ರಾಮನಗರದ ಹೆಸರು ಬದಲಾವಣೆಗೆ ಕುಮಾರಸ್ವಾಮಿಯಿಂದ ಅಡ್ಡಗಾಲು: ಡಿಕೆಶಿ ಕಿಡಿ
ನಾವೀಗ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡ್ತಿದ್ದೀವಿ. ಕುಮಾರಸ್ವಾಮಿಯವರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡದಂತೆ ಅವರು ಒತ್ತಡ ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಾಪ್ರಹಾರ ನಡೆಸಿದರು.

ಕನಕಪುರ (ಫೆ.16): ನಾವೀಗ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡ್ತಿದ್ದೀವಿ. ಕುಮಾರಸ್ವಾಮಿಯವರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡದಂತೆ ಅವರು ಒತ್ತಡ ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಾಪ್ರಹಾರ ನಡೆಸಿದರು. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಮನಗರದ ಅಭಿವೃದ್ಧಿಗೆ ಡಿಕೆಶಿ ಕೊಡುಗೆ ಏನೂ ಇಲ್ಲ ಎಂಬ ಎಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿ, ಯಾರು ಏನೇ ಒತ್ತಡ ಹೇರಿದರೂ ನಾನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೇ ಮಾಡ್ತೀನಿ.
ನಾವೆಲ್ಲ ಬೆಂಗಳೂರು ಜಿಲ್ಲೆಯವರು. ರಾಜ್ಯಕ್ಕೆ ಮಾದರಿ ಜಿಲ್ಲೆ ಮಾಡುವ ನನ್ನ ಕನಸನ್ನು ನನಸು ಮಾಡುತ್ತೇನೆ ಎಂದರು. ನಾವು ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ತರಹ ತಕರಾರು ಮಾಡುವ ಕೆಲಸಕ್ಕೆ ಹೋಗುವುದಿಲ್ಲ. ಈ ರೀತಿ ಚಿಲ್ಲರೆ ರಾಜಕಾರಣ ಮಾಡುತ್ತಾ ಕಾಲಹರಣ ಮಾಡಬೇಡಿ. ನೀವು ಅಧಿಕಾರದಲ್ಲಿದ್ದಾಗ ಏನು ಮಾಡಿದ್ರಿ. ಈಗ ನಿಮಗೆ ಕೇಂದ್ರದಲ್ಲಿ ಮಂತ್ರಿಗಿರಿ ಕೊಟ್ಟಿದ್ದಾರಲ್ಲ, ನೀವೇನು ಮಾಡುತ್ತಿದ್ದೀರಾ ಮೊದಲು ಅದನ್ನು ಹೇಳಿ. ನಾವು ಸಹಕಾರ ಕೊಡುತ್ತೇವೆ ಎಂದು ಏಕವಚನದಲ್ಲೇ ಕಿಡಿ ಕಾರಿದರು.
ದಲಿತ ಸಮಾವೇಶ ಬೇಡ ಎಂದು ಯಾರೂ ಹೇಳಿಲ್ಲ: ಸಚಿವ ದಿನೇಶ್ ಗುಂಡೂರಾವ್
ಒಂದೇ ಒಂದು ದಿನದಲ್ಲಿ ಮೇಕೆದಾಟು ಯೋಜನೆಗೆ ಸಹಿ ಹಾಕಿಸುತ್ತೇನೆ ಎಂದು ಹೇಳಿದಿರಲ್ಲ, ಇನ್ನೂ ಯಾಕೆ ಸಹಿ ಮಾಡಿಸಲಿಲ್ಲ. ನಿಮಗೆ ರಾಜಕಾರಣ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿ ಅಲ್ಲ, ದ್ವೇಷದ ರಾಜಕಾರಣವೇ ನಿಮಗೆ ದೊಡ್ಡದಾಗಿದೆ. ದೇಶದಲ್ಲಿ ನಾವೆಲ್ಲರೂ ಒಂದು ಎಂಬ ಭಾವನೆಯಿಂದ ನಾವು ಸಾಗುತ್ತೇವೆ. ದ್ವೇಷದಿಂದ ಯಾರು ಏನೂ ಸಾಧಿಸಲು ಸಾಧ್ಯವಿಲ್ಲ. ಚಿಲ್ಲರೆ ರಾಜಕಾರಣ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಸಹಕಾರ ಕೊಡಿ ಎಂದು ವಾಗ್ದಾಳಿ ನಡೆಸಿದರು.
ಎಚ್ಡಿಕೆ ವಿರುದ್ಧ ಡಿಸಿಎಂ ಡಿಕೆಶಿ ಕಿಡಿ: ರಾಜ್ಯದ ಅಭಿವೃದ್ಧಿ ವಿಚಾರವಾಗಿ ನನ್ನನ್ನು ಯಾವ ಸಚಿವರು ಭೇಟಿ ಮಾಡಿಲ್ಲ ಎಂಬ ಎಚ್‌ಡಿಕೆ ಹೇಳಿಕೆ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನೀನು ಅಧಿಕಾರದಲ್ಲಿದ್ದಾಗ ಏನ್ ಮಾಡಿದೆ ಮೊದಲು ಅದನ್ನ ಹೇಳಪ್ಪ, ನಾವೇನೋ ಸತ್ತೋಗಿದೀವಿ ಓಕೆ, ನೀನೇನ್ ಮಾಡಿದ್ದೀಯಾ, ಈಗ ಕೇಂದ್ರದಲ್ಲಿ ಮಂತ್ರಿಗಿರಿ ಕೊಟ್ಟಿದ್ದಾರಲ್ಲ, ನೀನೇನು ಮಾಡ್ತೀಯಾ ಮೊದಲು ಹೇಳು. ನಾವು ಸಹಕಾರ ಕೊಡ್ತೇವೆ. ಅವರು ಬರಿ ರಾಜಕೀಯ ಮಾಡ್ತಾ ಇದ್ದು ರಾಮನಗರ ಹೆಸರನ್ನು ದಕ್ಷಿಣ ಜಿಲ್ಲೆ ಅಂತ ಹೆಸರು ಬದಲಾವಣೆ ಮಾಡಲು ಹೊರಟರೆ ಕೇಂದ್ರದಲ್ಲಿ ಹೋಗಿ ತಕರಾರು ಮಾಡ್ತಿಯಾ? ನಾವು ಆ ತರ ತಕರಾರು ಮಾಡೊ ಕೆಲಸಕ್ಕೆ ಹೋಗೋದಿಲ್ಲ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಬಂದು ಏನು ಹೇಳಿದರೋ ಅದು ತಲೆಯಲ್ಲಿ ಇರಲಿ.
ಮೈಸೂರು ಪ್ರಕರಣ ಬೆನ್ನಲ್ಲೇ ಚಿಕ್ಕಮಗಳೂರಿನ ಮನೆಗಳ ಮೇಲೆ ಕಲ್ಲು ತೂರಾಟ
ಒಂದೇ ಒಂದು ದಿನದಲ್ಲಿ ಮೇಕೆದಾಟು ಯೋಜನೆ ಸಹಿ ಹಾಕಿಸ್ತೇನೆ ಅಂದಲ್ಲ, ಇನ್ನೂ ಯಾಕೆ ಸಹಿ ಮಾಡಿಸಲಿಲ್ಲ. ನಿನಗೆ ರಾಜಕಾರಣ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿ ಅಲ್ಲ, ದ್ವೇಷದ ರಾಜಕಾರಣನೇ ನಿನಗೆ ದೊಡ್ಡದಾಗಿದೆ. ದೇಶದಲ್ಲಿ ನಾವೆಲ್ಲರೂ ಒಂದು ಅಂತ ನಾವು ಹೋಗ್ತೇವೆ, ದ್ವೇಷದಿಂದ ಯಾರು ಏನು ಸಾಧಿಸಿಲ್ಲ, ದ್ವೇಷದಿಂದ ಎಂತೆಂತ ಚಕ್ರವರ್ತಿಗಳೆಲ್ಲ ಕೆಳಗೆ ಬಿದ್ದು ಹೋಗಿದ್ದಾರೆ ಎಂಬುದನ್ನು ಮರೆಯಬಾರದು, ರಾಜಕಾರಣದಲ್ಲಿ ಯಾರೂ ಶಾಶ್ವತ ಅಲ್ಲ. ರಾಜಕಾರಣದಲ್ಲಿ ಇರುವಷ್ಟು ದಿನ ಜನ ಸೇವಕರಾಗಿ ಕೆಲಸ ಮಾಡಬೇಕು. ಅದು ಬಿಟ್ಟು ಚಿಲ್ಲರೆ ರಾಜಕಾರಣ ಮಾಡುತ್ತಾ ಕಾಲಹರಣ ಮಾಡಬಾರದು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದರು.