ವಿಪಕ್ಷ ನಾಯಕ ಶಾಡೋ ಸಿಎಂ ಇದ್ದಂತೆ: ಸುಧಾಕರ್‌

  • ವಿರೋಧ ಪಕ್ಷದ ನಾಯಕ ಸ್ಥಾನ ಒಂದು ರೀತಿ ರಾಜ್ಯದಲ್ಲಿ ಶಾಡೋ ಮುಖ್ಯಮಂತ್ರಿ ಇದ್ದಂತೆ.
  • ಅದನ್ನು ಪುಟಗೋಸಿಗೆ ಹೋಲಿಕೆ ಮಾಡಿ ಮಾತನಾಡಿರುವುದು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿಗೆ ಶೋಭೆ ತರುವುದಿಲ್ಲ
sudhakar upposes For HD kumaraswamy statement on opposition party leader post snr

ಚಿಕ್ಕಬಳ್ಳಾಪುರ (ಅ.14): ವಿರೋಧ ಪಕ್ಷದ ನಾಯಕ ಸ್ಥಾನ ಒಂದು ರೀತಿ ರಾಜ್ಯದಲ್ಲಿ ಶಾಡೋ ಮುಖ್ಯಮಂತ್ರಿ (CM post) ಇದ್ದಂತೆ. ಆದರೆ ಅದನ್ನು ಪುಟಗೋಸಿಗೆ ಹೋಲಿಕೆ ಮಾಡಿ ಮಾತನಾಡಿರುವುದು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿಗೆ (HD Kumaraswamy) ಶೋಭೆ ತರುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr K Sudhakar) ತಿಳಿಸಿದರು. 

ಒಬ್ಬ ಸಿಎಂ ಆಗಿದ್ದವರು ಅಂತಹ ಪದ ಬಳಸಬಾರದಾಗಿತ್ತು. ವಿಪಕ್ಷ ಸ್ಥಾನಕ್ಕೂ ತನ್ನದೇ ಆದ ಘನತೆ ಇದೆ. ಮುಖ್ಯಮಂತ್ರಿ, ಸರ್ಕಾರ ಏನೇ ತಪ್ಪು ಮಾಡಿದ್ದರೂ ಕೂಡ, ಅದನ್ನು ಬಯಲಿಗೆಳೆಯುವುದು, ಪ್ರತಿ ವಿಷಯದ ಮೇಲೆ ಪರಾಮರ್ಶೆ ಮಾಡುವುದು, ತಪ್ಪು ಕಂಡುಹಿಡಿಯುವ ಶಕ್ತಿ, ಅರ್ಹತೆ ಕಾನೂನು ಬದ್ಧವಾಗಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಇದೆ ಎಂದರು.

ಕುಮಾರಸ್ವಾಮಿ ಪ್ರಕಾರ ವಿಪಕ್ಷ ಸ್ಥಾನ ಅಂದ್ರೆ ಪುಟಗೋಸಿನಾ?: HDK ವಿರುದ್ಧ ಸಿದ್ದು ಏಕವಚನದಲ್ಲಿ ವಾಗ್ದಾಳಿ

ವಿಪಕ್ಷ ನಾಯಕ ಸ್ಥಾನ ಹಾಗೂ ಗೂಟದ ಕಾರಿಗೆ ಆಸೆ ಬಿದ್ದು ಕಾಂಗ್ರೆಸ್‌ (Congress), ಜೆಡಿಎಸ್‌ (JDS) ಸಮ್ಮಿಶ್ರ ಸರ್ಕಾರವನ್ನು ಸಿದ್ದರಾಮಯ್ಯ (Siddaramaiah) ಬೀಳಿಸಿದರೆಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಬುಧವಾರ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸದ ಅವರು, ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಯಾವ ಭಾಷೆ ಬಳಸಬೇಕು ಅರಿವು ಇರಬೇಕೆಂದರು.

ಪದ ಬಳಸುವಾಗ ವಿವೇಚನೆ ಇರಬೇಕು

ಯಾವ ಪದ ಬಳಸಬೇಕು ಎಂಬ ವಿವೇಚನೆ ಅವರಿಗೆ ಇರಬೇಕು. ಸಮಾಜ (Socity) ನಮ್ಮನ್ನು ನೋಡುತ್ತಿದೆ. ಒಬ್ಬ ಸಿಎಂ ಆಗಿದ್ದವರು ಅಂತಹ ಪದ ಬಳಸಬಾರದಾಗಿತ್ತು. ವಿಪಕ್ಷ ಸ್ಥಾನಕ್ಕೂ ತನ್ನದೇ ಆದ ಘನತೆ ಇದೆ. ಮುಖ್ಯಮಂತ್ರಿ, ಸರ್ಕಾರ ಏನೇ ತಪ್ಪು ಮಾಡಿದ್ದರೂ ಕೂಡ, ಅದನ್ನು ಬಯಲಿಗೆಳೆಯುವುದು, ಪ್ರತಿ ವಿಷಯದ ಮೇಲೆ ಪರಾಮರ್ಶೆ ಮಾಡುವುದು, ತಪ್ಪು ಕಂಡುಹಿಡಿಯುವ ಶಕ್ತಿ, ಅರ್ಹತೆ ಕಾನೂನು ಬದ್ಧವಾಗಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಇದೆ. ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರೋ ಏನೋ ನನಗೆ ಗೊತ್ತಿಲ್ಲ. ಆದರೆ ಮಾಜಿ ಪ್ರಧಾನಿ ದೇವೇಗೌಡರು (HD Devegowda) ಆ ಸ್ಥಾನದಲ್ಲಿದ್ದರು. ಹಾಗಾಗಿ ವಿರೋಧ ಪಕ್ಷದ ಸ್ಥಾನವನ್ನು ಅವಹೇಳನಕಾರಿಯಾಗಿ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದರು.

ಕೆಪಿಸಿಸಿ  (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ (DK Shivakumar) ಕುರಿತು ಉಗ್ರಪ್ಪ ಹಾಗೂ ಸಲೀಂ ಅವರು ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ತಿಳಿದು ಮಾತನಾಡುತ್ತೇನೆ ಎಂದ ಸಚಿವರು, ಶಿವಕುಮಾರ್‌ ಬಗ್ಗೆ ಉಗ್ರಪ್ಪ ಮಾತನಾಡಿದ್ದಾರಾ ಎಂದು ಅಶ್ಚರ್ಯದಿಂದ ಪ್ರಶ್ನಿಸಿದರು.

ಕೋವಿಡ್‌ ಲಸಿಕೆ: ರಾಜ್ಯ ಮೈಲಿಗಲ್ಲು

ಕೊರೊನಾ (Corona) ಲಸಿಕೆ ವಿಷಯವಾಗಿ ಕರ್ನಾಟಕ ಮೈಲಿಗಲ್ಲು ತಲುಪಲಿದೆ. 6ಕೋಟಿ ಡೋಸ್‌ ದಾಟಲಿದ್ದೇವೆ. ಎರಡನೇ ಡೋಸ್‌ ಶೇ.40, ಮೊದಲ ಡೋಸ್‌ ಶೇ. 83ರಿಂದ 84ರಷ್ಟಾಗಿದೆ. ಕೋವಿಡ್‌ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಮಕ್ಕಳಿಗೆ ಲಸಿಕೆ ನೀಡಲು ಪರವಾನಗಿ ಸಿಕ್ಕಿರುವುದರಿಂದ, ಹಂತ ಹಂತವಾಗಿ ಲಸಿಕೆ ನೀಡಲಾಗುತ್ತದೆ. ಇದರಿಂದ ಕೋವಿಡ್‌ ಅನ್ನು ರಾಜ್ಯ, ದೇಶದಿಂದ ನಿರ್ನಾಮ ಮಾಡುವ ಕಾಲ ದೂರವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ವಿಶ್ವಾಸ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios