ಆ ಹೋಟೆಲ್​ನಲ್ಲಿ ಕುಮಾರಸ್ವಾಮಿ ರಾಸಲೀಲೆ ಮಾಡಿಕೊಂಡಿದ್ದ, ಬಿಜೆಪಿ ನಾಯಕ ಗಂಭೀರ ಆರೋಪ

* ಆ ಹೋಟೆಲ್​ನಲ್ಲಿ ಕುಮಾರಸ್ವಾಮಿ ರಾಸಲೀಲೆ ಮಾಡಿಕೊಂಡಿದ್ದ
*  ಹೋಟೆಲ್​​ನಲ್ಲಿ 14 ತಿಂಗಳು ಇದ್ದರಲ್ಲ, ಎಚ್​ಡಿಕೆ ಬಗ್ಗೆ ಗೊತ್ತಿದೆ
* ಗಂಭೀರ ಆರೋಪ ಮಾಡಿದ ಬಿಜೆಪಿ ಎಂಎಲ್‌ಸಿ ಸಿಪಿ ಯೋಗೇಶ್ವರ್

hd kumaraswamy spent his days in five star hotel Says BJP MLC cp yogeeshwara rbj

ರಾಮನಗರ, (ಮಾ.14): ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ(HD Kumaraswamy) ವಿರುದ್ಧ ಪದೇಪದೆ ವಾಗ್ದಾಳಿ ನಡೆಸುತ್ತಿರುವ ಎಂಎಲ್​ಸಿ ಸಿ.ಪಿ.ಯೋಗೇಶ್ವರ್ ​, ಇದೀಗ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. 

ಹೌದು...ಮಾಜಿ ಮುಖ್ಯಮಂತ್ರಿ ಎಚ್​ ಡಿ ಕುಮಾರಸ್ವಾಮಿ ಹೋಟೆಲ್​ನಲ್ಲಿ (Hotel) ರಾಸಲೀಲೆ ಮಾಡಿಕೊಂಡಿದ್ದ ಎಂದು ಬಿಜೆಪಿ ಎಂಎಲ್​ಸಿ ಸಿ.ಪಿ. ಯೋಗೇಶ್ವರ್ (CP  Yogeeshwara)ಗಂಭೀರ ಆರೋಪ ಮಾಡಿದ್ದಾರೆ. 

HD Kumaraswamy ಇನ್ಮುಂದೆ ತಾಜ್‌ ವೆಸ್ಟೆಂಡ್‌ಗೆ ಹೋಗಲ್ಲ!

ರಾಮನಗರ(Ramanagara) ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಸಿ.ಪಿ‌. ಯೋಗೇಶ್ವರ್ ಎಚ್​.ಡಿ.ಕುಮಾರಸ್ವಾಮಿ ಸಿಎಂ ಆದಾಗ ತಾಲೂಕಿಗೆ ಬರಲಿಲ್ಲ. ಆಗ ರಾಸಲೀಲೆ ಮಾಡಿಕೊಂಡಿದ್ದು ಈಗ ಜನರೆದುರು ಬಂದವ್ರೆ. ಹೋಟೆಲ್​​ನಲ್ಲಿ 14 ತಿಂಗಳು ಇದ್ದರಲ್ಲ, ಎಚ್​ಡಿಕೆ ಬಗ್ಗೆ ಗೊತ್ತಿದೆ. ಮುಖ್ಯಮಂತ್ರಿ ಆದಾಗ ಹೋಟೆಲ್​ನಲ್ಲಿ ವೈಯಕ್ತಿಕ ಜೀವನ ಮಾಡುತ್ತಿದ್ದರು. ನೇರವಾಗಿ ದಾಖಲೆ ಇಟ್ಟುಕೊಂಡು ನಾನು ಮಾತನಾಡುತ್ತೇನೆ ಎಂದರು.

ನನ್ನಿಂದ ಯಾಕಪ್ಪ ಎಚ್​ಡಿಕೆ ಆಣಿಮುತ್ತುಗಳನ್ನು ಕೇಳ್ತೀರಾ? ನೇರಾ-ನೇರಾ ನನ್ನ ಮುಂದೆ ಕೂರಿಸಿ. ವೈಯಕ್ತಿಕ ಹಾಗೂ ಸಾರ್ವಜನಿಕ ವಿಚಾರಗಳನ್ನು ಬಹಿರಂಗವಾಗಿ ಮಾತಾಡೋಣ. 14 ತಿಂಗಳು‌ ಸಿಎಂ ಆಗಿದ್ದ ವೇಳೆ ಚನ್ನಪಟ್ಟಣಕ್ಕೆ ಎಚ್​ಡಿಕೆ ಬರ್ತಿರಲಿಲ್ಲ ಎಂದು ಪ್ರಶ್ನಿಸಿದರು.

 ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ರಾಸಲೀಲೆ ಆಡಿಕೊಂಡಿದ್ರು. ಇದೀಗ ಚನ್ನಪಟ್ಟಣ ತಾಲೂಕಿಗೆ ಬಂದು ಜನರ ಮುಂದೆ ಕಣ್ಣೀರಿಟ್ಟು ನಾಟಕ ಮಾಡ್ತಿದ್ದಾರೆ. ರಾಸಲೀಲೆ ಬಗ್ಗೆ ಕುಮಾರಸ್ವಾಮಿ ಅವರನ್ನು ಕೇಳಿ, ಅವರು ಹೇಳಿಲ್ಲ ಅಂದ್ರೆ ನಾನೇ ಹೇಳ್ತೀನಿ. ಎಚ್​ಡಿಕೆ ಬಹಿರಂಗ ಚರ್ಚೆಗೆ ಬರಲಿ, ನಾನೂ ಸಿದ್ಧನಿದ್ದೇನೆ. ನನ್ನ ಬಗ್ಗೆ ಏಕವಚನದಲ್ಲಿ ಮಾತಾಡಿದ್ರೆ, ನಾನೂ ಕೂಡ ಏಕವಚನದಲ್ಲೇ ಮಾತಾಡ್ತೀನಿ ಎಂದು ಕಿಡಿಕಾರಿದರು.

ಇನ್ನುಮುಂದೆ ಹೆಚ್​ಡಿಕೆ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೇನೆ. ಕುಮಾರಸ್ವಾಮಿ ವಿಚಾರ ಇಡೀ ರಾಜ್ಯದ ಜನರಿಗೆ ಗೊತ್ತಿಲ್ಲ. ಕುಮಾರಸ್ವಾಮಿ ಹೇಳದೆ ಹೋದರೆ ನಾನೇ ಹೇಳುತ್ತೇನೆ. ನೇರವಾಗಿ ದಾಖಲೆ ಇಟ್ಟುಕೊಂಡು ನಾನು ಮಾತನಾಡುತ್ತೇನೆ. ನನ್ನ ಬಗ್ಗೆ ಮಾತನಾಡಿದ್ರೆ ಅಡ್ಡಹಾಕಿ ಹಿಡಿದು ಕೇಳುತ್ತೇನೆ. ನಮ್ಮ ಪಾರ್ಟಿಯವರೇ ಅಲ್ಲಲ್ಲಿ ಹೆಚ್​ಡಿ ಕುಮಾರಸ್ವಾಮಿಯನ್ನ ಹೊಗಳಿದ್ದಾರೆ. ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಬೆಂಬಲಿಸುತ್ತಿದ್ದಾರೆ ಎಂದು ಸಿ.ಪಿ‌. ಯೋಗೇಶ್ವರ್ ಹೇಳಿದರು.

ಕುಮಾರಸ್ವಾಮಿಯವರ ನಾಲ್ಕು ವರ್ಷದ ಸಾಧನೆ ಏನು?
2023ಕ್ಕೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ರನ್ನ ಚನ್ನಪಟ್ಟಣದಿಂದ ಎದುರಿಸುತ್ತೇನೆ. ತಾಲೂಕಿನಲ್ಲಿ ಜನರ ಮುಂದೆ ಹೋಗುತ್ತಿದ್ದೇನೆ. ಕುಮಾರಸ್ವಾಮಿ ಅವರ ನಾಲ್ಕು ವರ್ಷದ ಸಾಧನೆ ಏನು? ಬೂಟಾಟಿಕೆ ಮಾತು, ಕೆಲಸ ಶೂನ್ಯ. ಸಿಎಂ ಆದಾಗ ತಾಲೂಕಿಗೆ ಬರಲಿಲ್ಲ. ಈ ಕಡೆ ಗಮನಕೊಟ್ಟಿದ್ದರೇ ಕೆಲಸ ಅಗುತ್ತಿತ್ತು. ಆಗ ರಾಸಲೀಲೆ ಮಾಡಿಕೊಂಡು, ಇದೀಗ ಜನರ ಮುಂದೆ ಬಂದು ಕಣ್ಣು ತಿರುಗಿಸಿದರೆ ಶೋಭೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ನೀವೇ ಕುಮಾರಸ್ವಾಮಿ ಅವರಿಗೆ ಹೇಳಿ, ಹೋಟೆಲ್ ನಲ್ಲಿ 14 ತಿಂಗಳು ಇದ್ದರಲ್ಲ. ಕುಮಾರಸ್ವಾಮಿ ಬಗ್ಗೆ ಗೊತ್ತಿದೆ. ಇನ್ನ ಮೇಲೆ ಕುಮಾರಸ್ವಾಮಿಯನ್ನ ಏಕವಚನದಲ್ಲಿ ಮಾತನಾಡುತ್ತೇನೆ. ಸಿಎಂ ಆದಾಗ ಜನಾಭಿಪ್ರಾಯ ಬಿಟ್ಟು ಹೋಟಲ್ ನಲ್ಲಿ ವೈಯಕ್ತಿಕ ಜೀವನ ಮಾಡುತ್ತಿದ್ದರು. ಇದು ಅವರ ಮೇಲಿನ ಗಂಭೀರ ಆರೋಪ. ಯಾರನ್ನೂ ಅವರು ಭೇಟಿ ಮಾಡುತ್ತಿರಲ್ಲ. ನನ್ನದು ಹಿಟ್ ಅಂಡ್ ಕೇಸ್ ಇಲ್ಲ. ನೇರವಾಗಿ ಹೇಳುತ್ತೇನೆ. ಕುಮಾರಸ್ವಾಮಿ ವಿಚಾರ ಇಡೀ ರಾಜ್ಯದ ಜನಕ್ಕೆ ಗೊತ್ತಿಲ್ಲ ಎಂದು ತಿಳಿಸಿದರು.

ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಆಕಸ್ಮಿಕ ಅತಿಥಿ:
ಕುಮಾರಸ್ವಾಮಿ ನಮ್ಮ ತಾಲೂಕಿಗೆ ಆಕಸ್ಮಿಕ ಅತಿಥಿ. ತಾಲೂಕಿನಲ್ಲಿ ನಾನು ಸುದೀರ್ಘ 25 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ಜನಸಾಮಾನ್ಯರ ಅಸ್ತಿ ಹೊಡೆಯುವ ಅನಿರ್ವಾಯತೆ ನನಗೆ ಇಲ್ಲ. ತಾಲೂಕಿನಲ್ಲಿ ಆಸ್ತಿ ಹೊಡೆಯುವ ಕೆಲಸ ಮಾಡಿಲ್ಲ. ಆದರೆ ಕುಮಾರಸ್ವಾಮಿ ಮೇಲೆ ಆಪಾದನೆ ಇದೆ. ಬಿಡದಿಯಲ್ಲಿ ದಲಿತ ಜಮೀನು ಕಿತ್ತುಕೊಂಡ. ಬಿಡದಿಯಲ್ಲಿ ಏನು ಬಂಗಲೆ ಕಟ್ಟಿಕೊಂಡಿದ್ದಾನೆ ಅದು ದಲಿತರ ಜಮೀನು ಎಂಬ ಆಪಾದನೆ ಇದೆ. ನಾಲಿಗೆ ಬಿಗಿ ಹಿಡಿದು ಮಾತನಾಡು, ನಿಂದು ಅತೀ ಆಯ್ತು ಎಂದೂ ಹೇಳಿದ್ದೇನೆ. ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರಲಿ. ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಬರಲಿ ಎಂದು ಯೋಗೇಶ್ವರ್ ಸವಾಲು ಹಾಕಿದರು.

Latest Videos
Follow Us:
Download App:
  • android
  • ios