Asianet Suvarna News Asianet Suvarna News

Karnataka Politics: ಜೆಡಿಎಸ್ ಮುಳುಗುವ ಹಡಗು ಎಂದ ಸಿದ್ದುಗೆ ಕುಮಾರಸ್ವಾಮಿ ಟಾಂಗ್‌

*  ರಾಜ್ಯದ ಸಮಸ್ಯೆ ಪರಿಹರಿಸುವ ವಿಷಯಗಳಿಗೆ ಬೆಂಬಲ ಇದೆ
*  ಜನವಿರೋಧಿ ನೀತಿಗಳನ್ನು ವಿರೋಧಿಸುತ್ತೇವೆ 
*  ರಾಜ್ಯಕ್ಕೆ ಅನುಕೂಲವಾಗುವ ವಿಷಯ ಬಂದಾಗ ತೀರ್ಮಾನ ಬೇರೆ ಇರುತ್ತದೆ 
 

HD Kumaraswamy React on Former CM Siddaramaiah Statement grg
Author
Bengaluru, First Published Dec 22, 2021, 12:53 PM IST

ಬೆಳಗಾವಿ(ಡಿ.22):  ಜೆಡಿಎಸ್(JDS) ಮುಳುಗುವ ಹಡಗು, ತೇಲುವ ಹಡಗು ಎಂಬ ಬಗ್ಗೆ 2023ರಲ್ಲಿ ಜನ ತೀರ್ಮಾನ ಮಾಡುತ್ತಾರೆ. ಅದಕ್ಕೆ ಸಂಬಂಧಪಟ್ಟ ಹಾಗೆ ಸುದೀರ್ಘವಾದ ಟ್ವೀಟ್ ಮಾಡ್ತೇನೆ, ಅದನ್ನ ಜನರು ತೀರ್ಮಾನ ಮಾಡುತ್ತಾರೆ ಅಂತ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ(Siddaramaiah) ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ತಿರುಗೇಟು ನೀಡಿದ್ದಾರೆ. 

ಪರಿಷತ್‌‌ನಲ್ಲಿ(Vidhan Parishat) ಬಹುಮತ ಇಲ್ಲದ ಕಾರಣ ಜೆಡಿಎಸ್ ಸಹಕಾರ ಪಡೀತಿವಿ ಎಂಬ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪನವರ(BS Yediyurappam) ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ರಾಜ್ಯದ(Karnataka) ಸಮಸ್ಯೆ ಪರಿಹರಿಸುವ ವಿಷಯಗಳಿಗೆ ಬೆಂಬಲ ಇದೆ. ಈ ನಿಟ್ಟಿನಲ್ಲಿ ಯಾವುದೇ ಪಕ್ಷ ಏನೇ ಕೆಲಸ ಮಾಡಲಿ ಬೆಂಬಲ ಇದೆ. ಆದ್ರೆ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತೇವೆ ಅಂತ ತಿಳಿಸಿದ್ದಾರೆ. 

Violence In Belagavi: ಪುಂಡರನ್ನು ಮೊದಲು ಗಡೀಪಾರು ಮಾಡಿ, HDK ಆಗ್ರಹ

ಯಡಿಯೂರಪ್ಪನವರು ವೈಯಕ್ತಿಕವಾಗಿ ತಮ್ಮ ಭಾವನೆ ವ್ಯಕ್ತಪಡಿಸಿರಬಹುದು. ರಾಜ್ಯಕ್ಕೆ ಅನುಕೂಲವಾಗುವ ವಿಷಯ ಬಂದಾಗ ತೀರ್ಮಾನ ಬೇರೆ ಇರುತ್ತದೆ. ಜನವಿರೋಧಿ ನೀತಿ ಬಂದಾಗ ಬೇರೆ ತೀರ್ಮಾನವಾಗಿರುತ್ತದೆ. ಮುಂಬರುವ ಚುನಾವಣೆಯಲ್ಲಿ(Election) ಯಾವುದೇ ರೀತಿಯ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. 

ಹೊಂದಾಣಿಕೆ ಇರೋದು ಕಾಂಗ್ರೆಸ್(Congres)-ಬಿಜೆಪಿ(BJP) ನಡುವೇನೇ, ಕಾಂಗ್ರೆಸ್-ಬಿಜೆಪಿಯಲ್ಲೇ ಒಳ‌ಒಪ್ಪಂದ ಇರೋದು. ನಮಗೂ ಯಾವುದೇ ಪಕ್ಷಗಳಿಗೂ ಹೊಂದಾಣಿಕೆ ಇಲ್ಲ ಅಂತ ಕುಮಾರಸ್ವಾಮಿ ತಿಳಿಸಿದ್ದಾರೆ. 
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಎಚ್‌ಡಿಕೆ, ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ, ಅದು ಬಿಜೆಪಿಗೆ ಸಂಬಂಧಿಸಿದ ವಿಚಾರವಾಗಿದೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಅಂತ ಹೇಳಿದ್ದಾರೆ. 

ಸಾಲ ಮನ್ನಾಕ್ಕೆ ಅಡ್ಡಗಾಲು ಹಾಕಿದ್ದೇ ಕಾಂಗ್ರೆಸ್‌

ಹಾನಗಲ್ಲ ಚುನಾವಣೆಯಲ್ಲಿ ನಾನು ರೈತರ ಸಾಲಮನ್ನಾ ಮಾಡಿದ್ದು ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಕಳೆದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದ(Coalition Government) ಅವಧಿಯಲ್ಲಿ ಕಾಂಗ್ರೆಸ್‌ನ ಮೂವರು ಮತ್ತು ಜೆಡಿಎಸ್‌ ಇಬ್ಬರು ಶಾಸಕರು ಸೇರಿ ಸಮಿತಿ ರಚಿಸಲಾಗಿತ್ತು. ನಾವು ರೈತರ ಸಾಲ ಮನ್ನಾ ಮಾಡೋಣ ಎಂದರೆ ಕಾಂಗ್ರೆಸ್‌ನವರು ಬೇಡ ಎಂದು ಅಡ್ಡಗಾಲು ಹಾಕಿದ್ದರು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದರು.

ಹಾನಗಲ್ಲ(Hanagal) ಉಪಚುನಾವಣೆ(Byelection) ಪ್ರಚಾರ ವೇದಿಕೆಯಲ್ಲಿ ಮಾತನಾಡಿ, ಕೇವಲ ತಮ್ಮ ಭಾಗ್ಯ ಯೋಜನೆ ಮುಂದುವರಿಸಿ ಎಂದು ಹಠ ಹಿಡಿದಿದ್ದರು. ಆದರೆ, ನಾನು ಪಟ್ಟು ಹಿಡಿದು ರೈತರ ಸಾಲ ಮನ್ನಾ(Loan waiver) ಮಾಡಿಸಿದ್ದೆ. 2017ರಲ್ಲಿ ಸಿದ್ದರಾಮಯ್ಯ(Siddaramaiah) ಮುಖ್ಯಮಂತ್ರಿ ಇದ್ದಾಗ, ಹಾವೇರಿ ಜಿಲ್ಲೆಯಲ್ಲಿ 120 ರೈತರು(Farmers) ಆತ್ಮಹತ್ಯೆ ಮಾಡಿಕೊಂಡಿದ್ದರು. ಅಧಿಕಾರ ಇಲ್ಲದೆ ಇದ್ದರೂ ನಾನು ಆಗಮಿಸಿ, ಪ್ರತಿ ಕುಟುಂಬಕ್ಕೂ ತಲಾ 50 ಸಾವಿರ ಸಹಾಯ ಮಾಡಿದ್ದೆ. ಮುಂದಿನ ದಿನಗಳಲ್ಲಿ ನಾನು ಸಾರ್ವಜನಿಕವಾಗಿ ಕಣ್ಣೀರು ಹಾಕುವಂತೆ ಮಾಡಿದರು. ಅವರು ಕೊಟ್ಟ ನೋವಿಗೆ ನಾನು ಸಂಕಟ ಪಟ್ಟೆ ಎಂದು ಹೇಳಿದ್ದರು. 

Belagavi Riot: ಸೊಲ್ಲೆತ್ತದ ಕರ್ನಾಟಕದ ರಾಜಕಾರಣಿಗಳ ವಿರುದ್ಧ ಎಚ್‌ಡಿಕೆ ಕಿಡಿ

ರಾಜ್ಯದಲ್ಲಿ ಪ್ರಸ್ತುತ ಬಿಜೆಪಿ(BJP) ಆಡಳಿತದಲ್ಲಿರಲು ಸಿದ್ದರಾಮಯ್ಯ ಕಾರಣ. 2018ರಲ್ಲಿ ಅಲ್ಪಸಂಖ್ಯಾತರು ಜೆಡಿಎಸ್‌ಗೆ(JDS) ಮತ ಹಾಕಬೇಡಿ ಎಂದರು. ಅದೇ ಕಾರಣಕ್ಕೆ ಪಕ್ಷ ಹಿನ್ನಡೆ ಸಾಧಿಸಿತು. ಇದರಿಂದ ಜೆಡಿಎಸ್‌ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. 

ಸಿದ್ದರಾಮಯ್ಯ ಇದು ದರಿದ್ರ ಸರ್ಕಾರ ಎಂದು ಬಯ್ಯುತ್ತಿದ್ದಾರೆ. ಈ ದರಿದ್ರ ಸರ್ಕಾರ ಬರಲು ಸಿದ್ದರಾಮಯ್ಯ ಅವರೇ ಕಾರಣ. ಜೆಡಿಎಸ್‌ ಬಿಜೆಪಿಯ ಬಿ ಟೀಂ. ಅದಕ್ಕೆ ಮುಸಲ್ಮಾನರು(Muslims) ಜೆಡಿಎಸ್‌ಗೆ ಮತ ನೀಡಬೇಡಿ ಎಂದರು. ಅಪ್ಪನ ಆಣೆ ಎಚ್‌ಡಿಕೆ ಸಿಎಂ ಆಗಲ್ಲ ಎಂದರು. ಮುಸ್ಲಿಮರು ನಮ್ಮ ಕೈ ಹಿಡಿದಿದ್ದರೆ 65-70 ಸೀಟುಗಳಲ್ಲಿ ಗೆಲ್ಲುತ್ತಿದ್ದೆವು. ಆಗ ಚಿತ್ರಣ ಬೇರೆ ಇರುತ್ತಿತ್ತು ಎಂದು ಕುಮಾರಸ್ವಾಮಿ ತಿಳಿಸಿದ್ದರು. 
 

Follow Us:
Download App:
  • android
  • ios