ಬೆಂಗಳೂರು, (ಸೆ.27) : ರಾಜ್ಯ ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ ಅವರ ನಿವಾಸದಲ್ಲಿ ಇಂದು(ಭಾನುವಾರ) ನಡೆದ ಕುರುಬ ಸಮಾಜ ನಾಯಕರ ಸಭೆ ಅಂತ್ಯವಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರ ಮನೆಯಲ್ಲಿ ನಾಲ್ಕು ಮಠದ ಸ್ವಾಮೀಜಿಗಳು ಮತ್ತು ಸರ್ವ ಪಕ್ಷದ ನಾಯಕರುಗಳು ನೇತೃತ್ವದಲ್ಲಿ ಕುರುಬರ ಎಸ್‌ಟಿ ಹೋರಾಟದ ರೂಪುರೇಷೆ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದವು.

ಎಸ್'ಟಿಗೆ ಕುರುಬ ಸಮುದಾಯ ಸೇರಿಸಲು ಆಗ್ರಹ

ಸಭೆಯಲ್ಲಿ ಸಚಿವ ಈಶ್ವರಪ್ಪ, ಎಚ್ ವಿಶ್ವನಾಥ್, ರಘುನಾಥ್ ಮಲ್ಕಾಪುರೆ, ಮಾಜಿ ಮೇಯರ್ ವೆಂಕಟೇಶ್ ಮೂರ್ತಿ, ಮಾಜಿ ಮೇಯರ್ ರಾಮಚಂದ್ರಪ್ಪ ಮುಕುಟಪ್ಪ ಸೇರಿದಂತೆ 100 ಕ್ಕೂ ಹೆಚ್ಚು ನಾಯಕರು ಪಾಲ್ಗೊಂಡಿದ್ದರು.

ಸಭೆಯಲ್ಲಾದ ಪ್ರಮುಖ ಚರ್ಚೆ

ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸುವಂತೆ ರಾಜ್ಯ ಮತ್ತು ಕೇಂದ್ರದ ಮೇಲೆ ಒತ್ತಡ ಹೇರಲು ಸಭೆಯಲ್ಲಿ ನಿರ್ಧಾರಿಲಾಗಿದೆ. ಸಮುದಾಯದಿಂದ ಶಕ್ತಿ ಪ್ರದರ್ಶನ ಆಗಬೇಕು. ಇಲ್ಲವಾದಲ್ಲಿ ಯಾವುದೇ ಸರ್ಕಾರಗಳು ಬಗ್ಗೋದಿಲ್ಲ. ಈ ನಿಟ್ಟಿನಲ್ಲಿ ನಾವು ಒಟ್ಟಾಗಿ ಹೋರಾಟ ಮಾಡಬೇಕು. ನಮ್ಮ ಉದ್ದೇಶ ನಮ್ಮ ಸಮುದಾಯ ಎಸ್ಟಿಗೆ ಸೇರಿಸಬೇಕು ಅನ್ನೋದು. ಹೀಗಾಗಿ ಪಾದಯಾತ್ರೆ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಕರೆ ಕೊಡಲಾಗಿದೆ.

ಇದಕ್ಕಾಗಿ ಹೋರಾಟದ ರೂಪುರೇಷೆಗಳು, ಕಾರ್ಯಕ್ರಮಗಳ ಬಗ್ಗೆ ನಿಗದಿ ಮಾಡ್ತೇವೆ. ಸ್ವಾಮೀಜಿಗಳ ಸಲಹೆಯಂತೆ ಹೋರಾಟದ ರೂಪುರೇಷೆ ನಿಗದಿ ಮಾಡ್ತೇವೆ ಎಂದು ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.