ಬೆಂಗಳೂರು, (ಸೆ.11): ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇಂದು ಭೇಟಿಯಾಗಿದ್ದಾರೆ.

 ಹೌದು..ಮೈತ್ರಿ ಸರ್ಕಾರ ಪತನಗೊಂಡು ಒಂದು ವರ್ಷವಾದ ಬಳಿಕ ಇದೇ ಮೊದಲ ಬಾರಿಗೆ ಎಚ್‍ಡಿಕೆ, ಬಿಎಸ್‍ವೈ ಅವರನ್ನು ಭೇಟಿ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ.

ರಾಜಾಹುಲಿಗೆ ರಾಜಾಹುಲಿಯೇ ಸಾಟಿ; ಕರ್ನಾಟಕದಲ್ಲಿ ಬಿಎಸ್‌ವೈಗೆ ಇಲ್ಲ ಪೈಪೋಟಿ..! 

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ತಮ್ಮ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಹೊರಗೆ ಕಳುಹಿಸಿ ಸುಮಾರು 15ರಿಂದ 20 ನಿಮಿಷಗಳ ಕಾಲ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ್ದಾರೆ. ಇದರು ರಾಜಕೀಯ ವಲದಯಲ್ಲಿ ಸಂಚಲನ ಮೂಡಿಸಿದೆ.

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಿರುವ ಈ ಸಮಯದಲ್ಲಿ ಕುಮಾರಸ್ವಾಮಿ- ಯಡಿಯೂರಪ್ಪ ಭೇಟಿ ಅಚ್ಚರಿ ಮೂಡಿಸಿದೆ. ಈ ಉಭಯ ನಾಯಕರ ಭೇಟಿ ಹೊಸ ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗುತ್ತಾ?

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪ ಆಗ್ತಿರುವ ಬೆನ್ನಲ್ಲೇ ಎಚ್ಡಿಕೆ ಭೇಟಿ ರಹಸ್ಯವೇನು.? ರಾಜ್ಯ ರಾಜಕಾರಣ ಹೊಸ ತಿರುವು ಪಡೆದುಕೊಳ್ಳುತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಮುಖ್ಯಮಂತ್ರಿ ಸ್ಥಾನಕ್ಕೆ ಆಗಾಗ ಸಂತೋಷ್‌ ಜಿ ಹೆಸರು ಕೇಳಿ ಬರೋದ್ಯಾಕೆ?

ಇನ್ನು ಹಾಲಿ-ಮಾಜಿ ಸಿಎಂ ಭೇಟಿ ಕಾಂಗ್ರೆಸ್, ಜೆಡಿಎಸ್ ಮತ್ತು ಕಾಂಗ್ರೆಸ್‌ ಪಕ್ಷಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೇ ಮೂರು ಪಕ್ಷದ ಕಾರ್ಯಕರ್ತರಲ್ಲಿ ಹಾಗೇ ಹೀಗೆ ಅಂತ ಚರ್ಚೆಗಳು ನಡೆದಿವೆ.

ಒಟ್ಟಿನಲ್ಲಿ ರಾಜಕೀಯ ಬದ್ಧ ವೈರಿಗಳ ಭೇಟಿ ಸದ್ಯ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದಂತೂ ಸತ್ಯ.