ಎಚ್.ಡಿ.ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ: ಏಕವಚನದಲ್ಲಿ ಡಿ.ಕೆ.ಶಿವಕುಮಾರ್ ವಾಗ್ದಾಳಿ
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಅಭಿವೃದ್ದಿಗೆ ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳದೆ ಈಗ ಪುಕ್ಕಟ್ಟೆ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ ಎಂದು ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕೆ.ಆರ್.ನಗರ (ಏ.21): ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಅಭಿವೃದ್ದಿಗೆ ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳದೆ ಈಗ ಪುಕ್ಕಟ್ಟೆ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪ-ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು. ಪಟ್ಟಣದ ಪುರಸಭೆ ಬಯಲು ರಂಗಮಂದಿರದ ಆವರಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪರ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.
ಏಕವಚನದಲ್ಲಿಯೇ ಮಾಜಿ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ನೀನು ಅಧಿಕಾರದಲ್ಲಿದ್ದಾಗ ಜನರಿಗೆ ಮಾಡಿದ ಶಾಶ್ವತ ಕೆಲಸಗಳನ್ನು ತಿಳಿಸಬೇಕು ಎಂದರು. ನನ್ನ ಜಮೀನಿನಲ್ಲಿ ಬಂಡೆಕಲ್ಲು ಹೊಡೆಯಲು ನಿನಗೆ ಅರ್ಜಿ ಹಾಕಿಕೊಳ್ಳಬೇಕಾ ಎಂದು ಪ್ರಶ್ನಿಸಿದ ಅವರು, ಲೋಕಸಭಾ ಚುನಾವಣೆ ನಡೆದ ನಂತರ ಮೈಸೂರಿನಲ್ಲಿ ಒಂದು ವೇದಿಕೆ ನಿರ್ಮಿಸಿ ಅಲ್ಲಿ ನಾವು ಮತ್ತು ನೀವು ಮಾಡಿರುವ ಕೆಲಸಗಳ ಬಗ್ಗೆ ಜನರಿಗೆ ತಿಳಿಸೋಣ ಇದಕ್ಕೆ ನೀವು ಸಿದ್ದರಿದ್ದೀರಾ ಎಂದು ಸವಾಲು ಹಾಕಿದರು.
ಬಿಜೆಪಿ ಸುಳ್ಳು ಗ್ಯಾರೆಂಟಿಗೆ ವಾರೆಂಟಿ ಇಲ್ಲ: ಮಧು ಬಂಗಾರಪ್ಪ ಲೇವಡಿ
ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ: ಮಂಡ್ಯ ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳಾಗಿದ್ದ ಎಂ. ತಮ್ಮಣ್ಣ ಮತ್ತು ಸಿ.ಎಸ್. ಪುಟ್ಟರಾಜು ಅವರು ಚಾಕಲೇಟ್ ನೀಡಿರುವ ಕುಮಾರಸ್ವಾಮಿ, ತಾವೇ ಅಭ್ಯರ್ಥಿಯಾಗಿದ್ದು, ಅವರು ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ ಮುಂದೆ ಚನ್ನಪಟ್ಟಣದಲ್ಲಿಯೇ ರಾಜಕಾರಣ ಮಾಡಿಕೊಂಡಿರಿ ಎಂದು ಜನರು ತಿರಸ್ಕಾರ ಮಾಡುತ್ತಾರೆಂದು ತಿಳಿಸಿದರು.
ದೇಶ ಉದ್ಧಾರ ಬಿಜೆಪಿಯಿಂದ ಸಾಧ್ಯವಿಲ್ಲ: ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಬಿಜೆಪಿಯವರು ಜೆಡಿಎಸ್ ನವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಅದರಲ್ಲಿ ಅವರು ಸಫಲರಾಗುವುದಿಲ್ಲ. ದೇಶದ ಉದ್ದಾರ ಕಾಂಗ್ರೆಸ್ ನಿಂದ ಸಾಧ್ಯವೇ ಹೊರತು ದೇವಸ್ಥಾನ ತೋರಿಸಿ ಭಾವನಾತ್ಮಕ ರಾಜಕಾರಣ ಮಾಡುವ ಬಿಜೆಪಿಯವರಿಂದ ಸಾಧ್ಯವಿಲ್ಲ ಎಂದು ನುಡಿದರು. ಮಾಜಿ ಸಚಿವ ಸಾ.ರಾ. ಮಹೇಶ್ ನಾನು ಒಕ್ಕಲಿಗರ ನಾಯಕನಲ್ಲ ಎಂದು ಹೇಳಿದ್ದಾರೆ, ಅದು ನಿಜ ನಾನು ಒಂದು ಜನಾಂಗದ ನಾಯಕನಾಗದೆ ಸರ್ವ ಜನಾಂಗದವರ ಜೊತೆ ಇರಲು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿ ನಮ್ಮ ಸರ್ಕಾರ ಜಾತಿ ಆಧಾರಿತವಾಗಿ ಯೋಜನೆಗಳನ್ನು ಜಾರಿಗೆ ತರದೆ ಸರ್ವ ಒಳಿತಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿದೆಯೆಂದು ಹೇಳಿದರು.
ಪಿಕ್ ಪಾಕೆಟ್ ಕಲೆ ಕಾಂಗ್ರೆಸ್‌ಗೆ ಮಾತ್ರ ಗೊತ್ತು: ಸಿ.ಟಿ.ರವಿ ವ್ಯಂಗ್ಯ
ಮಂಡ್ಯ ಕ್ಷೇತ್ರಕ್ಕೆ ಏಕೆ ಬಂದಿದ್ದೀಯ: ಕಾರ್ಯಕ್ರಮದ ಉದ್ದಕ್ಕೂ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಏಕವಚನದಲ್ಲಿಯೇ ಮಾತಿನ ಪ್ರಹಾರ ನಡೆಸಿದ ಡಿ.ಕೆ. ಶಿವಕುಮಾರ್ ಹಾಸನ ಮತ್ತು ರಾಮನಗರ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟು ಮಂಡ್ಯ ಕ್ಷೇತ್ರಕ್ಕೆ ಏಕೆ ಬಂದಿದ್ದೀಯ ಎಂದು ಜರಿದರು.