ಲೂಟಿ ಬಿಟ್ಟು ತಾಪಂ, ಜಿಪಂ ಚುನಾವಣೆ ನಡೆಸಿ; ಶಾಸಕ ಪ್ರೀತಂ ಗೌಡಗೆ ರೇವಣ್ಣ ಟಾಂಗ್

ಶಾಸಕ ಪ್ರೀತಮ್‌ ಗೌಡರ ಐಡಿಯಲಾಜಿ ಏನು ಅಂತಾ ನನಗೆ ಗೊತ್ತಿಲ್ಲ. ಬಿಜೆಪಿ ಮುಖಂಡನಿಗೆ ಮಾನ ಮರ್ಯಾದೆ ಇದ್ದರೆ ಲೂಟಿ ಮಾಡುವುದನ್ನು ಬಿಟ್ಟು ತಾಕತ್ತಿದ್ದರೆ ಎರಡು ವರ್ಷದಿಂದ ಮುಂದೂಡಲ್ಪಡುತ್ತಿರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಮುಂದಾಗಲಿ ಎಂದು ಜೆಡಿಎಸ್‌ ನಾಯಕ, ಮಾಜಿ ಸಚಿವರೂ ಆದ ಹೆಚ್‌.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

Stop the loot and conduct the elections of TP ZP Says HD Revanna Hasan

ಹಾಸನ (ಸೆ.5) : ಶಾಸಕ ಪ್ರೀತಮ್‌ ಗೌಡರ ಐಡಿಯಲಾಜಿ ಏನು ಅಂತಾ ನನಗೆ ಗೊತ್ತಿಲ್ಲ. ಬಿಜೆಪಿ ಮುಖಂಡನಿಗೆ ಮಾನ ಮರ್ಯಾದೆ ಇದ್ದರೆ ಲೂಟಿ ಮಾಡುವುದನ್ನು ಬಿಟ್ಟು ತಾಕತ್ತಿದ್ದರೆ ಎರಡು ವರ್ಷದಿಂದ ಮುಂದೂಡಲ್ಪಡುತ್ತಿರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಮುಂದಾಗಲಿ ಎಂದು ಜೆಡಿಎಸ್‌ ನಾಯಕ, ಮಾಜಿ ಸಚಿವರೂ ಆದ ಹೆಚ್‌.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಮಾತು ಕೇಳಿದ್ದರೆ ಎಚ್‌ಡಿಕೆ 5 ವರ್ಷ ಸಿಎಂ ಆಗಿರ್ತಿದ್ರು: ರೇವಣ್ಣ

ನಗರದ ಸಂಸದರ ನಿವಾಸದಲ್ಲಿ ಭಾನುವಾರ ಮಾಧ್ಯಮದ ಮುಂದೆ ಮಾತನಾಡಿದ ಅವರು, ನನಗೆ ಯಾವ ಐಡಿಯಾಲಜಿ(Ideology) ಗೊತ್ತಿಲ್ಲದೆ ಇರುವುದರಿಂದ ಹಾಸನ ನಗರದಲ್ಲಿ ಇಡೀ ಏಷ್ಯಾ ಖಂಡದಲ್ಲೇ ನಂಬರ್‌ ಒನ್‌ ಬಸ್‌ ನಿಲ್ದಾಣ ಮಾಡಿದ್ದೇನೆ. 200 ಕೋಟಿ ರು. ವೆಚ್ಚದಲ್ಲಿ ಜಿಲ್ಲಾಸ್ಪತ್ರೆ, ಕೋರ್ಟ್,, ಚನ್ನಪಟ್ಟಣದಲ್ಲಿ ಹೊಸ ಬಡಾವಣೆ ಮಾಡಿ ಹಂಚಿದ್ದೇನೆ. ಐಡಿಯಾಲಜಿ ಇಲ್ಲದಿದ್ದರೆ ಚನ್ನಪಟ್ಟಣ(Channapattana) ಕೆರೆ ಮೇಲೆ ಬಸ್‌ ಓಡಾಡುವಂತೆ ಮಾಡಲಾಗುತ್ತಿತ್ತಾ? ಐಡಿಯಾಲಜಿ ನನಗೆ ಅಷ್ಟುಗೊತ್ತಿಲ್ಲ. ಅವರಿಗೆ ಎಷ್ಟೆಷ್ಟುಎಲ್ಲೆಲ್ಲಿ ಲೂಟಿ ಮಾಡಬೇಕು ಎಂಬ ಐಡಿಯಲಾಜಿ ಚೆನ್ನಾಗಿಯೇ ಇದೆ ಎಂದು ಕಿಡಿಕಾರಿದರು.

ಅವರಿಂದ ನಮಗೆ ಗೌರವವು ಬೇಡ? ಏನೂ ಬೇಡ? ಅಭಿವೃದ್ಧಿ ಕೆಲಸ ಮಾಡಲಿ ಸಾಕು. ಪಂಚಯಾತ್ರೆ ಮಾಡುತ್ತಾರೆ. ಇಂತಹ ಯಾತ್ರೆ ಎಷ್ಟುನೋಡಿಲ್ಲ ನಾನು. ಹಾಸನ ಕ್ಷೇತ್ರದ ಒಳಗೆ ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂಬುದು ಹೈಕಮಾಂಡ್‌ ತೀರ್ಮಾನಿಸಲಿದೆ.

ಪ್ರೀತಂ ಗೌಡ(MLA Preetam Gowda)ರ ಐಡಿಯಲಾಜಿ ಯಾವುದು ಎಂಬುದು ನನಗೆ ಗೊತ್ತಿಲ್ಲ. 2023ರ ಚುನಾವಣೆಯಲ್ಲಿ ಜನ ಅದಕ್ಕೆಲ್ಲಾ ಉತ್ತರ ಕೊಡಲಿದ್ದಾರೆ. ಹಾಸನ ನಗರಕ್ಕೆ ಹತ್ತು ಗ್ರಾಮಗಳನ್ನು ಸೇರ್ಪಡೆಗೊಳಿಸಿದವರು ಯಾರು? ಅ​ಧಿಕಾರಿಗಳು ದುಡ್ಡಿನ ಅಮಲಿನಲ್ಲಿ ಮೆರೆಯುತ್ತಿದ್ದಾರೆ. ಅವರಿಗೆ ದೇವರು ಶಿಕ್ಷೆ ಕೊಡುವ ಕಾಲ ಬರಲಿದೆ ಎಂದು ಎಚ್ಚರಿಕೆ ನೀಡಿದರು.

ಕಳೆದ ಒಂದು ತಿಂಗಳಿಂದ ಹೆಚ್ಚಿನ ಮಳೆ ಬಂದು ಕೋಟ್ಯಂತರ ರು. ನಷ್ಟವಾಗಿದೆ. ಬೇಲೂರು ಸಕಲೇಶಪುರ, ಆಲೂರು ಕಟ್ಟಾಯ ಹೋಬಳಿ ಯಲ್ಲಿ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಪಾರ ಬೆಳೆ ಹಾಗೂ ಮನೆ ಹಾನಿಯಾಗಿದೆ. ಡಿಸಿ ಭೇಟಿ ಮಾಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಿ ಅ​ಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡುವಂತೆ ಮನವಿ ಮಾಡಿದ್ದೇನೆ. ಕೋವಿಡ್‌ ಸಂಕಷ್ಟದಿಂದ ರೈತರು ಇನ್ನೂ ಸುಧಾರಿಸಿಕೊಂಡಿಲ್ಲ. ಬೆನ್ನ ಹಿಂದೆಯೇ ಜಿಲ್ಲೆಯಲ್ಲಿ ಶೇ.80 ರಷ್ಟುಆಲೂಗಡ್ಡೆ ಬೆಳೆ ನಾಶವಾಗಿದೆ. ಆಲೂ ಬಿತ್ತನೆ ಪ್ರಾರಂಭದಿಂದಲೂ ಮಳೆ ಬಂದು ಹಾನಿಯಾಗಿದೆ. ಜೊತೆಗೆ ಶುಂಠಿ ಹಾಗೂ ಮೆಕ್ಕೆ ಜೋಳವು ಹಾನಿಯಾಗಿದೆ. ಕಳೆದ ಹತ್ತಾರು ವರ್ಷದಲ್ಲಿ ಇಂತಹ ಮಳೆಯನ್ನೇ ನಾವು ನೋಡಿಲ್ಲ. ರಸ್ತೆ ರಿಪೇರಿಗೆ ಬಿಡಿಗಾಸು ಹಣ ನೀಡಿಲ್ಲ. ಶಾಲಾ ಕಟ್ಟಡ ಬಿದ್ದು ಹೊಗುವ ಹಂತ ತಲುಪಿವೆ. ಹೊಳೆನರಸೀಪುರ ಕ್ಷೇತ್ರದಲ್ಲಿ 250ಕ್ಕು ಹೆಚ್ಚು ಕಟ್ಟಗಳು ಯಾವಾಗ ಬೇಕಾದರೂ ಬಿದ್ದು ಹೋಗುವ ಸ್ಥಿತಿಯಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದಿನ ಜಿಲ್ಲಾ​ಧಿಕಾರಿ ಅವರು, ಮಳೆಯಿಂದ ಸುಮಾರು 450 ಕೋಟಿ ರು. ನಷ್ಟವಾಗಿದೆ ಎಂದು ವರದಿ ನೀಡಿದ್ದಾರೆ. ಇದುವರೆಗೂ ಒಂದು ರು.ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಈ ಬಾರಿ ಬಹುತೇಕ ಕೆರೆಗಳು ಭರ್ತಿಯಾಗಿವೆ. ಕೆಲವು ಏರಿಗಳು ಒಡೆಯುವ ಆತಂಕದಲ್ಲಿವೆ. ಮೋದಿಯವರು ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡಿ ಸ್ಥಿತಿಗತಿ ಅವಲೋಕನ ಮಾಡಲಿ ಎಂದು ಜಿಲ್ಲೆಗೆ ಆಹ್ವಾನಿಸಿದರು.\

Karnataka Politics: ಬಿಜೆಪಿ ದೂರ ಇಡಲು ಕಾಂಗ್ರೆಸ್‌, ಜೆಡಿಎಸ್‌ ಒಂದಾಗಬೇಕು: ರೇವಣ್ಣ

ಕೂಡಲೆ ಕೇಂದ್ರ ತಂಡವನ್ನು ರಾಜ್ಯಕ್ಕೆ ಕಳುಹಿಸಿ ಅತಿವೃಷ್ಟಿಅವಲೋಕನ ಮಾಡಲಿ. ಪರಿಹಾರ ನೀಡಿ, ರಾಜ್ಯದ ಜನ ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲಿ ಎಂದು ಸಲಹೆ ನೀಡಿದರು. ದೊಡ್ಡ ಹಿಡುವಳಿದಾರರ ಬಗ್ಗೆ ನಾನು ಕೇಳುತ್ತಿಲ್ಲ. ಸಣ್ಣ ಹಿಡುವಳಿದಾರರ ಸಾಲ ಮನ್ನಾ ಮಾಡಲಿ ಎಂದು ಇದೆ ವೇಳೆ ಒತ್ತಾಯಿಸಿದರು. ಸೋಮವಾರ ಬಿ.ಎಂ. ರಸ್ತೆ ಬಳಿ ಇರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಭೆ ಮಧ್ಯಾಹ್ನ ನಡೆಯಲಿದ್ದು, ಈ ವೇಳೆ ಕೆಲ ವಿಚಾರವನ್ನು ಚರ್ಚೆ ಮಾಡುವುದಾಗಿ ತಿಳಿಸಿದರು.

Latest Videos
Follow Us:
Download App:
  • android
  • ios