ಬಿಜೆಪಿ ತಿಪ್ಪರಲಾಗ ಹಾಕಿದ್ರೂ ಮತ್ತೆ ಅಧಿಕಾರಕ್ಕೆ ಬರಲ್ಲ: ನಾನೇ ಸಿಎಂ, ಎಚ್‌ಡಿಕೆ
ರಾಜ್ಯ ಸರ್ಕಾರ ಕಾರ್ಯವೈಖರಿಯಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ರಾಜ್ಯದ ಜನ ನಿರ್ಧರಿಸಿದ್ದು, ಬಿಜೆಪಿ ಇನ್ನು ಹತ್ತು ಜನ್ಮ ಎತ್ತಿ ಬಂದರು ಅಧಿಕಾರಕ್ಕೆ ಬರುವುದಿಲ್ಲ: ಕುಮಾರಸ್ವಾಮಿ
ಚನ್ನಪಟ್ಟಣ(ಅ.23): ಬಿಜೆಪಿ ಸರ್ಕಾರದ ಲೂಟಿ, ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದು, ಏನೇ ತಿಪ್ಪರಲಾಗ ಹಾಕಿದರೂ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
ನಗರದ ಶೇರ್ವಾ ಹೋಟೆಲ್ ಬಳಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾರ್ಯವೈಖರಿಯಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ರಾಜ್ಯದ ಜನ ನಿರ್ಧರಿಸಿದ್ದು, ಅವರು ಇನ್ನು ಹತ್ತು ಜನ್ಮ ಎತ್ತಿ ಬಂದರು ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಯವರು ಹೋದಲ್ಲಿ ಬಂದಲ್ಲಿ 160 ಸೀಟ್ ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಆದರೆ, ಅವರು ಏನು ಕಿತ್ತುಗುಡ್ಡೆ ಹಾಕಿದ್ದಾರೆ ಎಂದು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ. ಕೋವಿಡ್‌ನಿಂದ ಮೃತಪಟ್ಟಕುಟುಂಬದರಿಗೆ ಘೋಷಿಸಿದ್ದ ಪರಿಹಾರದ ಹಣ ಎಷ್ಟುಕುಟುಂಬಕ್ಕೆ ನೀಡಿದ್ದೀರಿ. ರಾಜ್ಯದಲ್ಲಿ ಮಳೆ ಅವಾಂತರದಿಂದ ಮನೆಗಳು ಬಿದ್ದಿದ್ದರೂ ಒಂದು ಮನೆ ಕಟ್ಟಿಸುವ ಹೋಗತ್ಯ ಇಲ್ಲದ ನಿಮಗೆ ಜನ ಏಕೆ ಅಧಿಕಾರ ನೀಡಬೇಕು ಎಂದು ಪ್ರಶ್ನಿಸಿದರು.
ಚನ್ನಪಟ್ಟಣದಿಂದಲೇ ಸ್ಪರ್ಧೆ, ನಾನು ಟಾಕೀಸ್ ಟೂರ್ ಅಲ್ಲ ಎಂದು ಸಿದ್ದುಗೆ ಗುದ್ದಿಗ ಹೆಚ್‌ಡಿಕೆ!
ರಾಷ್ಟ್ರೀಯ ಪಕ್ಷಗಳಿಂದ ಕೋಮು ವೈಷಮ್ಯ: ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಕೋಮು ಗಲಭೆಗಳು ಸಾಮಾನ್ಯ ಎಂಬಂತಾಗಿದೆ. ಆದರೆ, ಪ್ರಾದೇಶಿಕ ಪಕ್ಷಗಳು ಅಧಿಕಾರಿದಲ್ಲಿ ಇರುವ ಕಡೆ ಅಂತಹ ವಾತಾವರಣವಿಲ್ಲ. ಇದಕ್ಕೆ ನೆರೆಯ ತಮಿಳುನಾಡು, ಆಂಧ್ರ, ತೆಲಂಗಾಣಗಳೇ ಉದಾಹರಣೆ. ಆದರೆ, ಬಿಜೆಪಿ ಅಧಿಕಾರಿದಲ್ಲಿರುವ ಗುಜುರಾತ್, ಉತ್ತರಪ್ರದೇಶಗಳಲ್ಲಿ ಸೌಹಾರ್ದಯುತ ವಾತಾವರಣವಿಲ್ಲ ಎಂದು ಟೀಕಿಸಿದರು.
ಗೋದ್ರಾ ಗಲಭೆಯ ವೇಳೆ ಒಂದೇ ಕುಟುಂಬದ ಏಳು ಮಂದಿಯನ್ನು ಕೊಂದು ಒಬ್ಬ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದ ಅರೋಪಿಗಳಿಗೆ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಗುಜುರಾತ್ ಸರ್ಕಾರ ಆ ಆರೋಪಿಗಳಿಗೆ ಕ್ಷಮಾಧಾನ ನೀಡಲು ಕೋರಿದ್ದು, ಕೇಂದ್ರ ಸರ್ಕಾರ ಸಹ ಇದಕ್ಕೆ ಸಹಕಾರ ನೀಡುತ್ತಿದೆ. ದೇಶದ ಆಡಳಿತ ಹದಗೆಟ್ಟಿದ್ದು, ಇಂಥ ವಾತಾವರಣ ಎಲ್ಲಡೆ ನಿರ್ಮಾಣವಾಗಬೇಕಾ ಎಂದು ಜನರೇ ತೀರ್ಮಾನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಜೆಡಿಎಸ್ ಅಲ್ಪಸಂಖ್ಯಾತ ಘಟಕ ರಾಜ್ಯಾಧ್ಯಕ್ಷ ಷಂಶುದ್ದೀನ್ ಖಾನ್, ಉಪಾಧ್ಯಕ್ಷ ಶಹಬಾಜ್ ಖಾನ್, ನಗರಸಭೆ ಅಧ್ಯಕ್ಷ ಪ್ರಶಾಂತ್, ಮಾಜಿ ಅಧ್ಯಕ್ಷ ಜಬಿ ಉಲ್ಲಾಖಾನ್ ಘೋರಿ, ಸದಸ್ಯ ರಫೀಕ್, ಮುಖಂಡರಾದ ಅತಿಕ್ ಮುನಾವರ್, ಹಮೀದ್ ಮುನಾವರ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಫಾಜಿಲ್ ಇತರರಿದ್ದರು.
ಮತ್ತೆ ನಾನೇ ಸಿಎಂ:
ಯಾರು ಏನೇ ಅಪಪ್ರಚಾರ ಮಾಡಲಿ, ಸಮೀಕ್ಷೆಗಳು ಏನೇ ಹೇಳಲಿ. ರಾಜ್ಯದ ಜನರ ಒಲವು ನಮ್ಮ ಪರವಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ಧ. ಯಾರೂ ಏನೇ ಮಾಡಿದರೂ ಮುಂದಿನ ಬಾರಿ ನಾನು ರಾಜ್ಯದ ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿದ್ದು, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತಪರ ಸರ್ಕಾರ ಬೀಳಿಸಿದರು
ಕಳೆದ ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಒಲಿದು ಬಂತಾದರೂ, ಇನ್ನೊಂದು ಪಕ್ಷದ ಮರ್ಜಿಯಲ್ಲಿ ಆಡಳಿತ ನಡೆಸುವಂತಾಯಿತು. ಕಾಂಗ್ರೆಸ್‌ನವರ ಕಿರುಕುಳದ ಮಧ್ಯೆಯೇ 14 ತಿಂಗಳು ಆಡಳಿತ ನಡೆಸುವಂತಾಯಿತು. ಇದರ ಜತೆಗೆ ನನ್ನ ಸರ್ಕಾರವನ್ನು ಬೀಳಿಸಲು ಪ್ರತಿನಿತ್ಯ ಬಿಜೆಪಿಯವರು ಒಂದಲ್ಲ ಒಂದು ತಂತ್ರ ನಡೆಸಿದರು. ಅದಕ್ಕೆ ಇಲ್ಲಿನ ಪುಣ್ಯಾತ್ಮರೊಬ್ಬರು ಸಹ ಕೈಜೋಡಿಸಿದರು. ಬೆಟ್ಟಿಂಗ್ ದಂಧೆ ನಡೆಸುತಿದ್ದ, ಬಡವರ ರಕ್ತ ಹೀರುತ್ತಿದ್ದವರ ಜತೆಗೂಡಿ ರೈತಪರವಾಗಿ ಆಡಳಿತ ನಡೆಸುತಿದ್ದ ನನ್ನ ಸರ್ಕಾರವನ್ನು ಬೀಳಿಸಿದರು ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೆಸರೇಳದೇ ಟಾಂಗ್ ನೀಡಿದರು. ಚನ್ನಪಟ್ಟಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ದಲಿತರ ಮಧ್ಯೆ ಒಡಕು ಮೂಡಿಸಲು ಎಚ್ಡಿಕೆ ಯತ್ನ: ಬಿಜೆಪಿ ಮುಖಂಡರು
ನೂರು ಯೋಗೇಶ್ವರ್ ತಂದರೂ ಏನು ಮಾಡಲಾಗಲ್ಲ!
ಕ್ಷೇತ್ರದಲ್ಲಿ ಹಿಂದೆ ಯಾವ ರೀತಿಯ ಕಮಿಷನ್ ರಾಜಕೀಯವಿತ್ತು. ಈಗ ಯಾವ ರೀತಿಯ ವಾತಾವರಣವಿದೆ ಎಂದು ಎಲ್ಲರಿಗೂ ಗೊತ್ತಿದೆ. ನಾನು ಪ್ರಚಾರ ಬಯಸುವವನಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು. ನಾನು ಸಣ್ಣ ಸಣ್ಣ ಕೆಲಸಗಳಿಗೂ ಕಲ್ಲಿನ ಮೇಲೆ ನನ್ನ ಹೆಸರು ಹಾಕಿಸಿಕೊಳ್ಳುವವನಲ್ಲ. ಕಲ್ಲಿನ ಮೇಲಲ್ಲ ಜನರ ಹೃದಯದಲ್ಲಿ ನನ್ನ ಹೆಸರು ಇರಬೇಕು ಎಂದು ನಾನು ಬಯಸುವವನು. ರಾಜ್ಯದಲ್ಲಿ ಒಂದು ಸ್ವತಂತ್ರ ಸರ್ಕಾರ ತರಲು ಸವಾಲು ಸ್ವೀಕಾರ ಮಾಡಿದ್ದೇವೆ. ಅದಕ್ಕಾಗಿ ಪಕ್ಷ ಸಂಘಟಿಸುತ್ತಿದ್ದೇನೆ. ನನನ್ನು ತಡೆಯಲು ಒಬ್ಬರಲ್ಲ ನೂರು ಯೋಗೇಶ್ವರ್ ಅನ್ನು ತಂದರೂ ಕ್ಷೇತ್ರದಲ್ಲಿ ನನ್ನ ಏನು ಮಾಡಕ್ಕೆ ಆಗಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಸವಾಲು ಹಾಕಿದರು.
ತಹಸೀಲ್ದಾರ್ ವಿರುದ್ಧ ಮತ್ತೆ ಗುಡುಗಿದ ಎಚ್‌ಡಿಕೆ!
ಕ್ಷೇತ್ರದಿಂದ ಆಯ್ಕೆಯಾದ ನಂತರ ಎಲ್ಲ ಅಧಿಕಾರಿಗಳನ್ನು ಗೌರವದಿಂದ ಕಂಡಿದ್ದೇನೆ. ನಾನು ತಹಸೀಲ್ದಾರ್ ಆದ ನಂತರ ತಹಸೀಲ್ದಾರ್ ಹೊರತುಪಡಿಸಿ ಮತ್ಯಾರನ್ನು ವರ್ಗಾವಣೆ ಮಾಡಿಸಿರಲಿಲ್ಲ. ಆದರೆ ಇಲ್ಲಿಂದ ವರ್ಗಾವಣೆಯಾಗಿದ್ದ ತಹಸೀಲ್ದಾರ್ ಅನ್ನು ಮತ್ತೆ ಇಲ್ಲಿಗೆ ವರ್ಗಾ ಮಾಡಿಸಿಕೊಂಡು ಬಂದು ನನ್ನ ವಿರುದ್ಧ ಆಟ ಆಡಿಸುವ ತಂತ್ರ ಮಾಡಲಾಗಿದೆ ಎಂದು ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿಂದ ವರ್ಗಾವಣೆಯಾದ ವ್ಯಕ್ತಿ ಮತ್ತೆ ಇಲ್ಲಿಗೆ ಕಳ್ಳರ ಜತೆ ಸೇರಿ ನನ್ನ ವಿರುದ್ಧ ತೊಡೆ ತಟ್ಟಿದರೆ ಸುಮ್ಮನಿರಲ್ಲ. ಇಂಥ ಅಧಿಕಾರಿಗಳನ್ನು ಸಾಕಷ್ಟು ಡಿದ್ದೇನೆ. ಇನ್ನಾರು ತಿಂಗಳು ಕಳೆಯಲಿ ನನ್ನ ಸರ್ಕಾರ ಬರಲಿ ಆಗ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.