ಬೈ ಎಲೆಕ್ಷನ್: BJP, JDS, ಕಾಂಗ್ರೆಸ್ ಸೋಲು-ಗೆಲುವಿಗೆ ಕಾರಣವಾಗಬಹುದಾದ ಅಂಶಗಳು..
ಭಾರಿ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು (ಮಂಗಳವಾರ) ಶಾಂತಿಯುತವಾಗಿ ಅಂತ್ಯವಾಗಿದ್ದು, ಇದೀಗ ಸೋಲು ಗೆಲುವಿನ ಲೆಕ್ಕಾಚಾರಗಳು ಶುರುವಾಗಿವೆ.
ಬೆಂಗಳೂರು, (ನ.03): ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆದಾಗಿದೆ. ಸೋಮವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿದ್ದು, ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರಗೊಂಡಿದೆ.
ಮತದಾನ ನಡೆಯಿತು. ಶಿರಾದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಆರ್ ಆರ್ ನಗರದಲ್ಲಿ ಜನರು ಅತಿ ಕಡಿಮೆ ಉತ್ಸಾಹ ತೋರಿಸಿದ್ದಾರೆ.
ಬೈ ಎಲೆಕ್ಷನ್: ಹಳ್ಳಿ ಮಂದಿ ಮುಂದೆ ಹಿಂದೆ ಬಿದ್ದ ಸಿಟಿ ಜನ...!
ಮತದಾನದ ಅಂತ್ಯಗೊಂಡಾಗ ಶಿರಾದಲ್ಲಿ ಶೇ. 82.13 ಮತ್ತು ರಾಜರಾಜೇಶ್ವರಿ ನಗರದಲ್ಲಿ ಶೇ.45.24ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎರಡೂ ಕ್ಷೇತ್ರಗಳಿಂದ ಒಟ್ಟು 52 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ನಾಲ್ವರು ಮಹಿಳೆಯರು ಸೇರಿ 31 ಅಭ್ಯರ್ಥಿಗಳು ಕಣದಲ್ಲಿದ್ದು, ಇವರ ಹಣೆಬರಹ ಇದೇ ನವೆಂಬರ್ 10ರಂದು ತಿಳಿಯಲಿದೆ.
ಅದಕ್ಕೂ ಮುನ್ನ ಸೋಲು ಗೆಲುವಿನ ಲೆಕ್ಕಾಚಾರಗಳು ಶುರುವಾಗಿದ್ದು, ಮೂರು ರಾಜಕೀಯ ಪಕ್ಷಗಳಲ್ಲೂ ಗೆಲುವಿನ ಕುರಿತು ಅಂಕಿಸಂಖ್ಯೆಯ ಗಣಿತ ಮಾಡಲಾರಂಭಿಸಿವೆ. ಎಲ್ಲೆಲ್ಲಿ ಎಷ್ಟು ಮತ ಚಲಾವಣೆಯಾಗಿದೆ ಎನ್ನುವ ಬೂತ್ ಎಜೆಂಟ್ ಗಳು ಕೊಟ್ಟ ಮಾಹಿತಿಯ ಪ್ರಕಾರ ಸೋಲು ಗೆಲುವಿನ ಲೆಕ್ಕಾಚಾರ ಹಾಕುವುದರಲ್ಲಿ ಬ್ಯುಸಿಯಾಗಿವೆ.
ಶಿರಾ, ಆರ್‌ಆರ್ ನಗರ ಬೈ ಎಲೆಕ್ಷನ್ ರಿಸಲ್ಟ್: ಪಕ್ಷದ ಆಂತರಿಕ ವರದಿ ತೆರೆದಿಟ್ಟ ಸಿಟಿ ರವಿ
ಅದರಲ್ಲೂ ಮೂರು ಪಕ್ಷಗಳಿಗೆ ಪ್ರತಿಷ್ಠೆಯಾಗಿರುವ ರಾಜರಾಜೇಶ್ವರಿ ನಗರದಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದ್ದು, ಮೂರು ಪಕ್ಷಗಳ ಸೋಲು-ಗೆಲುವಿಗೆ ಕಾರಣಗಳು ಈ ಕೆಳಗಿನಂತಿವೆ.
ಬಿಜೆಪಿ ಗೆಲುವಿನ ಕಾರಣವಾಗಬಹುದಾದ ಅಂಶಗಳು..
* ಕೋರೋನಾ ಸಂಕಷ್ಟದ ಕಾಲದಲ್ಲಿ ಮತದಾರರಿಗೆ ಅಗತ್ಯ ನೆರವು ನೀಡಿರುವುದು..
* ಸಾಂಪ್ರದಾಯಿಕ ಬಿಜೆಪಿ ಮತಗಳನ್ನು ಕ್ರೋಢಿಕರಣ ಮಾಡುವಲ್ಲಿ ಯಶಸ್ವಿಯಾಗಿದ್ದು..
* ಮುನಿಸಿಕೊಂಡಿದ್ದ ಎಲ್ಲಾ ಕಾರ್ಯಕರ್ತರು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು..
* ಆರ್ ಅಶೋಕ್ ನಾಯಕತ್ವದಲ್ಲಿ ಒಕ್ಕಲಿಗ ಮತಗಳನ್ನು ಪಡೆಯಲು ರಣತಂತ್ರ ರೂಪಿಸಿದ್ದು..
* ನಿಗದಿತ ಸಮಯದಲ್ಲಿ ಪ್ರಚಾರ ಆರಂಭಿಸಿ, ಅಭಿವೃದ್ಧಿಯ ಹೆಸರಿನಲ್ಲಿ ಮತಯಾಚನೆ ಮಾಡಿದ್ದು..
ಸೋಲಿಗೆ ಕಾರಣವಾಗಬಹುದಾದ ಅಂಶಗಳು..
* ತುಳಸಿ ಮುನಿರಾಜುಗೌಡ ಬೆಂಬಲಿಗರು ಮುನಿರತ್ನ ಅವರನ್ನು ಬೆಂಬಲಿಸಲು ನಿರಾಕರಿಸಿದ್ದು..
* ಮತದಾರರಿಗೆ ಕಮಲದ ಚಿಹ್ನೆಯನ್ನು ಸರಿಯಾಗಿ ಮನವರಿಕೆ ಮಾಡುವಲ್ಲಿ ವಿಫಲವಾಗಿದ್ದು..
* ಸರಕಾರದ ಭದ್ರತೆಯ ಮೇಲೆ ಪರಿಣಾಮ ಬೀರದ ಚುನಾವಣೆ ಅಂತ ಮತದಾರರ ನಡುವೆ ಚರ್ಚೆ ನಡೆದಿದ್ದು..
* ಒಕ್ಕಲಿಗ ಮತಗಳು ಹೆಚ್ಚಿರುವ ಕ್ಷೇತ್ರದ ದಕ್ಷಿಣ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರ ಮಾಡದಿರುವುದು..
* ಮಹಿಳಾ ಮತಗಳು ನಿರೀಕ್ಷಿತ ಪ್ರಮಾಣದಲ್ಲಿ ಪಕ್ಷಕ್ಕೆ ಸೆಳೆಯುವಲ್ಲಿ ನಾಯಕರು ವಿಫಲವಾಗಿದ್ದು..
ಕಾಂಗ್ರೆಸ್ ಗೆಲುವಿಗೆ ಕಾರಣವಾಗಬಹುದಾದ ಅಂಶಗಳು...
* ಡಿಕೆಶಿಗೆ ರಾಜಕೀಯ ಶಕ್ತಿ ನೀಡಲು ಒಕ್ಕಲಿಗ ಸಮೂದಾಯದ ಮತಗಳು ಕ್ರೋಢಿಕರಣವಾಗಿರುವುದು..
* ಉತ್ತಮ ವಿದ್ಯಾರ್ಹತೆಯ ಕುಸುಮಾ ಮೇಲಿನ ಅನುಕಂಪ ಮತ್ತು ಮಹಿಳಾ ಮತದಾರರ ಮತ ವರ್ಗಾವಣೆ..
* ಕಾಂಗ್ರೆಸ್ ನಾಯಕರು ಪಿರಿಮಿಡ್ ರೀತಿಯಲ್ಲಿ ವಿವಿಧ ಹಂತಗಳಲ್ಲಿ ಸಾಮೂಹಿಕ ಯತ್ನ..
* ಕುರುಬ ಮತ್ತು ಮುಸ್ಲಿಂ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದು..
* ಮಧ್ಯಮ ವರ್ಗದ ಬಿಜೆಪಿಯ ಸಾಂಪ್ರದಾಯಿಕ ಮತಗಳು ವರ್ಗಾವಣೆಯಾಗಿರುವುದು..
ಕಾಂಗ್ರೆಸ್ ಸೋಲಿಗೆ ಕಾರಣವಾಗಬಹುದಾದ ಅಂಶಗಳು...
* ಕೋರೋನಾ ಸಂಕಷ್ಟದ ಕಾಲದಲ್ಲಿ ಕಾಂಗ್ರೆಸ್ ನಿಂದ ಮತದಾರರಿಗೆ ನೆರವಾಗದಿರುವುದು..
* ಕ್ಷೇತ್ರದಲ್ಲಿ ತಳಮಟ್ಟದ ಕಾರ್ಯಕರ್ತರು ಚುನಾವಣೆ ಮುನ್ನೆಡೆಸಲು ಲಭ್ಯವಾಗದಿರುವುದು..
* ಮೇಲ್ನೋಟಕ್ಕೆ ನಾಯಕರ ಮಧ್ಯೆ ಹೊಂದಾಣಿಕೆಯಿದ್ದರೂ, ಒಳಗೊಳಗೆ ನಾಯಕತ್ವದ ಹೋರಾಟ..
* ಟಿಕೆಟ್ ವಂಚಿತ ತುಳಸಿ ಮುನಿರಾಜುಗೌಡ ಬೆಂಬಲಿಗರು ಪಕ್ಷದ ಆದೇಶಕ್ಕೆ ತಲೆಬಾಗಿ ಕೆಲಸ ಮಾಡಿದ್ದು..
* ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪರಿಚಯ ಮಾಡಲು ಸೂಕ್ತ ಸಮಯಾವಕಾಶ ಸಿಗದಿರುವುದು...
ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಕಾರಣವಾಗುವ ಅಂಶಗಳು..
* ಪ್ರಬಲ ಒಕ್ಕಲಿಗ ಸಮೂದಾಯ ಇನ್ನೂ ಒಗ್ಗಟ್ಟಾಗಿ ದೇವೆಗೌಡರ ಪರವಾಗಿ ನಿಂತಿದ್ದು..
* ಹೊರವಲಯದ ಪ್ರದೇಶಗಳನ್ನು ಬಿಬಿಎಂಪಿಗೆ ಸೇರಿಸಿ ಮೂಲಭೂತ ಸೌಲಭ್ಯ ನೀಡಿರುವುದು..
* ಸಿಎಂ ಕುಮಾರಸ್ವಾಮಿ ಅವರ ಜನಪ್ರಿಯ ಸಾಲಮನ್ನಾದಂತಹ ಕಾರ್ಯಕ್ರಮ ಕೈಹಿಡಿದಿದ್ದು..
* ಸಾಂಪ್ರದಾಯಿಕ ಮತಗಳ ಜೊತೆಗೆ ಬಿಜೆಪಿಯ ಅತೃಪ್ತರ ಬೆಂಬಲ ವರ್ಗಾವಣೆಯಾಗಿದ್ದು..
* ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸುವ ನಿರ್ಧಾರಕ್ಕೆ ಬಂದ ಮಧ್ಯಮ ವರ್ಗದ ಮತದಾರ...
ಜೆಡಿಎಸ್ ಸೋಲಿಗೆ ಕಾರಣವಾಗಬಹುದಾದ ಅಂಶಗಳು.
* ಸೂಕ್ತ ಅಭ್ಯರ್ಥಿಯನ್ನು ಹುಡುಕಾಟ ಮಾಡುವಲ್ಲಿ ವರಿಷ್ಟರು ತಡವರಿಸಿದ್ದು..
* ಸಾಂಪ್ರದಾಯಿಕ ಒಕ್ಕಲಿಗ ಮತಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು..
* ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾರ್ಯಕರ್ತರು, ಮುಖಂಡರಿಗೆ ಸೂಕ್ತ ಸ್ಥಾನಮಾನ ಸಿಗದಿರುವುದು.
* ಹಿಂದೆ ಅಭ್ಯರ್ಥಿಯಾಗಿದ್ದ ಹನುಮಂತರಾಯಪ್ಪ ಜೊತೆಗೆ ಮುಖಂಡರ ಸಾಮೂಹಿಕ ಪಕ್ಷಾಂತರ..
* ಕರಾರುವಕ್ಕಾದ ಪ್ರಚಾರ, ಮತದಾರದಾರ ಓಲೈಕೆಯಲ್ಲಿ ಜೆಡಿಎಸ್ ನಾಯಕರು ವಿಫಲವಾಗಿದ್ದು...