Asianet Suvarna News Asianet Suvarna News

ಅವರು ಬೇಗ ಸಚಿವರಾಗಲಿ: ರಮೇಶ್‌ಗೆ ಸತೀಶ್‌ ಟಾಂಗ್‌!

ಅವರು ಬೇಗ ಸಚಿವರಾಗಲಿ: ರಮೇಶ್‌ಗೆ ಸತೀಶ್‌ ಟಾಂಗ್‌| ಕೆಲವರು ಒಂದು ವರ್ಷದಿಂದ ಸಚಿವರಾಗಲು ಕಾಯುತ್ತಿದ್ದಾರೆ

He May Become Minister Soon Congress Leader Satish Jarkiholi taunts At Ramesh Jarkiholi
Author
Bangalore, First Published Jan 20, 2020, 7:41 AM IST
  • Facebook
  • Twitter
  • Whatsapp

ಮೈಸೂರು[ಜ.20]: ಕೆಲವರು ಒಂದು ವರ್ಷದಿಂದ ಸಚಿವರಾಗಲು ಕಾಯುತ್ತಿದ್ದಾರೆ. ಅವರು ಬೇಗ ಸಚಿವರಾದರೆ ಒಳ್ಳೆಯದು ಎಂದು ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಹೇಳುವ ಮೂಲಕ ತಮ್ಮ ಸಹೋದರ ರಮೇಶ್‌ ಜಾರಕಿಹೊಳಿಗೆ ಟಾಂಗ್‌ ನೀಡಿದ್ದಾರೆ.

ಮೊದಲೇ ಮಾರಕ ಪರಿಣಾಮದ ಬಗ್ಗೆ ಎಚ್ಚರಿಸಿದ್ದೆ : ಕೈ ಮಾಜಿ ಶಾಸಕ

ಮೈಸೂರಿನಲ್ಲಿ ಭಾನವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಒಂದು ವರ್ಷದಿಂದ ಸಚಿವರಾಗಲು ಕಾಯುತ್ತಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬಂದ ದಿನದಿಂದಲೂ ಸರ್ಕಾರ ಬೀಳಿಸಿ ಸಚಿವರಾಗಲು ಕಾಯುತ್ತಿದ್ದಾರೆ. ಅವರಿಗೆ ಈ ಪರಿಸ್ಥಿತಿ ಬರುತ್ತದೆ ಎಂದು ಮೊದಲೇ ಹೇಳಿದ್ದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿದೇಶದಿಂದ ಬಂದ ಕೂಡಲೇ ಅವರ ಆಸೆ ಈಡೇರಿಸಲಿ ಎಂದರು.

ಕೆಪಿಸಿಸಿಗೆ ನಾಲ್ಕು ಮಂದಿ ಕಾರ್ಯಾಧ್ಯಕ್ಷರನ್ನು ನೇಮಿಸುವ ಕುರಿತು ಚಿಂತನೆ ನಡೆಸಲಾಗಿದೆ. ಜಾತಿವಾರು ಮತ್ತು ಪ್ರದೇಶವಾರು ಸಮತೋಲನ ಕಾಪಾಡಿಕೊಳ್ಳಲು ಈ ಚಿಂತನೆ ನಡೆದಿದೆ. ದೆಹಲಿ ಚುನಾವಣೆ ಸಮೀಪಿಸಿರುವುದರಿಂದ ವಿಳಂಬವಾಗಿದೆ. ಕಾಂಗ್ರೆಸ್‌ನಲ್ಲಿ ಮೂಲ ಮತ್ತು ವಲಸಿಗರೆಂಬ ಗುಂಪು ಇಲ್ಲ. ನಾವು ಪಕ್ಷ ಸೇರಿ 10 ವರ್ಷವಾಗಿದೆ. ಶಾಸಕಾಂಗ ಪಕ್ಷದ ನಾಯಕರಾದವರೇ, ವಿಪಕ್ಷ ನಾಯಕರಾಗಿರಲಿ ಎಂದು ಹೇಳಿದ್ದೇನೆ ಎಂದರು.

ಜಾರಕಿಹೊಳಿ ವಿರುದ್ಧ ಹೋರಾಟ ನಿಲ್ಲಲ್ಲ : ಪೂಜಾರಿ

Follow Us:
Download App:
  • android
  • ios