* ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಗೆ ಕರೆ ಮಾಡಿದ ಕುಮಾರಸ್ವಾಮಿ* ಅಸಮಧಾನಿತ ಶಾಸಕರ ಮನವೊಲಿಕೆ ಕುಮಾರಸ್ವಾಮಿ ಕಸರತ್ತು* ಕಾದು ನೋಡುವ ತಂತ್ರಕ್ಕೆ ಶರಣಾದ ಶಾಸಕ ಎಸ್.ಆರ್. ಶ್ರೀನಿವಾಸ್
ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು
ತುಮಕೂರು, (ಮೇ.26): ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Eletions 2023) ಹತ್ತಿರವಾಗುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಶುರುವಾಗಿವೆ. ಅದರಲ್ಲೂ ಜೆಡಿಎಸ್, ಪಕ್ಷದಿಂದ ಹೊರ ಹೋಗುತ್ತಿರುವವರನ್ನ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದೆ
ಹೌದು...ರಾಜ್ಯರ ಗಮನಸೆಳೆದಿರುವ ಗುಬ್ಬಿ ವಿಧಾನಸಭಾ ಅಖಾಡದಲ್ಲಿ ಮೆಗಾ ಟೆಸ್ಟ್ ಸಿಕ್ಕಿದೆ . ಜೆಡಿಎಸ್‌ನಿಂದ ಹೊರಗೆ ಕಾಲಿಟ್ಟಿರುವ ಶಾಸಕ ಎಸ್ . ಆರ್ ಶ್ರೀನಿವಾಸ್‌ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ಮಾಡಿದ್ದಾರೆ . ಜತೆಗೆ ಜೆಡಿಎಸ್ ಘೋಷಿತ ಅಭ್ಯರ್ಥಿ ಬಿ.ಎಸ್.ನಾಗರಾಜು ಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ . ಶಾಸಕ ಎಸ್.ಆರ್.ಶ್ರೀನಿವಾಸ್ ಬಹುಕಾಲದಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ . ಬಹಿರಂಗವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಗುಡುಗಿದ್ದರು . ಅಷ್ಟೇ ಅಲ್ಲದ ಗುಬ್ಬಿ ತಾಲ್ಲೂಕಿನ ಸಿ.ಎಸ್ ಪುರ ಮೂಲದ ಬಿ.ಎಸ್.ನಾಗರಾಜು ಎಂಬುವರನ್ನು ಗುಬ್ಬಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದ್ದರು. ಆದರೆ , ಇದೀಗ ಚಿತ್ರಣ ಬದಲಾಗುವ ಸಾಧ್ಯತೆ ಕಂಡುಬಂದಿದೆ .
Karnataka Politics ಎಚ್‌ಡಿಕೆ ಸರಿಯಾಗಿ ನಡೆಸಿಕೊಂಡಿದ್ರೆ ಯಾರು ಹೋಗ್ತಿರಲಿಲ್ಲ, ಜೆಡಿಎಸ್ ರೆಬೆಲ್ ಶಾಸಕ ಸಿಡಿಮಿಡಿ
ಶ್ರೀನಿವಾಸ್‌ಗೆ ಎಚ್‌ಡಿಕೆ ಕರೆ
ಎಸ್.ಆರ್ . ಶ್ರೀನಿವಾಸ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಎಚ್.ಡಿ.ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ . ಶಾಸಕ ಶ್ರೀನಿವಾಸ್ ಗೆ ಎಚ್‌ಡಿಕೆ ಎರಡು ಬಾರಿ ಪೋನ್ ಕರೆ ಮಾಡಿದ್ದಾರೆಂದು ಖುದ್ದು ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ. ಆದರೆ ಶ್ರೀನಿವಾಸ್ ಪಕ್ಷ ಉಳಿವ ಅಥವಾ ಬೇರೊಂದು ಪಕ್ಷಕ್ಕೆ ಸೇರ್ಪಡೆಯಾಗುವ ವಿಚಾರದಲ್ಲಿ ಯಾವುದೇ ದೃಢ ನಿರ್ಧಾರ ತೆಗೆದುಕೊಂಡಿಲ್ಲ, ಡಿಸೆಂಬರ್‌ವರೆಗೆ ಕಾದುನೋಡುವುದಾಗಿ ತಿಳಿಸಿದ್ದಾರೆ
ಈ ಹಿಂದೆ ಎಸ್ . ಆರ್.ಶ್ರೀನಿವಾಸ್ ಕಾಂಗ್ರೆಸ್ ಗೆ ಹೆಜ್ಜೆ ಹಾಕುವ ಸೂಚನೆ ಸಿಗುತ್ತಿದ್ದಂತೆ ಗುಬ್ಬಿಯಲ್ಲಿ ಬೃಹತ್ ಸಮಾವೇಶ ಮಾಡಿ ಬಿ.ಎಸ್.ನಾಗರಾಜು ಅವರನ್ನು ಪಕಕ್ಕೆ ಸೇರಿಸಿಕೊಂಡು ಎಚ್. ಡಿ.ದೇವೇಗೌಡ , ಸಂಘಟನೆ ಹೊಣೆ ನೀಡಿ ಸ್ವತಃ ಎಚ್.ಡಿ.ಕುಮಾರ ಸ್ವಾಮಿ ಯವರೇ ಪಕ್ಷದ ಟಿಕೆಟ್ ಘೋಷಿಸಿದ್ದರು . ಅಂತೆಯೇ ನಾಗರಾಜು , ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ .
ಈಗ ಎಸ್.ಆರ್.ಶ್ರೀನಿವಾಸ್‌ಗೆ ಎಚ್.ಡಿ.ಕೆ ಕರೆ ಮಾಡಿರುವುದು ಗೊತ್ತಾಗುತ್ತಿದ್ದಂತೆ ಸಂಚಲನ ಸೃಷ್ಟಿಯಾಗಿದೆ . ಕೂಡಲೇ ನಾಗರಾಜು ಎಚ್‌ಡಿಕೆಗೆ ಕರೆ ಮಾಡಿದ್ದು , ಎಚ್‌ಡಿಕೆ ನಾಗರಾಜುಗೆ ಅಭಯ ನೀಡಿ ಸಂಘಟನೆ ಕೆಲಸವನ್ನು ಮುಂದುವರೆಸುವಂತೆ ತಿಳಿಸಿದ್ದಾರಂತೆ . ಹೀಗೆ ಎಚ್.ಡಿ.ಕುಮಾರಸ್ವಾಮಿ ಎಸ್.ಆರ್.ಶ್ರೀನಿವಾಸ್‌ಗೆ ಕರೆ ಮಾಡಿರುವುದು ಹಾಗೂ ಬಿ.ಎಸ್.ಹಾಗರಾಜುಗೂ ಸಂಘಟನೆ ಕೆಲಸ ಆಸೆಯನ್ನು ಮುಂದುವರೆಸಲು ತಿಳಿಸಿ ಟಿಕೆಟ್ ಜೀವಂತವಾಗಿರಿಸುವ ಮೂಲಕ ಗೊಂದಲ ಸೃಷ್ಟಿ ಮಾಡಿದ್ದಾರೆ .
