Asianet Suvarna News Asianet Suvarna News

ಮಳೆ: ಜೆಡಿಎಸ್ ಪಂಚರತ್ನ ರಥಯಾತ್ರೆ ಮುಂದೂಡಿಕೆ

  • ಮಳೆಯಿಂದ ಪಂಚರತ್ನ ಸಮಾವೇಶ ರದ್ದು
  • ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದ 2 ಲಕ್ಷ ಜನರಿಗೆ ಊಟ, ಆಸನ ವ್ಯವಸ್ಥೆ ವ್ಯರ್ಥ
heavy rain Postponement of JDS Pancharat Rath Yatra rav
Author
First Published Nov 2, 2022, 4:00 AM IST

ಮುಳಬಾಗಿಲು (ನ.1) : ನಗರದ ವರವಲಯದ ರಾಷ್ಟ್ರೀಯ ಹೆದ್ದಾರಿ ಮದರಸ ಬಳಿಯ ಪಕ್ಕದಲ್ಲಿನ ವಿಶಾಲವಾದ ಪ್ರದೇಶದಲ್ಲಿ ಜೆಡಿಎಸ್‌ನ ಪಂಚರತ್ನ ಯಾತ್ರೆ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಆಯೋಜನೆ ಮಾಡಿಕೊಳ್ಳಲಾಗಿತ್ತು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಅಂದರೆ ಮಂಗಳವಾರ ಮಧ್ಯಾಹ್ನದಿಂದ ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿದೆ.

JDS Pancharatna Yatra: ಇಂದಿನಿಂದ ಜೆಡಿಎಸ್‌ ರಥಯಾತ್ರೆ: ಕೋಲಾರದ ಕುರುಡುಮಲೆಯಿಂದ ಆರಂಭ

ಮಾಜಿ ಪ್ರಧಾನಮಂತ್ರಿ ಹೆಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಮತ್ತು ಮುಳಬಾಗಿಲಿನ ಜೆಡಿಎಸ್‌ ಅಭ್ಯರ್ಥಿ ಹಾಗೂ ಕೋರ್‌ ಕಮಿಟಿ ಸದಸ್ಯ ಸಮೃದ್ಧಿ ಮಂಜುನಾಥ್‌ ತಾಲ್ಲೂಕಿನ ಪುರಾಣ ಪ್ರಸಿದ್ಧ ವಿನಾಯಕ ದೇವಾಲಯದಲ್ಲಿ ಪಂಚರತ್ನ ರಥ ಯಾತ್ರೆಗೆ ಪೂಜೆಸಲ್ಲಿಸಿದ ನಂತರ ಆಂಜನೇಯಸ್ವಾಮಿ ಮತ್ತು ಹೈದರವಲ್ಲಿ ದರ್ಗಾಗೆ ಭೇಟಿನೀಡಿ ಪೂಜೆ ಸಲ್ಲಿಸಿದರು.

ಪಂಚರತ್ನ ರಥಯಾತ್ರೆಗೆ ಆಗಮಿಸುವ ಸುಮಾರು 2 ಲಕ್ಷ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. 1,25,000 ಹಾಸನಗಳು, ಎಂಟು ಕಡೆಗಳಲ್ಲಿ ವಾಹನ ನಿಲುಗಡೆ ಸ್ಥಳಗಳು, 25 ಕಡೆ ಊಟ ವಿತರಣೆ ಕೌಂಟರ್‌ಗಳು ತೆರೆಯಲಾಗಿತ್ತು. ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದರೂ ವರುಣನ ಆರ್ಭಟದಿಂದ ಕಾರ್ಯಕ್ರಮಕ್ಕೆ ಬಂದಿದ್ದ ಕಾರ್ಯಕರ್ತರು ದಿಕ್ಕಾಪಾಲಾಗಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತಾವು ಬಂದ ಬಸ್ಸುಗಳಲ್ಲಿ ತಮ್ಮ ತಮ್ಮ ಊರುಗಳಿಗೆ ಮಳೆಯಲ್ಲಿ ನೆನೆಯುತ್ತಾ ಮರಳಿದ ಸನ್ನಿವೇಶಗಳು ಸಾಮಾನ್ಯವಾಗಿತ್ತು.

 

ಜೆಡಿಎಸ್‌ ಪಂಚರತ್ನ ಯಾತ್ರೆಗೆ ಸಾಂಕೇತಿಕ ಚಾಲನೆ: 2023ಕ್ಕೆ ಅಧಿಕಾರ, ಎಚ್‌ಡಿಕೆ

ಕಾರ್ಯಕ್ರಮ ನಡೆಯುವ ಸ್ಥಳದಿಂದ ಸುಮಾರು 2ಕಿ.ಮೀ ದೂರದ ಕೆ.ಜಿ.ಎಫ್‌ ರಸ್ತೆ, ವಿರೂಪಾಕ್ಷಿ ರಸ್ತೆ, ಬಡಮಾಕಾನ್‌ ಮಸೀದಿ ಹಾಗೂ ಹೆದ್ದಾರಿ ಸುತ್ತಮುತ್ತಲು ಬಸ್‌ ಗಳನ್ನು ನಿಲುಗಡೆ ಮಾಡಲಾಗಿತ್ತು. 32 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ವಿಶಾಲವಾದ ಪ್ರದೇಶದಲ್ಲಿ ಪಂಚರತ್ನ ರಥ ಯಾತ್ರೆ ವೇದಿಕೆ ಕಾರ್ಯಕ್ರಮಕ್ಕೆ ಆಸನಗಳನ್ನು ಹಾಕಲಾಗಿತ್ತು. ಲಕ್ಷಾಂತರ ಹಣವನ್ನು ಖರ್ಚುಮಾಡಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಮಳೆಯ ಪ್ರಭಾವದಿಂದ ಕಾರ್ಯಕ್ರಮ ಮುಂದೂಡಬೇಕಾಯಿತು.

Follow Us:
Download App:
  • android
  • ios