ ನೌಕರರಿದ್ದು, ಅವರಲ್ಲಿ 1.5 ಲಕ್ಷ ಮಂದಿ ಹೊಸ ಪಿಂಚಣಿ ಯೋಜನೆಗೆ ಒಳಪಟ್ಟಿದ್ದಾರೆ. ಪೂರ್ಣ ಪಿಂಚಣಿ ಮೊತ್ತವನ್ನು ಸರ್ಕಾರವು ನೀಡುವ ಹಳೆಯ ಪಿಂಚಣಿ ಯೋಜನೆಯು ಏಪ್ರಿಲ್ 1, 2004 ರಿಂದ ದೇಶದಲ್ಲಿ ಸ್ಥಗಿತಗೊಂಡಿದೆ.
 

Follow Us:
Download App:
  • android
  • ios