ರಾಜ್ಯವನ್ನು ಲೂಟಿ ಮಾಡಲು ಹೊರಟ ಸಿದ್ದರಾಮಯ್ಯ: ಅನಂತಕುಮಾರ ಹೆಗಡೆ ಆರೋಪ
ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಮ ರಾಜ್ಯ ಮಾಡುವ ಕಲ್ಪನೆಯೊಂದಿಗೆ ಆಡಳಿತ ನಡೆಸುತ್ತಿದ್ದರೆ ಇತ್ತ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾವಣ ರಾಜ್ಯ ಮಾಡಲು ಹೊರಟಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಮತ್ತೆ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ.
ಕಾರವಾರ (ಫೆ.09): ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಮ ರಾಜ್ಯ ಮಾಡುವ ಕಲ್ಪನೆಯೊಂದಿಗೆ ಆಡಳಿತ ನಡೆಸುತ್ತಿದ್ದರೆ ಇತ್ತ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾವಣ ರಾಜ್ಯ ಮಾಡಲು ಹೊರಟಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಮತ್ತೆ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯ ಸರ್ಕಾರ ದಿನ ಬೆಳಗಾದರೆ ಒಂದಲ್ಲ ಒಂದು ದರವನ್ನು ಹೆಚ್ಚಿಸುವುದು ವಾಡಿಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಸಾರ್ವಜನಿಕರನ್ನು ಹಾಗೂ ಬಡವರನ್ನು ಹೇಗೆ ಲೂಟಿ ಮಾಡುತ್ತಿದೆ ಎಂಬುದನ್ನು ಸಾರ್ವಜನಿಕರೇ ಪರಾಮರ್ಶಿಸಿ ನೋಡಿ ಎಂದಿರುವ ಹೆಗಡೆ, ಸ್ಟಾಂಪ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಗೆಜೆಟ್ ಅಧಿಸೂಚನೆ ಹಾಗೂ ದರಪಟ್ಟಿಯ ದಾಖಲೆಯನ್ನು ಪತ್ರಿಕಾ ಪ್ರಕಟಣೆಯ ಮೂಲಕ ನೀಡಿದ್ದಾರೆ.
ರಾಷ್ಟ್ರಪತಿ ಬಗ್ಗೆ ಸಿಎಂ ಹೇಳಿಕೆಗೆ ಖಂಡನೆ: ಈ ಹಿಂದ ಸಂಸದ ಅನಂತಕುಮಾರ ಹೆಗಡೆ ಮುಖ್ಯಮಂತ್ರಿಗೆ ಅವರದೇ ಭಾಷೆಯಲ್ಲಿ ಉತ್ತರ ಕೊಟ್ಟಾಗ ಇಡೀ ಕಾಂಗ್ರೆಸ್ ಪಾಳಯ ತಿರುಗಿ ಬಿದ್ದಿತ್ತಿತ್ತು. ಇದೀಗ ಸಾರ್ವಜನಿಕರ ಸಭೆಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನೇ ಏಕವಚನದಲ್ಲಿ ಕರೆದಿದ್ದಾರೆ. ಈಗ ಕಾಂಗ್ರೆಸ್ಸಿಗರ ಕಿವಿ ಕಿವುಡಾಗಿದೆಯೇ? ಆಗ ಗಲ್ಲಿ-ಗಲ್ಲಿಗಳಲ್ಲಿ ಮೆರವಣಿಗೆ ಹೊರಡಿಸಿ ಅನಂತಕುಮಾರ ರಾಜೀನಾಮೆಗೆ ಆಗ್ರಹಿಸಿದ್ದವರು ಈಗ ಎಲ್ಲಿ ಅಡಗಿ ಕುಳಿತಿದ್ದಾರೆ ಎಂದು ಯಲ್ಲಾಪುರ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಪ್ರಶ್ನಿಸಿದರು.
ಫುಟ್‌ಪಾತ್‌ನಲ್ಲಿರುವ ಅನಾಥ ವಾಹನಗಳ ಹರಾಜು: ಹೈಕೋರ್ಟ್ ಸೂಚನೆಯಲ್ಲೇನಿದೆ?
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೇರೊಬ್ಬರನ್ನು ಏಕವಚನದಲ್ಲಿ ಹಂಗಿಸುವ ಮನೋಭಾವ ಸಿದ್ದರಾಮಯ್ಯಗೆ ಹೊಸತೇನೂ ಅಲ್ಲ. ಇದಕ್ಕೂ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲಾಯಕ್ ಎಂದು ಸಂಬೋಧಿಸಿದ್ದರು. ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಅವರನ್ನೂ ಏಕವಚನದಲ್ಲಿ ಹಂಗಿಸಿದ್ದರು. ಆಗ ಈ ಕಾಂಗ್ರೆಸ್ಸಿಗರಿಗೆ ಸಿದ್ದರಾಮಯ್ಯರದು ಅಸಭ್ಯ, ಅಸಂಸ್ಕ್ರತ ನಡವಳಿಕೆ ಎಂದು ಅನಿಸಿರಲೇ ಇಲ್ಲ. ಇವರ ಗುಲಾಮಿತನದ ಬದುಕಿನ ಬಗೆಗೆ ಅಸಹ್ಯ ಹುಟ್ಟಿದೆ. ಈಗ ದೇಶದ ಪ್ರಥಮ ಪ್ರಜೆ, ಅದರಲ್ಲೂ ಓರ್ವ ಆದಿವಾಸಿ ಮಹಿಳೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನೇ ಸಿದ್ದರಾಮಯ್ಯ ಹೀಗೆಳೆದು ಮಾತನಾಡಿದ್ದಾರೆ ಎಂದರು.