Asianet Suvarna News Asianet Suvarna News

ಎಚ್‌.ಡಿ.ಕುಮಾರಸ್ವಾಮಿ‘ಬ್ರಾಹ್ಮಣ ಸಿಎಂ ಬಾಂಬ್‌’ ಹಿಂದಿದೆ ಲೆಕ್ಕಾಚಾರ!

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಜಾತಿ ಮೂಲ ಕೆದಕಿ ಏಕಾಏಕಿ ವಾಗ್ದಾಳಿ ಆರಂಭಿಸಿರುವ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಆಡಳಿತಾರೂಢ ಬಿಜೆಪಿಯಲ್ಲಿ ಕೋಲಾಹಲ ಉಂಟು ಮಾಡಿದ್ದಾರೆ.

HD Kumaraswamy Brahmin CM Bomb is behind the Politics Calculation gvd
Author
First Published Feb 10, 2023, 2:20 AM IST | Last Updated Feb 10, 2023, 10:16 AM IST

ಬೆಂಗಳೂರು (ಫೆ.10): ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರ ಜಾತಿ ಮೂಲ ಕೆದಕಿ ಏಕಾಏಕಿ ವಾಗ್ದಾಳಿ ಆರಂಭಿಸಿರುವ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಆಡಳಿತಾರೂಢ ಬಿಜೆಪಿಯಲ್ಲಿ ಕೋಲಾಹಲ ಉಂಟು ಮಾಡಿದ್ದಾರೆ.

ಕುಮಾರಸ್ವಾಮಿ ಯಾವುದೇ ಪ್ರಬಲ ಕಾರಣಗಳಿಲ್ಲದೆ ಕೇವಲ ಪ್ರಹ್ಲಾದ್‌ ಜೋಶಿ ಅವರು ತಮ್ಮ ಕುಟುಂಬವನ್ನು ಉದಾಹರಿಸಿ ಪಕ್ಷದ ಪಂಚತಂತ್ರ ಯಾತ್ರೆಯನ್ನು ನವಗ್ರಹ ಯಾತ್ರೆ ಎಂಬ ಟೀಕೆ ಮಾಡಿದರು ಎಂಬ ಏಕೈಕ ಕಾರಣಕ್ಕೆ ಈ ಮಟ್ಟದ ವಾಗ್ದಾಳಿ ನಡೆಸುತ್ತಿರಲಿಕ್ಕಿಲ್ಲ. ಇದರ ಹಿಂದೆ ಅವರದೇ ಆದ ರಾಜಕೀಯ ಲೆಕ್ಕಾಚಾರಗಳಿವೆ ಎಂಬ ಮಾತು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್‌ಡಿಕೆ ಅಟ್ಯಾಕ್!

1- ತಮ್ಮ ಮೊದಲ ದಿನದ ಹೇಳಿಕೆಯಲ್ಲೇ ಕುಮಾರಸ್ವಾಮಿ ಅವರು ಸಂಘ ಪರಿವಾರ ಮತ್ತು ಬಿಜೆಪಿ ಬ್ರಾಹ್ಮಣ ವರ್ಗಕ್ಕೆ ಸೇರಿದ ಪ್ರಹ್ಲಾದ್‌ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುವ ಹುನ್ನಾರ ನಡೆಸಿದೆ. ಈ ಬಗ್ಗೆ ಲಿಂಗಾಯತ, ಒಕ್ಕಲಿಗ, ಹಿಂದುಳಿದ-ದಲಿತ ವರ್ಗದವರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದೇ ಇದೊಂದು ರಾಜಕೀಯ ತಂತ್ರ ಎಂಬುದು ಸ್ಪಷ್ಟವಾಗಿತ್ತು. ಅಂದರೆ, ಬ್ರಾಹ್ಮಣೇತರ ಸಮುದಾಯಗಳ ಮತದಾರರನ್ನು ಬಿಜೆಪಿಯಿಂದ ಚದುರಿಸಬೇಕು ಎಂಬ ಉದ್ದೇಶ ಇರಬಹುದು.

2- ವಿಶೇಷವಾಗಿ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಅವರ ಬಗ್ಗೆ ಸಹಾನುಭೂತಿ ತೋರಿಸಿದ್ದಲ್ಲದೆ ಯಡಿಯೂರಪ್ಪ ಅವರ ಸರ್ಕಾರವನ್ನು ಉರುಳಿಸಿದ್ದು ಬ್ರಾಹ್ಮಣರು ಎನ್ನುವ ಮೂಲಕ ಬಿಜೆಪಿಗೆ ಗಟ್ಟಿಯಾಗಿ ನಿಂತಿರುವ ಲಿಂಗಾಯತ ಮತದಾರರ ಮನಸ್ಸು ಕದಲಿಸುವ ಪ್ರಯತ್ನ ಮಾಡುತ್ತಿರಬಹುದು.

ನಾನೆಲ್ಲೂ ರಾಜ್ಯದ ಬ್ರಾಹ್ಮಣ ಜಾತಿ ನಿಂದಿಸಿಲ್ಲ: ಎಚ್‌.ಡಿ.ಕುಮಾರಸ್ವಾಮಿ

3-ಕುಮಾರಸ್ವಾಮಿ ಅವರ ಈ ಮಟ್ಟದ ಆಕ್ರೋಶ ಭರಿತ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ನವಗ್ರಹ ಯಾತ್ರೆ ಎಂಬ ಹೇಳಿಕೆ ಕೇವಲ ನೆಪವಾಗಿರಬಹುದು. ಆಡಳಿತಾರೂಢ ಬಿಜೆಪಿಯು ಇತ್ತೀಚೆಗೆ ಹಳೆ ಮೈಸೂರು ಭಾಗದಲ್ಲಿ ತನ್ನ ಸಂಘಟನೆ ಬಲಗೊಳಿಸುವುದಕ್ಕೆ ಮುಂದಾದ ಬೆನ್ನಲ್ಲೇ ಜೆಡಿಎಸ್‌ ಪಾಳೆಯದಲ್ಲಿ ಆತಂಕ ಕಾಣಿಸಿಕೊಂಡಿತು. ಜೆಡಿಎಸ್‌ನ ಪ್ರಾಬಲ್ಯ ಇರುವುದೇ ಹಳೆ ಮೈಸೂರು ಭಾಗದಲ್ಲಿ. ಅಲ್ಲಿಯೇ ಬಿಜೆಪಿ ಬೇರು ಬಿಡಲು ಆರಂಭಿಸಿದರೆ ಅದರ ನೇರ ಹಾಗೂ ಮೊದಲ ಪರಿಣಾಮ ಆಗುವುದೇ ಜೆಡಿಎಸ್‌ ಮೇಲೆ. ಹೀಗಾಗಿ, ಕುಮಾರಸ್ವಾಮಿ ಜೋಶಿ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ಆರಂಭಿಸಿರಬಹುದು. ಇದರಿಂದ ಕನಿಷ್ಠ ಬ್ರಾಹ್ಮಣೇತರ ವರ್ಗದ ಅದರಲ್ಲೂ ವಿಶೇಷವಾಗಿ ಒಕ್ಕಲಿಗ ಮತದಾರರಾದರೂ ಬಿಜೆಪಿ ಕಡೆ ಹೋಗದಿರಲಿ ಎಂಬ ತಂತ್ರ ಇರಬಹುದು.

Latest Videos
Follow Us:
Download App:
  • android
  • ios