ಹಾಸನದಲ್ಲಿ ಭವಾನಿ ಬದಲು ಸ್ವತಃ ರೇವಣ್ಣ ಸ್ಪರ್ಧೆ, ಹೊಳೆನರಸೀಪುರದಲ್ಲಿ ರೇವಣ್ಣ ಬದಲು ಭವಾನಿ?

ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌ​ಡರ ಕುಟುಂಬ​ದಲ್ಲಿ ತಿಕ್ಕಾ​ಟಕ್ಕೆ ಕಾರ​ಣ​ವಾ​ಗಿ​ರುವ, ತೀವ್ರ ಕುತೂ​ಹಲ ಮೂಡಿ​ಸಿ​ರುವ ಹಾಸನ ವಿಧಾ​ನ​ಸಭಾ ಕ್ಷೇತ್ರದಿಂದ ಮಾಜಿ ಸಚಿವ, ಹೊಳೆ​ನ​ರ​ಸೀ​ಪುರ ಶಾಸ​ಕ ಎಚ್‌.ಡಿ.​ರೇ​ವ​ಣ್ಣ ಅವರೇ ಕಣ​ಕ್ಕಿಳಿ​ಯುವ ​ಸಾ​ಧ್ಯತೆ ಕುರಿತು ಇದೀಗ ಜೋರಾ​ಗಿ ಚರ್ಚೆ ಶುರು​ವಾ​ಗಿ​ದೆ.

HD Revanna in Hassan Constituency and Bhavani Revanna Competition in Holenarasipura Constituency gvd

ಹಾಸನ (ಫೆ.11): ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌ​ಡರ ಕುಟುಂಬ​ದಲ್ಲಿ ತಿಕ್ಕಾ​ಟಕ್ಕೆ ಕಾರ​ಣ​ವಾ​ಗಿ​ರುವ, ತೀವ್ರ ಕುತೂ​ಹಲ ಮೂಡಿ​ಸಿ​ರುವ ಹಾಸನ ವಿಧಾ​ನ​ಸಭಾ ಕ್ಷೇತ್ರದಿಂದ ಮಾಜಿ ಸಚಿವ, ಹೊಳೆ​ನ​ರ​ಸೀ​ಪುರ ಶಾಸ​ಕ ಎಚ್‌.ಡಿ.​ರೇ​ವ​ಣ್ಣ ಅವರೇ ಕಣ​ಕ್ಕಿಳಿ​ಯುವ ​ಸಾ​ಧ್ಯತೆ ಕುರಿತು ಇದೀಗ ಜೋರಾ​ಗಿ ಚರ್ಚೆ ಶುರು​ವಾ​ಗಿ​ದೆ. ರೇವಣ್ಣ ಅವ​ರನ್ನು ಹಾಸ​ನ​ದಿಂದ ಕಣ​ಕ್ಕಿ​ಳಿಸಿ, ಪತ್ನಿ ಭವಾನಿ ಅವ​ರಿಗೆ ಹೊಳೇ​ನ​ರ​ಸೀ​ಪು​ರ ಕ್ಷೇತ್ರ​ದ ಟಿಕೆಟ್‌ ನೀಡುವ ಮೂಲಕ ಒಂದೇ ಏಟಲ್ಲಿ ಮೂರು ಹಕ್ಕಿ ಹೊಡೆ​ಯುವ ಲೆಕ್ಕಾ​ಚಾ​ರ​ಗಳು ಜೆಡಿ​ಎಸ್‌ನ​ಲ್ಲಿ ನಡೆ​ಯು​ತ್ತಿದೆ ಎಂದು ಹೇಳ​ಲಾ​ಗು​ತ್ತಿ​ದೆ.

ಸ್ವರೂಪ್‌ ಅಥವಾ ಭವಾನಿ ರೇವಣ್ಣ ಇಬ್ಬ​ರಲ್ಲಿ ಯಾರೇ ಒಬ್ಬ​ರಿಗೆ ಟಿಕೆಟ್‌ ನೀಡಿ​ದರೂ ಜೆಡಿ​ಎ​ಸ್‌​ನಲ್ಲಿ ಗುಂಪು​ಗಾ​ರಿಕೆ ನಡೆ​ಯುವ ಸಾಧ್ಯತೆ ಇದೆ. ಅಲ್ಲದೆ, ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಅವರು ಭವಾನಿ ರೇವಣ್ಣ ಅವ​ರ​ನ್ನು ಯಾವುದೇ ಕಾರ​ಣಕ್ಕೂ ಹಾಸನದಲ್ಲಿ ಕಣ​ಕ್ಕಿ​ಳಿ​ಸುವುದಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಸ್ವರೂಪ್‌ ಮನ​ವೊ​ಲಿಸಿ ಖುದ್ದು ರೇವ​ಣ್ಣ ಅವರು ಹಾಸ​ನ​ದಿಂದ ಕಣ​ಕ್ಕಿ​ಳಿ​ದರೆ ಬಣ ಜಗಳ ತಡೆ​ದು ಕೈತ​ಪ್ಪಿ​ರುವ ಹಾಸನ ಕ್ಷೇತ್ರ​ವನ್ನು ಮರು​ವಶ ಮಾಡಿ​ಕೊ​ಳ್ಳ​ಬ​ಹುದು ಮತ್ತು ಗುಂಪು​ಗಾ​ರಿಕೆ ತಡೆ​ಯ​ಬ​ಹುದು, ಅತ್ತ ಮುನಿಸಿಕೊಂಡಿ​ರುವ ಭವಾನಿ ಅವ​ರನ್ನು ಪತಿ​ಯ ಕ್ಷೇತ್ರದಿಂದ ಕಣ​ಕ್ಕಿ​ಳಿಸಿ ಅಸ​ಮಾ​ಧಾನ ಶಮ​ನ​ಗೊ​ಳಿ​ಸ​ಬ​ಹು​ದು ಮತ್ತು ಟಿಕೆಟ್‌ ವಿಚಾ​ರ​ವಾಗಿ ಕುಟುಂಬ​ದಲ್ಲಿ ಎದ್ದಿ​ರು​ವ ಭಿನ್ನ​ಮ​ತಕ್ಕೆ ಬ್ರೇಕ್‌ ಹಾಕ​ಬ​ಹುದು ಎಂಬ ಲೆಕ್ಕಾ​ಚಾರ ಒಳ​ಗೊ​ಳಗೆ ನಡೆ​ಯು​ತ್ತಿದೆ ಎನ್ನ​ಲಾ​ಗಿ​ದೆ.

ಬಿಜೆಪಿ, ಕಾಂಗ್ರೆಸ್‌ ಆಡಳಿತದಲ್ಲಿ ಜನರ ಬದುಕಿನ ಜೊತೆ ಚೆಲ್ಲಾಟ: ಎಚ್‌ಡಿಕೆ

ಗುಂಪು​ಗಾ​ರಿಕೆ ಆತಂಕ: ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ಈಗಾಗಲೇ ಹಾಸನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ಮಹಿಳಾ ಮತದಾರರ ಒಲವು ಭವಾನಿಯವರತ್ತಲೇ ಇದೆ. ಹಾಗೆಂದು ಭವಾನಿಗೆ ಟಿಕೆಟ್‌ ನೀಡಿದರೆ ಸ್ವರೂಪ್‌ ಬೆಂಬಲಿಗರು ಮುನಿಸಿಕೊಂಡು ಚುನಾವಣೆ ಸಂದರ್ಭದಲ್ಲಿ ಉಲ್ಟಾಹೊಡೆಯುವ ಸಾಧ್ಯತೆ ತಳ್ಳಿ​ಹಾ​ಕು​ವಂತಿ​ಲ್ಲ. ಇನ್ನು ಸ್ವರೂಪ್‌ ಅವರ ತಂದೆ ದಿ.ಪ್ರ​ಕಾಶ್‌ ಅವರು ಇದೇ ಕ್ಷೇತ್ರ​ದಲ್ಲಿ ಐದು ಬಾರಿ ಶಾಸ​ಕ​ರಾ​ಗಿ​ದ್ದ​ವ​ರು. ಸ್ವರೂಪ್‌ ಕೂಡ ಜಿ.ಪಂ. ಉಪಾಧ್ಯಕ್ಷರಾಗಿದ್ದವರು. ಅವರ ಬೆನ್ನ ಹಿಂದೆಯೂ ಕಾರ್ಯ​ಕ​ರ್ತರ ಪಡೆ, ಅವರದ್ದೇ ಆದ ವೋಟ್‌ ಬ್ಯಾಂಕ್‌ ಕೂಡ ಇದೆ. ಕುಮಾ​ರ​ಸ್ವಾಮಿ ಅವರ ಭರ​ವಸೆ ನಂಬಿ ಮುಂದಿನ ಚುನಾ​ವ​ಣೆ​ಗೆ ಈಗಾ​ಗಲೇ ಸಾಕಷ್ಟುಪ್ರಚಾ​ರ​ವನ್ನೂ ಅವರು ನಡೆ​ಸಿ​ದ್ದಾರೆ. ಹಾಗೆಂದು ಸ್ವರೂಪ್‌ಗೆ ಟಿಕೆಟ್‌ ನೀಡಿದರೆ ಭವಾನಿ ಬೆಂಬಲಿಗರೂ ಸುಮ್ಮನೆ ಕೂರು​ವುದು ಅನು​ಮಾ​ನ. ಇದ​ರಿಂದ ಪಕ್ಷ​ದಲ್ಲೇ ಗುಂಪು​ಗಾ​ರಿ​ಕೆ ಸೃಷ್ಟಿ​ಯಾಗಿ ದೇವೇ​ಗೌ​ಡರ ಕುಟುಂಬವನ್ನು ಹಿಂದಿ​ನಿಂದಲೂ ಕೆಣ​ಕು​ತ್ತಲೇ ಬಂದಿ​ರುವ ಬಿಜೆಪಿ ಶಾಸಕ ಪ್ರೀತಂಗೌಡರ ಕೈಮೇಲಾ​ಗುವ ತಳ​ಮಳ ಮುಖಂಡ​ರಲ್ಲಿ ನಡೆ​ಯು​ತ್ತಿ​ದೆ.

ರೇವ​ಣ್ಣ ಸ್ಪರ್ಧೆಯೇ ಪರಿ​ಹಾ​ರ: ಈ ಎಲ್ಲಾ ಗೊಂದಲದ ನಡುವೆ ಸ್ವತಃ ರೇವಣ್ಣ ಅವರೇ ಅಭ್ಯ​ರ್ಥಿ​ಯಾ​ದರೆ ಈ ಎಲ್ಲ ಸಮ​ಸ್ಯೆ​ಗ​ಳಿಗೆ ಪರಿಹಾರ ಸಿಗ​ಬ​ಹುದು ಎಂಬ ಲೆಕ್ಕಾ​ಚಾರ ವರಿ​ಷ್ಠರು ಮತ್ತು ಕಾರ್ಯ​ಕ​ರ್ತರ ಮಟ್ಟ​ದಲ್ಲೂ ಇದೀಗ ಶುರು​ವಾ​ಗಿ​ದೆ. ಈ ಹಿನ್ನೆ​ಲೆ​ಯಲ್ಲಿ ನಗರದಲ್ಲಿರುವ ಸಂಸದರ ನಿವಾಸದಲ್ಲಿ ಜೆಡಿ​ಎ​ಸ್‌​ನಿಂದ ಪ್ರತಿನಿತ್ಯ ಸಭೆಗಳು ನಡೆ​ಯು​ತ್ತಿದ್ದು, ಸದ್ದಿ​ಲ್ಲದೆ ಕಾರ್ಯ​ಕ​ರ್ತರ ಅಭಿಪ್ರಾಯ ಸಂಗ್ರ​ಹಿ​ಸುವ ಕೆಲಸ ನಡೆ​ಯು​ತ್ತಿದೆ. ಈಗಾಗಲೇ ರೇವಣ್ಣ ಅವರು ಹೈಕ​ಮಾಂಡ್‌ ಒಪ್ಪಿ​ದರೆ ಹಾಸ​ನ​ದಿಂದ ಸ್ಪರ್ಧಿ​ಸಲು ಸಿದ್ಧ ಎಂದು ಹೇಳಿ​ರು​ವುದು ಇಂಥ ಅನು​ಮಾ​ನ​ವನ್ನು ಮತ್ತಷ್ಟುಪುಷ್ಟೀ​ಕ​ರಿ​ಸು​ತ್ತಿ​ದೆ.

ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್‌ಡಿಕೆ ಅಟ್ಯಾಕ್!

ಹಾಸ​ನ​ದಲ್ಲಿ ಯಾವುದೇ ಕಾರ​ಣಕ್ಕೂ ಭವಾನಿ ರೇವಣ್ಣ ಸ್ಪರ್ಧಿ​ಸ​ಬಾ​ರದು ಎಂದು ನಾನು ಹೇಳಿ​ದ್ದೇನೆ. ಆದರೆ ಹಾಸ​ನ​ದ​ಲ್ಲಿ ಶಾಸ​ಕ ಪ್ರೀತಂ ಗೌಡ ಹಾಕಿರುವ ಸವಾಲನ್ನು ರೇವಣ್ಣ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇನ್ನು ಅಲ್ಲಿಂದ ರೇವಣ್ಣ ಸ್ಪರ್ಧೆ ಕುರಿತು ಮುಂದೆ ಎಲ್ಲರೂ ಸೇರಿ ಸಮನ್ವಯದ ನಿರ್ಣಯ ಕೈಗೊಳ್ಳುತ್ತೇವೆ. ಅದೇ ಸಂದ​ರ್ಭ​ದಲ್ಲಿ ಹೊಳೆನರಸೀಪುರ ಕ್ಷೇತ್ರದ ಟಿಕೆಟ್‌ ಕುರಿತಾಗಿಯೂ ಪರಿಶೀಲಿಸುತ್ತೇ​ವೆ.
- ಎಚ್‌.​ಡಿ.​ಕು​ಮಾ​ರ​ಸ್ವಾಮಿ, ಜೆಡಿಎಸ್‌ ವರಿಷ್ಠ

Latest Videos
Follow Us:
Download App:
  • android
  • ios