ಇವರೇ ಕಣ್ರೋ 'ಹೌದೋ ಹುಲಿಯಾ' ದ ಅಸಲಿ ಮಾಲೀಕ!
ಹೌದ್ದೋ ಹುಲಿಯಾ ಅಸಲಿ ಮಾಲೀಕನ ಪತ್ತೆ ಮಾಡಿದ ಸೋಶಿಯಲ್ ಮೀಡಿಯಾ/ ಟಿಕ್ ಟಾಕ್ ನಲ್ಲಿ ಹುಲಿಯಾಂದೇ ದರ್ಬಾರ್/ ಯುಟ್ಯೂಬ್ ಗೂ ಕಾಲಿಟ್ಟ ಹುಲಿಯಾ/ ಹುಲಿಯಾನ ಅಸಲಿ ವಿಡಿಯೋ
ಬೆಂಗಳೂರು(ಡಿ. 05) ಉಪಚುನಾವಣೆ ಸಮರ ಮುಗಿದಿದೆ. 15 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಆದರೆ ಉಪಚುನಾವಣೆ ಕಣದಲ್ಲಿ ಸೋಶಿಯಲ್ ಮೀಡಿಯಾ ಅದೊಂದು ಡೈಲಾಗ್ ಫೇಮಸ್ ಮಾಡಿ ಆ ವ್ಯಕ್ತಿಯನ್ನು ಹುಡುಕಿ ತೆಗೆದಿದೆ.
ಲೋಕಸಭಾ ಚುನಾವಣೆಯಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪಾ' ಸೋಶಿಯಲ್ ಮೀಡಿಯಾವನ್ನು ಆಳಿದರೆ ಈ ಸಾರಿ ಹೌದ್ದೋ ಹುಲಿಯಾ!
ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಇಂದಿರಾ ಗಾಂಧಿ ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು ಎಂದು ಭಾಷಣದಲ್ಲಿ ಹೇಳಿದಾಗ ಕೆಳಗಿದ್ದ ವ್ಯಕ್ತಿ ಹೌದ್ದೋ ಹುಲಿಯಾ ಎಂದಿದ್ದು ಸೋಶಿಯಲ್ ಮೀಡಿಯಾದಲ್ಲೆಂತೂ ಫುಲ್ ವೈರಲ್.
ಟಿಕ್ ಟಾಕ್ ನಲ್ಲೂ ಹುಲಿಯಂದ್ದೇ ಅಬ್ಬರ
ನಮ್ಮ ಸೋಶಿಯಲ್ ಮೀಡಿಯಾ ಸಂಶೋಧಕರು ಸುಮ್ಮನೆ ಕೂರುವ ಜಾಯಮಾನದವರಲ್ಲ. ಅಂತಿಮವಾಗಿ ಯಾರು ಆ ವ್ಯಕ್ತಿ? ಹೌದ್ದೋ ಹುಲಿಯಾ ಡೈಲಾಗ್ ಹೇಳಿದ್ದು ಯಾರು ಎಂದು ಸಂಶೋಧನೆ ಮಾಡಿ ಹೊರಗೆ ತೆಗೆದಿದ್ದಾರೆ.
ಆ ವ್ಯಕ್ತಿಯನ್ನು ಪೋಟೋ ಸಮೇತ, ವಿಡಿಯೋ ಸಮೇತ ಕಂಡು ಹಿಡಿದಿದ್ದಾರೆ. ಕಾಗವಾಡದ ಈ ವ್ಯಕ್ತಿ ಇದೀಗ ಸೋಶಿಯಲ್ ಮೀಡಿಯಾ ನಂಬರ್ ಒನ್ ಟ್ರೆಂಡಿಂಗ್ ಆಗಿದ್ದಾರೆ. ಸ್ನೇಹಿತರು ಪರಸ್ಪರ ಮಾತಾಡಬೇಕಿದ್ದರೂ ಹೌದ್ದೋ ಹುಲಿಯಾ ಎಂಬ ಡೈಲಾಗ್ ಚಟಾಕಿ ಹಾರಿಸುತ್ತಿದ್ದಾರೆ.
ಹುಲಿಯಾ ಮಾಲೀಕ ಯಾರು?
ಹುಲಿಯಾ ಎಂದು ಕೂಗಿದ್ದು ಐನಾಪುರದ ಪೀರಪ್ಪ ತುಕ್ಕಪ್ಪ ಕಟ್ಟಿಮನಿ. ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಯಾದ ಇವರು ಸಿದ್ದರಾಮಯ್ಯ ಆ ಪ್ರದೇಶಕ್ಕೆ ಬಂದಾಗಲೆಲ್ಲ ಅವರ ಭಾಷಣ ಕೇಳಲು ತೆರಳುತ್ತಾರೆ. ಅವರ ಮೇಲಿನ ಅಭಿಮಾನದಿಂದಲೇ, ಮಾತಿಗೆ ಖುಷಿಯಾಗಿಯೇ ಹೌದೋ ಹುಲಿಯಾ ಎಂದು ಹೇಳಿದ್ದರು.