ಬೆಂಗಳೂರು, (ಜೂನ್.05): ಜೂನ್ 18ರಂದು ರಾಜ್ಯದಲ್ಲಿ ಖಾಲಿಯಾಗಿರುವ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನಿಂದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೆಸರು ಫೈನಲ್ ಮಾಡಲಾಗಿದೆ. 

"

 

ಇತ್ತ ಜೆಡಿಎಸ್‌ನಿಂದಲೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಸ್ಪರ್ಧಿಸುವುದು ಬಹುತೇಕ ಫೈನಲ್ ಎನ್ನಲಾಗುತ್ತಿದೆ. .ಇನ್ನೂ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಚರ್ಚಿಸಲು ಇಂದು (ಶುಕ್ರವಾರ) ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಜೆಪಿ ಭವನದಲ್ಲಿ ನಡೆಯಿತು. ಸಭೆಯಲ್ಲಿ ಏನೆಲ್ಲಾ ಆಯ್ತು ಎನ್ನುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಕೆ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿ ಘೋಷಣೆ 

ಜೆಡಿಎಸ್ ಸಭೆಯಲ್ಲೇನಾಯ್ತು?

ಸಭೆಯಲ್ಲಿ ಜೆಡಿಎಸ್ ನಿಂದ ರಾಜ್ಯಸಭೆಗೆ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಾಯಿತು.  ಅಂತಿಮವಾಗಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರ ಅವರನ್ನ ರಾಜ್ಯಸಭೆಗೆ ಕಳುಹಿಸುವುದು ಸೂಕ್ತ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಕೆ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಇವತ್ತಿನ ಸಂಧರ್ಭದಲ್ಲಿ ದೇಶಕ್ಕೆ ದೇವೇಗೌಡರಂತಹ ನಾಯಕರ ಅವಶ್ಯಕತೆ ಇದೆ. ಇಲ್ಲಿಯ ತನಕ ಯಾವ ಕಾಂಗ್ರೆಸ್ ನಾಯಕರೂ ಸಂಪರ್ಕ ಮಾಡಿಲ್ಲ. ಆದರೆ ದೇವೇಗೌಡರು ಸ್ಪರ್ಧೆ ಮಾಡಿದರೆ ಪಕ್ಷಾತೀತವಾಗಿ ಬೆಂಬಲಿಸುತ್ತಾರೆ ಎಂದು ಎಚ್ ಕೆ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಲೆಕ್ಕಾಚಾರ

ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲು 46 ಮತಗಳು ಅಗತ್ಯವಿದೆ. ಈಗಿರುವ ಪರಿಸ್ಥಿತಿಯಲ್ಲಿ 2 ಸ್ಥಾನಗಳನ್ನು ಬಿಜೆಪಿ.ಸುಲಭವಾಗಿ ಗೆಲ್ಲಲಿದೆ.  ಎರಡು ಸ್ಥಾನಗಳನ್ನು ಗೆದ್ದ ಬಳಿಕ ಬಿಜೆಪಿ ಬಳಿ  25 ಮತಗಳು ಉಳಿಯಲಿವೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮತಗಳನ್ನು ಮೂರನೇಯ ಅಭ್ಯರ್ಥಿಗೆ ಹಾಕಲು ಬಿಜೆಪಿ ಲೆಕ್ಕಾಚಾರ ನಡೆಸಿದ್ದು, ಪರಿಸ್ಥಿತಿಯನ್ನು ನೋಡಿಕೊಂಡು ಅಂತಿಮ ತಿರ್ಮಾನ ಮಾಡಲು ನಿರ್ಧರಿಸಿದೆ. 

ಕಾಂಗ್ರೆಸ್ ಸಂಖ್ಯಾಬಲ
68 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ನಿಂದ ಖರ್ಗೆ ಗೆಲುವು ಖಚಿತವಾಗಿದೆ. ಖರ್ಗೆ ಪರ ಮತ ಚಲಾವಣೆಯ ಬಳಿಕ ಕಾಂಗ್ರೆಸ್ ಬಳಿ  22 ಮತಗಳು ಉಳಿಯಲಿವೆ. ಒಂದು ವೇಳೆ ದೇವೆಗೌಡರು ಕಣಕ್ಕಿಳಿದರೆ ಕಾಂಗ್ರೆಸ್‌ನ ಹೆಚ್ಚುವರಿ ಮತ ದೊಡ್ಡಗೌಡ್ರ ಪಾಲಾಗಲಿವೆ. 

ಜೆಡಿಎಸ್ ಬಲಾಬಲ
 34 ಮತಗಳು ಇರುವ ಹಿನ್ನೆಲೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಲು ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಮಾಜಿ ಪ್ರಧಾನಿ ದೇವೆಗೌಡ್ರು ಸ್ಪರ್ಧೆ ಮಾಡಿದ್ರೆ ಮಾತ್ರ ಇತರ ಪಕ್ಷಗಳ ಬೆಂಬಲ ನೀಡಲಿವೆ. ಆದ್ರೆ ದೇವೆಗೌಡ್ರು  ಸ್ಪರ್ಧೆ ಮಾಡದಿದ್ದರೆ ಬೇರೆ ಜೆಡಿಎಸ್ ಅಭ್ಯರ್ಥಿಗೆ ಮತ ಬೀಳುವುದು ಕಷ್ಟ ಎನ್ನವ ಲೆಕ್ಕಾಚಾರ ಜೆಡಿಎಸ್‌ನಲ್ಲಿ ನಡೆದಿದೆ. 

ದೇವೇಗೌಡ್ರು ಬಹುತೇಕ ಫೈನಲ್

ಹೌದು..2019ರ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿ ಸೋಲುಕಂಡಿರುವ ಎಚ್‌.ಡಿ.ದೇವೇಗೌಡ ಅವರು ರಾಜ್ಯಸಭಾ ಚುನಾವಣೆ ಅಖಾಡಕ್ಕಿಳಿಯುವು ಬಹುತೇಕ ಖಚಿತ. ಯಾಕಂದ್ರೆ ಮೂರನೇ ಅಭ್ಯರ್ಥಿಯಾಗಿ ದೇವೇಗೌಡ್ರು ಕಣಕ್ಕಿಳಿದರೆ ಕಾಂಗ್ರೆಸ್‌ನ 22 ಮತ್ತು ಜೆಡಿಎಸ್‌ನ  34 ಮತಗಳು ಒಟ್ಟು 56 ವೋಟ್‌ನೊಂದಿಗೆ ಗೌಡ್ರ ಪ್ರಯಾಸವಾಗಿ ಗೆಲುವು ಸಾಧಿಸಿಸುತ್ತಾರೆ. ಅಷ್ಟೇ ಅಲ್ಲದೇ ದೇವೇಗೌಡ್ರು ಸ್ಪರ್ಧಿಸಿದ್ರೆ ಬಿಜೆಪಿ ಮೂರನೇ ಅಭ್ಯರ್ಥಿ ಕಣ್ಣಕ್ಕಿಳಿಸುವುದು ಅನುಮಾನ.

ಅದೇ ಒಂದು ವೇಳೆ ದೇವೇಗೌಡ ಅವರನ್ನ ಬಿಟ್ಟು ಬೇರೆ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ರೆ, ಬಿಜೆಪಿ ಮೂರನೇ ಅಭ್ಯರ್ಥಿ ಕಣ್ಣಕ್ಕಿಳಿಸುವುದು ಪಕ್ಕಾ. ಆಗ ಜೆಡಿಎಸ್‌ ಅಸಮಾಧಾನಿತ ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಮತಗಳು ಸಹ ಗ್ಯಾರಂಟಿ ಇಲ್ಲ ಎನ್ನುವುದು ಜೆಡಿಎಸ್‌ ನಾಯಕರ ಲೆಕ್ಕಾಚಾರವಾಗಿದೆ.

ಒಟ್ಟಿನಲ್ಲಿ ಜೆಡಿಎಸ್ ಎಲ್ಲಾ ಲೆಕ್ಕಾಚಾರ ಮಾಡಿದ್ದು, ಅಂತಿಮಮವಾಗಿ ದೇವೇಗೌಡ ಅವರನ್ನ ಅಖಾಡಕ್ಕಿಳಿಸಲು ತೀರ್ಮಾನಿಸಿದೆ. ಒಂದು ವೇಳೆ ಗೌಡ್ರು ಓಕೆ ಅಂದ್ರೆ ಖರ್ಗೆ ಹಾಗೂ ಜೊತೆ ರಾಜ್ಯಸಭೆಗೆ ಎಂಟ್ರಿ ಕೊಡುವುದು ಪಕ್ಕಾ.

 ಡಿ.ಕುಪೇಂದ್ರ ರೆಡ್ಡಿ, ಪ್ರಭಾಕರ್ ಕೋರೆ, ರಾಜೀವ್ ಗೌಡ ಎಂ ವಿ ಮತ್ತು ಬಿಕೆ ಹರಿಪ್ರಸಾದ್ ಅವರ ಅವಧಿ ಮುಕ್ತಾಯಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಈ ತೆರವಾಗುತ್ತಿರುವ ಸ್ಥಾನಗಳಿಗೆ ದಿನಾಂಕ 19-06-2020ರಂದು ಚುನಾವಣೆ ನಡೆಯಲಿದೆ.