Asianet Suvarna News Asianet Suvarna News

ಕಾಂಗ್ರೆಸ್‌ಗೆ ಸಿದ್ದರಾಮಯ್ಯರಿಂದಲೇ ಬೆಂಕಿ: ಕುಮಾರಸ್ವಾಮಿ

*   ಹಿಂದೆ ಜೆಡಿಎಸ್‌ ಮುಗಿಸಲು, ಈಗ ಕಾಂಗ್ರೆಸ್‌ ಮುಗಿಸಲು ಸಮಾವೇಶ ಮಾಡ್ತಿದ್ದಾರೆ
*   ನನ್ನನ್ನು ಕೆಣಕಲು ಬರಬೇಡಿ, ಸೇರಿಗೆ ಸವ್ವಾಸೇರಾಗಲು ನಾನು ಸಿದ್ಧ
*   ಸಿದ್ದರಾಮಯ್ಯ ವಿರುದ್ಧ ಮತ್ತೆ ಕಿಡಿಕಾರಿದ ಕುಮಾರಸ್ವಾಮಿ
 

HD Kumaraswamy Slams on Siddaramaiah grg
Author
Bengaluru, First Published Oct 14, 2021, 8:11 AM IST
  • Facebook
  • Twitter
  • Whatsapp

ರಾಮನಗರ(ಅ.14):  ಕಾಂಗ್ರೆಸ್‌(Congress) ಪಕ್ಷಕ್ಕೆ ಪ್ರತಿಪಕ್ಷ ಸಿದ್ದರಾಮಯ್ಯ ಅವರೇ ಬೆಂಕಿ ಇಡಲಿದ್ದಾರೆ. ಪಕ್ಷ ಮುಗಿಸಲೆಂದೇ ಸಿದ್ದರಾಮಯ್ಯ ಒಬಿಸಿ ಸಮಾವೇಶ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಆರೋಪಿಸಿದ್ದಾರೆ. ಜತೆಗೆ, ಪದೇ ಪದೆ ನನ್ನನ್ನು ಕೆಣಕಲು ಬರಬೇಡಿ ಎಂದು ಸಿದ್ದರಾಮಯ್ಯ(Siddaramaiah) ಅವರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ ಮುಗಿಸಲು ಸಮಾವೇಶಗಳನ್ನು ಮಾಡಿದಂತೆ ಈಗ ಕಾಂಗ್ರೆಸ್‌ ಮುಗಿಸಲು ಅದೇ ಕುತಂತ್ರ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು. ಕಳೆದ ಚುನಾವಣೆಯಲ್ಲಿ(Election) ಕಾಂಗ್ರೆಸ್‌ 130 ರಿಂದ 78 ಸೀಟುಗಳಿಗೆ ಕುಸಿ​ಯಲು ಸಿದ್ದ​ರಾ​ಮ​ಯ್ಯ​ನ​ವರೇ ಕಾರಣ. ಅವರು ವಿಶ್ವಾ​ಸಕ್ಕೆ ಅರ್ಹ​ವ​ಲ್ಲದ ವ್ಯಕ್ತಿ. ಅವರು ನಮ್ಮ ಪಕ್ಷದ ವಿರುದ್ಧ ಹೇಳಿ​ಕೆ​ಗ​ಳನ್ನು ನೀಡು​ತ್ತಿ​ರು​ವುದು ಒಂದೆ​ಡೆ​ಯಾ​ದರೆ, ಮತ್ತೊಂದೆಡೆ ಕಾಂಗ್ರೆಸ್‌ ಪಕ್ಷ​ವನ್ನು ಕುತಂತ್ರ​ದಿಂದ ಅವರೇ ಮುಳು​ಗಿ​ಸು​ತ್ತಿ​ದ್ದಾರೆ ಎಂದು ಕಿಡಿಕಾರಿದರು.

ನಾನು ಸಿದ್ದರಾಮಯ್ಯ ಅವರ ನೆರಳು ಅಥವಾ ಹಂಗಿ​ನಲ್ಲಾಗಲಿ ರಾಜ​ಕಾ​ರ​ಣಕ್ಕೆ(Politics) ಬಂದವನಲ್ಲ. ಯಾರು ಎಲ್ಲಿಂದ, ಯಾರಿಂದ ರಾಜಕೀಯಕ್ಕೆ ಬಂದರು ಎಂಬುದನ್ನು ಅವರು ತಿಳಿದುಕೊಳ್ಳಬೇಕು. ರಾಜಕಾರಣ ಬೇಡ ಕರಿಕೋಟು ಹಾಕಿಕೊಂಡು ಹೋಗುತ್ತೇನೆ ಎಂದಿದ್ದವರು ಯಾರು? ನಿಮ್ಮ ರಾಜ​ಕಾ​ರಣ ನಾವು ಅರ್ಥ ಮಾಡಿ​ಕೊಂಡಿ​ದ್ದೇವೆ. ಪದೆ ಪದೇ ಕೆಣ​ಕ​ಬೇಡಿ. ನೀವು ನಮ್ಮ ಸುದ್ದಿಗೆ ಬಂದರೆ ನಾನು ರೆಡಿ, ಸೇರಿಗೆ ಸವ್ವಾ ಸೇರಾ​ಗಲು ನಾನು ಸಿದ್ಧ ಎಂದು ಎಚ್ಚರಿಕೆ ನೀಡಿದರು.

ವಿಪಕ್ಷ ನಾಯಕ ಶಾಡೋ ಸಿಎಂ ಇದ್ದಂತೆ: ಸುಧಾಕರ್‌

ಬಿಎಸ್‌ವೈ ಭೇಟಿಯಾಗಿದ್ದರು: 

ಬಿ.ಎಸ್‌. ಯಡಿ​ಯೂ​ರಪ್ಪ(BS Yediyurappa) ಮುಖ್ಯ​ಮಂತ್ರಿ ಆಗಿ​ದ್ದಾಗ ನಾನು ಒಂದೇ ಬಾರಿ ಬೇಟಿ ಮಾಡಿದ್ದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 2009ರ ಉಪ ಚುನಾವಣೆಯಲ್ಲಿ(Byelection) ಕಾಂಗ್ರೆಸ್‌ನವರನ್ನೇ ಸೋಲಿಸಲು ಯಡಿ​ಯೂ​ರಪ್ಪ​ರಿಂದ ಸಿದ್ದರಾಮಯ್ಯ ದುಡ್ಡು ತರಿಸಿಕೊಂಡಿದ್ದರು. ಅವರು ಕಳುಹಿಸಿದ್ದವರೇ ನನಗೆ ಈ ವಿಷಯ ಹೇಳಿದ್ದಾರೆ. ಅಧಿಕಾರ ಇಲ್ಲದಿದ್ದರು ಬಡವರು ನಮ್ಮ ಮನೆಗೆ ಬರುತ್ತಾರೆ, ನಿಮ್ಮ ಮನೆಗೇನಾದರೂ ಬಡವರು ಬರುತ್ತಾರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಪುಟಗೋಸಿ ಹೇಳಿಕೆಗೆ ಸ್ಪಷ್ಟನೆ-ನಾನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅಗೌರವ ತೋರಿಲ್ಲ. ಶಾಂತವೇರಿ ಗೋಪಾಲಗೌಡರು, ಎಚ್‌.ಡಿ.ದೇವೇಗೌಡರಂಥವರು(HD Devegowda) ವಿರೋಧ ಪಕ್ಷದ ನಾಯಕರಿದ್ದಾಗ ಆ ಹುದ್ದೆಯ ಘನತೆ ಉಳಿಸಿದ್ದರು. ದೇವೇಗೌಡರಂತೆ ಹೋರಾಟ ಮಾಡಲು ಸಿದ್ದರಾಮಯ್ಯಗೆ ಆಗಲ್ಲ. ಆ ಹುದ್ದೆಯ ಮೌಲ್ಯ ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಆ ಅರ್ಥದಲ್ಲಷ್ಟೇ ನಾನು ಹೇಳಿಕೆ ನೀಡಿದ್ದೇನೆ ಅಷ್ಟೆಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಮಜಾ ಮಾಡಲು ಅಮೆರಿಕಕ್ಕೆ ಹೋಗಿಲ್ಲ-ಎಚ್‌ಡಿಕೆ

ಸಮ್ಮಿಶ್ರ ಸರ್ಕಾರದ(Coalition Government) ಪತನದ ಅವಧಿಯಲ್ಲಿ ನಾನು ಮಜಾ ಮಾಡಲು ಅಮೆರಿಕಕ್ಕೆ(America) ಹೋಗಿ​ರ​ಲಿಲ್ಲ. ಕಾಲ​ಭೈ​ರ​ವೇ​ಶ್ವರ ದೇವಾ​ಲ​ಯದ ಶಂಕು ಸ್ಥಾಪ​ನೆ ಕಾರ್ಯಕ್ಕಾಗಿ ಹೋಗಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರಸ್ವಾಮಿ ಪ್ರಕಾರ ವಿಪಕ್ಷ ಸ್ಥಾನ ಅಂದ್ರೆ ಪುಟಗೋಸಿನಾ?: HDK ವಿರುದ್ಧ ಸಿದ್ದು ಏಕವಚನದಲ್ಲಿ ವಾಗ್ದಾಳಿ

ಸಮ್ಮಿಶ್ರ ಸರ್ಕಾರ ಪತನ ಆಗುವಾಗ ಅಮೆರಿಕದಲ್ಲಿದ್ದ ಕುಮಾರಸ್ವಾಮಿಗೆ ಫೋನ್‌ ಮಾಡಿ ತಿಳಿಸಿದ್ದೆ ಎಂಬ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಮೈತ್ರಿ ಸರ್ಕಾರ ಪತನ ಆಗುತ್ತಿದೆ ಎಂದು ಕರೆ ಮಾಡಿ​ದ್ದಾಗಿ ಸಿದ್ದ​ರಾ​ಮಯ್ಯ ಹೇಳಿ​ದ್ದಾರೆ. ಅದು ಸುಳ್ಳು. ಹಾಗಿ​ದ್ದರೆ ಅವರು ನನಗೆ ಎಷ್ಟು ಬಾರಿ ಫೋನ್‌ ಮಾಡಿದ್ದಾರೆ ಎಂಬ ಕಾಲ್‌ ರೆಕಾರ್ಡ್‌ ಬಹಿ​ರಂಗ ಪಡಿ​ಸಲಿ ಎಂದು ಸವಾಲು ಹಾಕಿ​ದರು.

ಡಿಸಿಎಂ ಆಗಿದ್ದ ಡಾ.ಪರ​ಮೇ​ಶ್ವರ್‌ರನ್ನು ಸಂಪ​ರ್ಕಿ​ಸಿ ಮಾತನಾಡಿದಾಗ ಏನೂ ಸಮಸ್ಯೆ ಇಲ್ಲ, ಆರಾ​ಮ​ವಾಗಿ ಬನ್ನಿ ಎಂದಿ​ದ್ದರು. ಆದರೆ, ನಿಮ್ಮ ಕ್ಯಾಂಪಿ​ನ​ಲ್ಲಿ ಬೇರೆ​ಯದ್ದೇ ನಡೆ​ಯು​ತ್ತಿತ್ತು. ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಹುನ್ನಾರ ನಡೆ​ಸಿದ್ದು ನನಗೆ ಮೊದಲೇ ಗೊತ್ತಿತ್ತು. ಧರ್ಮ​ಸ್ಥ​ಳ​ಕ್ಕೆ ಹೋಗಿ ಸಿದ್ಧ​ವ​ನ​ದಲ್ಲಿ ಕುಳಿತು ಹಿಂಬಾ​ಲ​ಕ​ರೊಂದಿಗೆ ಚರ್ಚಿಸಿ ಸಿದ್ಧ​ಸೂತ್ರ ರೂಪಿ​ಸಿ​ದರು. ನನ್ನ ಎದೆ ಬಗೆ​ದರೆ ಸಿದ್ದ​ರಾ​ಮಯ್ಯ ಕಾಣು​ತ್ತಾರೆ ಎನ್ನು​ತ್ತಿದ್ದ ಎಂಟಿಬಿ ನಾಗ​ರಾಜ್‌ ಕಾಂಗ್ರೆಸ್‌ ಬಿಟ್ಟು ಬಿಜೆ​ಪಿಗೆ(BJP) ಹೋಗಿದ್ಯಾಕೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಶಾಸ​ಕರು ತಮ್ಮ ಪತ್ರ​ಗ​ಳಿಗೆ ಸಹಿ ಹಾಕು​ವಂತೆ ನನ್ನ ಮುಂದೆ ಇಸ್ಟೀಟ್‌ ಎಲೆ​ಯಂತೆ ಎಸೆ​ಯು​ತ್ತಿ​ದ್ದರು. ಆ ರೀತಿ ನನ್ನನ್ನು ನೀವು ಇಟ್ಟು​ಕೊಂಡಿ​ದ್ದಿರಿ. ಯಾವ ಶಾಸ​ಕ​ರಿಗೆ ಅಗೌ​ರವ ತೋರಿ​ಸಿ​ದ್ದೇನೆ? ನಾನು ಸಿಎಂ ಆಗಿ​ದ್ದರೂ ನೀವು ಸರ್ಕಾರಿ ಬಂಗಲೆ ಬಿಟ್ಟು ಕೊಡ​ಲಿಲ್ಲ. ಜೆಪಿ ನಗ​ರ​ದಿಂದ ಬರಲು ತೊಂದರೆ ಆಗು​ತ್ತಿದ್ದ ಕಾರಣ ಮಧ್ಯಾಹ್ನದ ಊಟ​ಕ್ಕಾಗಿ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ರೂಮ್‌ ಮಾಡಿದ್ದೆ ಎಂದರು.
 

Follow Us:
Download App:
  • android
  • ios