ಬೆಂಗಳೂರು, (ಜೂನ್.05): ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಇದೇ ಜೂನ್ 19ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜ್ಯಸಭಾ ಚುನಾವಣೆ ಗರಿಗೆದರಿದೆ. 

ಇನ್ನು ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಇಂದು (ಶುಕ್ರವಾರ) ಶಾಸಕಾಂಗ ಸಭೆ ನಡೆಸಿತು. ಸಭೆ ಬಳಿಕ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ,  ರಾಜ್ಯಸಭೆಗೆ ದೇವೇಗೌಡರೇ ನಿಲ್ಲಬೇಕು ಅಂತ ಪಕ್ಷದ ವತಿಯಿಂದ ಎಲ್ಲಾ ಶಾಸಕರ ಒತ್ತಾಯ ಆಗಿದೆ. ಆದ್ರೆ, ದೇವೇಗೌಡ್ರು ರಾಜಸಭೆಗೆ ನಿಲ್ಲುವ ಬಗ್ಗೆ ಇದುವರೆಗು ಒಪ್ಪಿಗೆ ಕೊಟ್ಟಿಲ್ಲ ಎಂದರು.

"

ರಾಜ್ಯಸಭಾ ಚುನಾವಣೆಗೆ ದೇವೇಗೌಡ ಬಹುತೇಕ ಫೈನಲ್: ಇಲ್ಲಿದೆ ಜೆಡಿಎಸ್ ಲೆಕ್ಕಾಚಾರ .

 ಅವರ ದುಡಿಮೆ ಹಾಗೂ  ದೇಶದ ಪರಿಸ್ಥಿತಿಯಿಂದ ಅವರ ಅವಶ್ಯಕತೆ ಇದೆ. ದೇವೇಗೌಡ್ರು ಅನುಭವಿ ರಾಜಕಾರಣಿ ದೆಹಲಿಗೆ ಹೋಗಬೇಕೆಬುಂದು ಶಾಸಕರ ಒತ್ತಡ ಇದೆ. ಕಾಂಗ್ರೆಸ್ ನಿಂದ ಒಂದು ಅಭ್ಯರ್ಥಿಯನ್ನ ಗೆಲ್ಲಿಸಿಕೊಳ್ಳುಬಹುದು ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳಬಹುದು. ಮೂರನೇ ಅಭ್ಯರ್ಥಿಯನ್ನು ಹಾಕುವುದಕ್ಕೆ ಬಿಜೆಪಿ ಕಾಂಗ್ರೆಸ್  ಪಕ್ಷಕ್ಕೆ ಸಂಖ್ಯೆಯ ಕೊರತೆ ಇದೆ. ದೇವೇಗೌಡರು ಅಭ್ಯರ್ಥಿಯಾಗಲು ಒಪ್ಪಿಗೆ ಕೊಟ್ಟ ನಂತರ ಯಾರ ಬಳಿ ಬೆಂಬಲ ಕೇಳಬೇಕೆಂಬ ಪ್ರಶ್ನೆ. ಸದ್ಯಕ್ಕೆ ಆ ಪ್ರಶ್ನೆ ಇನ್ನೂ ಎದುರಾಗಿಲ್ಲ ಎಂದು ಹೇಳಿದರು.

ಒಟ್ಟಾರೆ ಕುಮಾರಸ್ವಾಮಿ ಅವರ ಮಾತಿನ ಅರ್ಥ ಗಾಳಿ ಬಂದ ಕಡೆ ತೂರಿಕೊಳ್ಳಬೇಕೆನ್ನುವ ಯೋಚನೆಯಲ್ಲಿದ್ದಾರೆ. ಇತ್ತ ಬಿಜೆಪಿಗೂ ಸೈ ಇಲ್ಲ ಕಾಂಗ್ರೆಸ್ ಜೈ ಎನ್ನುವ ಪ್ಲಾನ್ ಮಾಡುತ್ತಿದ್ದಾರೆ.