Asianet Suvarna News Asianet Suvarna News

ಎಚ್‌.ಡಿ.ಕುಮಾರಸ್ವಾಮಿಗೆ ಒಕ್ಕಲಿಗರು ಬೆಳೆಯೋದು ಇಷ್ಟವಿಲ್ಲ: ಸ​ಚಿವ ಚ​ಲು​ವ​ರಾ​ಯ​ಸ್ವಾಮಿ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಕ್ಕಲಿಗ ನಾಯಕರು ಬೆಳೆಯುವುದನ್ನು ಸಹಿಸಲ್ಲ. ಒ​ಕ್ಕ​ಲಿ​ಗ​ರನ್ನು ಅ​ವರು ದೂರ ಇ​ಡುತ್ತಾ ಬಂದಿ​ದ್ದಾರೆ. ಮತ್ತೆ ನಾನು ಎಂದೂ ಗೆ​ಲ್ಲಲ್ಲ ಎಂದು ಅಂದು​ಕೊಂಡಿ​ದ್ದರು. 

HD Kumaraswamy does not like Vokkaliga to grow up Says Minister N Cheluvarayaswamy gvd
Author
First Published Jul 10, 2023, 10:42 AM IST

ಮಂಡ್ಯ (ಜು.10): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಕ್ಕಲಿಗ ನಾಯಕರು ಬೆಳೆಯುವುದನ್ನು ಸಹಿಸಲ್ಲ. ಒ​ಕ್ಕ​ಲಿ​ಗ​ರನ್ನು ಅ​ವರು ದೂರ ಇ​ಡುತ್ತಾ ಬಂದಿ​ದ್ದಾರೆ. ಮತ್ತೆ ನಾನು ಎಂದೂ ಗೆ​ಲ್ಲಲ್ಲ ಎಂದು ಅಂದು​ಕೊಂಡಿ​ದ್ದರು. ಮಂಡ್ಯದ ಜನ ನನ್ನನ್ನು ಪಾ​ಪದ ಹು​ಡುಗ ಎಂದು ಗೆ​ಲ್ಲಿ​ಸಿ​ಬಿ​ಟ್ಟಿ​ದ್ದಾರೆ. ನಾನು ಈಗ ಮಂತ್ರಿ ಆ​ಗಿ​ದ್ದೇನೆ. ಅ​ದನ್ನು ಸ​ಹಿ​ಸಿಕೊಳ್ಳಲು ಕುಮಾರಸ್ವಾಮಿಗೆ ಕಷ್ಟಆ​ಗುತ್ತಿದೆ ಎಂದು ಕೃಷಿ ಸ​ಚಿವ ಎನ್‌.ಚ​ಲು​ವ​ರಾ​ಯ​ಸ್ವಾಮಿ ಆರೋಪಿಸಿದರು. ನಗರದಲ್ಲಿ ಭಾನುವಾರ ಸು​ದ್ದಿಗಾ​ರ​ರೊಂದಿಗೆ ಮಾ​ತ​ನಾ​ಡಿ, ನ​ಮ​ಗೇನೂ ಅ​ವ​ರ ಮೇಲೆ ದ್ವೇಷ ಇಲ್ಲ. ಆದರೆ, ಅ​ವ​ರಿಗೆ ನ​ಮ್ಮನ್ನು ಕಂಡರೆ ಆ​ಗು​ವು​ದಿಲ್ಲ. 

ಇ​ದನ್ನು ಹಳೇ ಮೈ​ಸೂರು ಭಾ​ಗದ ಜ​ನತೆ ಅರ್ಥ ಮಾ​ಡಿ​ಕೊ​ಳ್ಳು​ತ್ತಿ​ದ್ದಾರೆ. ನಾನು ಒ​ಕ್ಕ​ಲಿಗ ನಾ​ಯಕ ಎಂಬ ಕಾ​ರ​ಣಕ್ಕೆ ನನ್ನ ಮೇಲೆ ದ್ವೇಷ ಕಾ​ರು​ತ್ತಿ​ದ್ದಾರೆ ಎಂದು ಬೇ​ಸರ ವ್ಯ​ಕ್ತ​ಪ​ಡಿ​ಸಿದರು. ಮಾಜಿ ಪ್ರಧಾನಿ ದೇ​ವೇ​ಗೌ​ಡರು ಪ್ರ​ಧಾನಿಯಾ​ಗಿ​ದ್ದ​ವರು. ನಾ​ವೆಲ್ಲಾ ಅ​ವ​ರನ್ನು ಪ್ರೀತಿ ಮಾ​ಡು​ತ್ತೇವೆ. ಕು​ಮಾ​ರ​ಸ್ವಾಮಿ ದೇ​ವೇ​ಗೌ​ಡರ ಹೆ​ಸ​ರನ್ನು ತ​ರದೆ ರಾ​ಜ​ಕೀಯ ಮಾ​ಡು​ವು​ದಕ್ಕೆ ಆ​ಗು​ವುದಿಲ್ಲ. ಅ​ದ​ಕ್ಕಾಗಿ ನಿತ್ಯ ದೇ​ವೇ​ಗೌ​ಡ​ರ ಹೆ​ಸರೆತ್ತುತ್ತಾರೆ ಎಂದು ಪ್ರ​ಶ್ನೆಯೊಂದಕ್ಕೆ ಉ​ತ್ತ​ರಿ​ಸಿ​ದರು. ಸ​ದ​ನ​ದಲ್ಲಿ ನಾವು ದೇ​ವೇ​ಗೌ​ಡರ ಹೆ​ಸ​ರು ಬ​ಳ​ಸಿಲ್ಲ. ದೇ​ವೇ​ಗೌ​ಡರ ಹೆ​ಸ​ರು ಬ​ಳ​ಸು​ವ​ವರೇ ಅ​ವರು. ಗೌ​ಡರ ಹೆ​ಸ​ರು ಹೇಳದಿದ್ದರೆ ತಮ್ಮ ಬೇ​ಳೆ​ಕಾಳು ಬೇ​ಯಲ್ಲ ಅ​ನ್ನು​ವುದು ಅ​ವ​ರಿಗೂ ಗೊ​ತ್ತಿದೆ. 

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ: ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ

ಆ​ದ್ದ​ರಿಂದಲೇ ನಿತ್ಯ ದೇ​ವೇ​ಗೌ​ಡರ ಹೆ​ಸ​ರೆತ್ತಿಯೇ ಮಾತು ಆ​ರಂಭಿ​ಸು​ತ್ತಾರೆ ಎಂದು ತಿರುಗೇಟು ನೀ​ಡಿ​ದರು. ಪೆನ್‌ಡ್ರೈವ್‌ ದಾಖಲೆ ನೀಡಲಿ: ವರ್ಗಾವಣೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸುಮ್ಮನೆ ಆರೋಪ ಮಾಡಿದರೆ ಸಾಲದು. ಸರ್ಕಾರದ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸರ್ಕಾರದ ವಿ​ರುದ್ಧ ಅವರ ಬಳಿ ಯಾವುದೇ ದಾ​ಖ​ಲೆ​ಗಳಿ​ದ್ದರೆ ಬಿ​ಡು​ಗಡೆ ಮಾ​ಡಲಿ ಸಂತೋಷ. ಬೇ​ಕಿ​ದ್ದರೆ ಸ​ದ​ನ​ದಲ್ಲೇ ದಾ​ಖಲೆಗಳನ್ನು ಬಿ​ಡು​ಗಡೆ ಮಾ​ಡಲಿ. ಅದನ್ನು ಬಿಟ್ಟು ಸುಮ್ಮನೆ ದಾಖಲೆ ಇದೆ ಎಂದು ಹೇಳಿ ಈ ಹಿಂದೆ ಜ​ನಾರ್ದನ​ರೆಡ್ಡಿ ಸಿಡಿಸಿದ ಸಿಡಿ ಬಾಂಬ್‌ ರೀತಿ ಆ​ಗು​ವುದು ಬೇಡ ಎಂದು ಟೀಕಿಸಿದರು.

ಹಸಿರೀಕರಣ ಅಗತ್ಯ: ಮರ ಗಿಡಗಳ ಕ್ಷೀಣಿಸುತ್ತಿರುವುದು ಪರಿಸರ ಹಾಗೂ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಆದ್ದರಿಂದ ಹಸಿರೀಕರಣ ಅಭಿಯಾನ ಮಾಡುವ ಅವಶ್ಯಕತೆ ಇದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಅರಣ್ಯ ಇಲಾಖೆ ಆಶ್ರಯದಲ್ಲಿ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಮರ ಗಿಡಗಳು ಕಡಿಮೆ ಆದರೆ ಅದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ. 

ಆಷಾಢ ಮಾಸದ ಕೊನೆಯ ಸೋಮವಾರ: ನಂದಿಗಿರಿ ಪ್ರದಕ್ಷಿಣೆ ಮಾಡುತ್ತಿರುವ ಭಕ್ತರು

ರಾಷ್ಟ್ರೀಯ ಅರಣ್ಯ ನೀತಿಯ ಗುರಿ ತಲುಪಲು ಅರಣ್ಯ ಪ್ರದೇಶದ ಖಾಲಿ ಜಾಗ, ಸರ್ಕಾರಿ ಸ್ಥಳ, ರಸ್ತೆ ಬದಿ, ಶೈಕ್ಷಣಿಕ ಸಂಸ್ಥೆ, ಇಲಾಖೆಗಳ ಅವರಣ, ರೈತರ ಜಮೀನಿನ ಬದು, ಕರೆ ಅಂಗಳ ಮತ್ತಿತರ ಪ್ರದೇಶಗಳಲ್ಲಿ ಹಸಿರೀಕರಣ ಕಾರ್ಯಕ್ರಮವನ್ನು ಅಭಿಯಾನವನ್ನಾಗಿ ಅನುಷ್ಠಾನಗೊಳಿಸುವುದು ಅವಶ್ಯಕವಾಗಿದೆ. ವಿತರಣೆ ಮಾಡಿದ ಸಸಿಗಳ ದಾಖಲಾತಿ ನಿರ್ವಹಿಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಬೆಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌.ಲಿಂಗರಾಜು, ಕೃಷಿ ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ ಹಾಜರಿದ್ದರು.

Follow Us:
Download App:
  • android
  • ios