ತೆರಿಗೆ ವಿಚಾರದಲ್ಲಿ ರಾಜ್ಯಕ್ಕಾದ ಅನ್ಯಾಯದ ಸತ್ಯಾಂಶವನ್ನ ಪೂಂಜಾ ಒಪ್ಪಿಕೊಳ್ಳಬೇಕು: ಸಚಿವ ದಿನೇಶ್ ಗುಂಡೂರಾವ್
ಹರೀಶ್ ಪೂಂಜಾ ಉದ್ದೇಶ ಬೇರೆ ಇದೆ, ನಾವು ರಾಜ್ಯಕ್ಕೆ ಅನ್ಯಾಯ ಆಗ್ತಾ ಇದೆ ಅಂತಿದೀವಿ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ 'ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು' ಅಭಿಯಾನಕ್ಕೆ ಕರೆ ವಿಚಾರವಾಗಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರು (ಫೆ.09): ಹರೀಶ್ ಪೂಂಜಾ ಉದ್ದೇಶ ಬೇರೆ ಇದೆ, ನಾವು ರಾಜ್ಯಕ್ಕೆ ಅನ್ಯಾಯ ಆಗ್ತಾ ಇದೆ ಅಂತಿದೀವಿ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ 'ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು' ಅಭಿಯಾನಕ್ಕೆ ಕರೆ ವಿಚಾರವಾಗಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ರಾಜ್ಯಕ್ಕೆ ಅನ್ಯಾಯ ಆಗೋದ್ರಲ್ಲಿ ಸತ್ಯಾಂಶವನ್ನ ಹರೀಶ್ ಪೂಂಜಾ ಒಪ್ಪಿಕೊಳ್ಳಬೇಕು. ಅದನ್ನ ಒಪ್ಪಿಕೊಳ್ಳದೇ ಮೊಂಡುವಾದ ಪ್ರದರ್ಶನ ಮಾಡಿದ್ರೆ ಏನ್ ಹೇಳೋದು. ರಾಜ್ಯಕ್ಕೆ ಬರೋ ತೆರಿಗೆ ಪ್ರಮಾಣದಲ್ಲಿ ಯಾವುದೇ ವೃದ್ದಿಯಾಗಿಲ್ಲ.
ಇದು ರಾಜ್ಯಕ್ಕೆ ಅನ್ಯಾಯ, ಆ ವಿಚಾರ ಪೂಂಜಾ ಮಾತನಾಡಬೇಕು. ಇದರಲ್ಲೂ ಅವರು ಜನರನ್ನು ಒಡೀಬೇಕಂದ್ರೆ ಇದು ದುರ್ದೈವ. ಇವರದ್ದೆಲ್ಲಾ ಇದೇ ಕುತಂತ್ರ, ಧರ್ಮದ ಹೆಸರಿನಲ್ಲಿ ಅನ್ಯಾಯದ ಕೆಲಸ ಮಾಡ್ತಾ ಇದಾರೆ. ಸಿಎಂ ಅರೆಸ್ಟ್ ಮಾಡೋದು, ವಿರೋಧ ಪಕ್ಷಕ್ಕೆ ತೊಂದರೆ ಕೊಡೋದು ಮಾಡ್ತಾ ಇದಾರೆ. ಸ್ವಯತ್ತ ಸಂಸ್ಥೆಯ ಅಧಿಕಾರಿಗಳು ಕೂಡ ಇವರು ಹೇಳಿದಂತಿದಾರೆ. ಪತ್ರಕರ್ತರ ವಿರುದ್ದವೂ ಜೈಲಿಗೆ ಹಾಕಿಸೋ ಕೆಲಸ ಆಗ್ತಿದೆ. ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಇದು ಎಂದರು.
ರಾಜ್ಯವನ್ನು ಲೂಟಿ ಮಾಡಲು ಹೊರಟ ಸಿದ್ದರಾಮಯ್ಯ: ಅನಂತಕುಮಾರ ಹೆಗಡೆ ಆರೋಪ
ಕೆಂಪಣ್ಣರ ವಿಷಯ ನಿಜವಾಗಿದ್ರೆ ಬಂದು ಸಿಎಂಗೆ ಹೇಳಬಹುದು: ಕಾಂಗ್ರೆಸ್ ಸರ್ಕಾರದ ವಿರುದ್ದ ಕೆಂಪಣ್ಣ 40% ಆರೋಪ ವಿಚಾರವಾಗಿ ಮಾತನಾಡಿದ ದಿನೇಶ್ ಗುಂಡೂರಾವ್ ನಮ್ಮ ಸರ್ಕಾರ ಬದ್ದತೆ ಮತ್ತು ಪ್ರಾಮಾಣಿಕತೆ ಕೆಲಸ ಮಾಡ್ತಿದೆ. ಕೆಂಪಣ್ಣರ ವಿಷಯ ನಿಜವಾಗಿದ್ರೆ ಬಂದು ಸಿಎಂಗೆ ಹೇಳಬಹುದು. ಅವರು ಯಾವ ವಿಚಾರ ಎಲ್ಲಿ, ಏನಾಗ್ತಿದೆ ಅಂತ ಸ್ಪಷ್ಟವಾಗಿ ಹೇಳಲಿ. ನನ್ನ ಇಲಾಖೆಯಲ್ಲಿ ಆಗ್ತಿದ್ರೆ ನಾನು ತನಿಖೆ ಮಾಡಿಸ್ತೇನೆ. ಕಳೆದ ಬಾರಿ ಅವರು ಅನೇಕ ವಿಷಯ ಪ್ರಸ್ತಾಪ ಮಾಡಿದ್ರು. ಅದರಿಂದ ನಾವು ಅವರ ಆರೋಪಕ್ಕೆ ತನಿಖೆ ಮಾಡಿಸ್ತಾ ಇದೀವಿ. ಅದೇ ರೀತಿ ಇವತ್ತು ಇದ್ದರೂ ಕ್ರಮ ತೆಗೊಳ್ಳೊಣ. ಭ್ರಷ್ಟಾಚಾರಕ್ಕೆ ಯಾವುದೇ ಸಹನೆ ಇರಬಾರದು.ಯಾರದ್ರೂ ನಮ್ಮಲ್ಲಿ ಮಾಡೋ ದಾಖಲೆ ಇದ್ರೆ ತನಿಖೆ ಮಾಡಿಸೋಣ ಎಂದು ದಿನೇಶ್ ಹೇಳಿದರು.