ತಾಕತ್ತಿದ್ದರೆ ರೈತರ ಸಾಲ ಮನ್ನಾ ಮಾಡಲಿ: ಎಚ್.ಡಿ.ರೇವಣ್ಣ
ತಾಕತ್ತಿದ್ದರೆ ಡಬಲ್ ಇಂಜಿನ್ ಸರ್ಕಾರವು ರೈತರ ಸಂಪೂರ್ಣ ಸಾಲಮನ್ನಾ ಮಾಡಿ ತೋರಿಸಲಿ. ನಿಮ್ಮ ಕೈಲಿ ಆಗದಿದ್ದರೆ 2023ಕ್ಕೆ ಈ ಕೆಲಸವನ್ನು ನಾವು ಮಾಡೇ ತೋರಿಸುತ್ತೇವೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಆಲೂರು (ಸೆ.05): ಪ್ರಸಕ್ತ ವರ್ಷ ಆಲೂರು-ಸಕಲೇಶಪುರ ತಾಲೂಕುಗಳಲ್ಲಿ ಸುರಿದ ಮಳೆಯನ್ನು ನಾವು ಹಿಂದೆಂದೂ ನೋಡಿರಲಿಲ್ಲ. ಈ ಬಾರಿ ಸುರಿದ ಮಳೆಗೆ ರೈತರು ಬೆಳೆದ ಭತ್ತ, ಕಾಫಿ, ಮೆಣಸು, ಏಲಕ್ಕಿ, ಜೋಳ, ರಾಗಿ ಸಂಪೂರ್ಣ ನಾಶವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬೆಳೆನಷ್ಟಕ್ಕೆ ಸಂಪೂರ್ಣ ಪರಿಹಾರ ನೀಡಬೇಕು. ಅಲ್ಲದೇ, ತಾಕತ್ತಿದ್ದರೆ ಡಬಲ್ ಇಂಜಿನ್ ಸರ್ಕಾರವು ರೈತರ ಸಂಪೂರ್ಣ ಸಾಲಮನ್ನಾ ಮಾಡಿ ತೋರಿಸಲಿ. ನಿಮ್ಮ ಕೈಲಿ ಆಗದಿದ್ದರೆ 2023ಕ್ಕೆ ಈ ಕೆಲಸವನ್ನು ನಾವು ಮಾಡೇ ತೋರಿಸುತ್ತೇವೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಜನ ಸಾಮಾನ್ಯರ ರಕ್ತವನ್ನು ಹೀರುತ್ತಿದ್ದು, ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದಕ್ಕೆ ಸಾಕ್ಷಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಈ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿ ರಾಜ್ಯ ಸರ್ಕಾರದಲ್ಲಿ 40% ಬಿಬಿಎಂಪಿಯಲ್ಲಿ 50% ಕಮಿಷನ್ ಸರ್ಕಾರ ನಡೆಯುತ್ತಿದೆ ಎಂದರು.
ಲೂಟಿ ಬಿಟ್ಟು ತಾಪಂ, ಜಿಪಂ ಚುನಾವಣೆ ನಡೆಸಿ; ಶಾಸಕ ಪ್ರೀತಂ ಗೌಡಗೆ ರೇವಣ್ಣ ಟಾಂಗ್
ಈ ಭಾಗದ ಆನೆ ಹಾವಳಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಲು 2023ರಲ್ಲಿ ನಮ್ಮ ಸರ್ಕಾರ ಬಂದರೆ ಎಷ್ಟುಸಾವಿರ ಕೋಟಿಗಳು ಆದರೂ ಪರವಾಗಿಲ್ಲ ನಾವು ಆನೆ ಕಾರಿಡಾರ್ ಅನ್ನು ಮಾಡೇ ಮಾಡುತ್ತೇವೆ ಇದು ಶತಸಿದ್ಧ ಎಂದ ಅವರು, ಈ ಬಾರಿ ಈ ಕ್ಷೇತ್ರದ ಶಾಸಕ ಎಚ್.ಕೆ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಗೆಲ್ಲಿಸಿದ್ದೇ ಆದರೆ, 2023ರಲ್ಲಿ ನಮ್ಮ ಸರ್ಕಾರದಲ್ಲಿ ಮಂತ್ರಿ ಮಾಡುವುದಾಗಿ ಸಭೆಯಲ್ಲಿದ್ದ ಮುಖಂಡರು, ಕಾರ್ಯಕರ್ತರಿಗೆ ಸಂದೇಶ ನೀಡಿದರು.
ಈ ವೇಳೆ ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಸರ್ಕಾರ ಮತ್ತು ಸರ್ಕಾರದ ಮಂತ್ರಿಗಳೇ ಹೇಳುತ್ತಿದ್ದಾರೆ ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ನೂರಾರು ಕೋಟಿ ಬೆಳೆ ನಷ್ಟವಾಗಿದೆ. ಈ ನಷ್ಟವನ್ನು ಸರ್ಕಾರ ತುಂಬಿಕೊಡಬೇಕು. ಆದರೆ, ಸರ್ಕಾರ ಜಾಣ ಮೌನ ವಹಿಸಿದೆ. ರಾಜ್ಯದ ಬಿಜೆಪಿ ಸರ್ಕಾರವು ಒಂದು ಧರ್ಮದ ಪರವಾಗಿ ಮತ್ತು ಒಂದು ಧರ್ಮದ ವಿರುದ್ಧವಾಗಿ ಜನರನ್ನು ಎತ್ತಿ ಕಟ್ಟಿಕೋಮುಗಲಭೆ ಎಬ್ಬಿಸಲು ಮೂಲ ಕಾರಣವಾಗಿದೆ. ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಂದೇ ಒಂದು ಕೋಮುಗಲಭೆಗಳ ಆಗಿರುವ ಉದಾಹರಣೆಗಳು ಇಲ್ಲ. ಇದಕ್ಕೆ ಕಾರಣ ನಮ್ಮ ಸರ್ಕಾರವು ಜಾತ್ಯತೀತ ನೆಲೆಗಟ್ಟಿನಲ್ಲಿ ಆಡಳಿತ ಮಾಡಿಕೊಂಡು ಸರ್ವಜನಾಂಗದ ಹಿತವನ್ನು ಇಟ್ಟುಕೊಂಡು ಯೋಜನೆಗಳನ್ನು ರೂಪಿಸಿಕೊಂಡು ಬಂದಿದೆ ಎಂದರು.
ಮೈಸೂರು ವಿವಿ ಪರೀಕ್ಷಾ ಶುಲ್ಕ ಏರಿಕೆಗೆ ಆಕ್ರೋಶ: ಹೆಚ್ಚುವರಿ ಶುಲ್ಕ ಕಡಿತಕ್ಕೆ ಆಗ್ರಹ
ಈ ಸಂದರ್ಭದಲ್ಲಿ ತಾಲೂಕು ಜೆ.ಡಿ.ಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಪ.ಪಂ ಅಧ್ಯಕ್ಷೆ ವೇದಾ, ಹಿರಿಯ ಮುಖಂಡರಾದ ಶಂಕರಾಚಾರ್, ಎಂ.ಬಿ. ವಿಜಯ ಕಾಂತ್, ಅಜ್ಜೇಗೌಡ, ತಾಪಂ ಮಾಜಿ ಸದಸ್ಯರಾದ ನಟರಾಜ್ ನಾಕಲಗೂಡು, ಸಿ.ವಿ.ಲಿಂಗರಾಜು, ಕಾಂತರಾಜು, ಪಿ.ಎಲ್.ಲಿಂಗರಾಜು, ಬಸವರಾಜು, ತೌಫಿಕ್, ತಾಲೂಕಿನ ಎಲ್ಲ ಗ್ರಾಪಂ ಅಧ್ಯಕ್ಷರು, ತಾಪಂ ಮಾಜಿ ಸದಸ್ಯರು ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.