'ಮೋದಿ ಮೋದಿ ಅಂತ ಘೋಷಣೆ ಹಾಕ್ತಾರೆ, ಮೋದಿ ಹತ್ರ ಹೋಗಿ ನ್ಯಾಯ ಕೇಳಲಿ'

* ಕುಮಾರಸ್ವಾಮಿ ಕಾರು ಬೆನ್ನತ್ತಿದ ಪಿಎಸ್‌ಐ ವಂಚಿತ ಅಭ್ಯರ್ಥಿಗಳು
* ಧಾರವಾಡದ ಕವಿವಿ ಬಳಿ ಹೈಡ್ರಾಮಾ
* ಮನವಿ ಮಾಡಲು ಬಂದ ಅಭ್ಯರ್ಥಿಗಳ ವಿರುದ್ಧ ಎಚ್‌ಡಿಕೆ ಆಕ್ರೋಶ

HD Kumaraswamy Angry On Who psi scam candidates Who lay-siege-to car in dharwad rbj

ಧಾರವಾಡ, (ಜೂನ್ 04) : ಮಾಜಿ ಸಿಎಂ ಕುಮಾರಸ್ವಾಮಿ  ಅವರು ಇಂದು(ಶನಿವಾರ) ಕವಿವಿ ಆವರಣದಲ್ಲಿ ಶಿಕ್ಷಕರ ಪ್ರತಿಬಟನೆಯ ಮನವಿ ಆಲಿಸಲಿಕ್ಕೆ ಬಂದಿದ್ದರು. ಈ ವೇಳೆ  ಪಿಎಸ್‌ಐ ವಂಚಿತ ಆಕಾಂಕ್ಷಿಗಳು ಕುಮಾರಸ್ವಾಮಿ ಕಾರಿಗೆ ಘೆರಾವ್ ಹಾಕಿ ಹೈಡ್ರಾಮಾ ಮಾಡಿದ್ದಾರೆ.

56 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯ ಆಗಿಲ್ಲ. ಅನ್ಯಾಯ ಆಗಿದ್ದು, 545 ಅಭ್ಯರ್ಥಿಗಳಿಗೆ ಎಂದ ಕುಮಾರಸ್ವಾಮಿ ಅವರು ಹೇಳಿಕೆ ಕೊಟ್ಟ ಬೆನ್ನಲ್ಲೇ ಕುಮಾರಸ್ವಾಮಿಗೆ ದಿಕ್ಕಾರ ಕೂಗಿ ಆಕ್ರೋಶವನ್ನ ಹೊರ ಹಾಕದರು. ಇದರಿಂದ ಕವಿವಿ ಕುಲಪತಿಯ ಕಚೇರಿ ಮುಂದೆ ಹೈಡ್ರಾಮಾ ನಡೆಯಿತು. ಇನ್ನೆನೂ ಮನವಿ ಸ್ವಿಕರಿಸಿ ಹೊರ ಹೋಗ ಬೇಕಾದಾಗ ಮಾಜಿ ಸಿಎಂ ಕುಮಾರಸ್ವಾಮಿ ಕಾರಿಗೆ ವಿದ್ಯಾರ್ಥಿಗಳು ಮುಗಿಬಿದ್ದರು. ಆ ವೇಳೆ ಗನ್ ಮ್ಯಾನ್ ಓರ್ವ ತಡೆದು ಕಪಾಳಕ್ಕೆ ಹೊಡೆದಿದ್ದಾರೆ. 

ಕುಮಾರಸ್ವಾಮಿ ಕಾರು ಬೆನ್ನತ್ತಿದ ಪಿಎಸ್‌ಐ ವಂಚಿತ ಅಭ್ಯರ್ಥಿಗಳು 

ಹೈಡ್ರಾಮದ ವಿಚಾರವಾಗಿ  ಮಾದ್ಯಮಗಳಿಗೆ ಮಾತನಾಡಿದ ಎಚ್ಡಿಕೆ,  ಮನವಿ ಕೊಡಲಿಕೆ ಬರುವವರು ವಾಹನದ ಮೇಲೆ ಹೀಗೆ ನುಗ್ತಾರಾ. ಗೃಹ ಸಚಿವರಿಗೆ ಸರಿಯಾಗಿ ಭದ್ರತೆ  ಕೊಡಲಿಕ್ಕೆ ಹೇಳಿ. ಪೊಲೀಸರು ನನಗೆ ಸರಿಯಾಗಿ ಭದ್ರತೆ ಕೊಟ್ಟಿಲ್ಲ. ಕಾರಿಗೆ  ಮುತ್ತಿಗೆ ಹಾಕಲು ಯಾರು ಕಳಿಸಿದ್ದಾರೆ. ಮೋದಿ ಮೋದಿ ಅಂತ ಘೋಷಣೆ ಹಾಕ್ತಾರೆ, ಮೋದಿ ಹತ್ರ ಹೋಗಿ ನ್ಯಾಯ ಕೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅವರು ಮನವಿ ಕೊಡಲಿಕ್ಕೆ ಬಂದಿರಲಿಲ್ಲ. ಅವರು ರೌಡಿಸಂ ತರ ನಡೆದುಕೊಳ್ಳಲು ಬಂದವರು ಮನವಿ ಕೊಡಲಿಕ್ಕೆ ಹೀಗೆ ಬರ್ತಾರಾ..? ಯಾರೋ ಉದ್ದೇಶಪೂರ್ವಕವಾಗಿ ಕಳಿಸಿಕೊಟ್ಟಿದ್ದಾರೆ ನಾನು ಬಹಳ ದಿನದಿಂದ ನೋಡಿದ್ದೇನೆ, ಬಿಜೆಪಿ ನಾಯಕರಿಗೆ ಹೇಳಿದ್ದೇನೆ ಈ ಆಟ ನಡೆಯಲ್ಲ ಎಂದು ಅವರನ್ನ ಯಾರೋ ಉದ್ದೆಶಪೋರ್ವಕವಾಗಿ ಕಳಸಿದ್ದಾರೆ. ಯಾರೋ ಒಬ್ಬ ಬಂದು 56 ಸಾವಿರ ಜನ ಮಾನಸಿಕವಾಗಿದ್ದಾರೆ ಅಂತ ಹೇಳುತ್ತಾರೆ. ಮೊದಲೇ ನಾನು ಇಬ್ಬರ ಮನವಿಯನ್ನ ಸ್ವೀಕರಿದ್ದೇನೆ. ನನ್ನ ಮೇಲೆ ಗಲಭೆಕೊರರಂತೆ ನುಗ್ಗಿದ್ದಾರೆ ಯಾರವರು? ಸರ್ಕಾರ ಈಗಾಗಲೇ ಪರೀಕ್ಷೆ ರದ್ದು ಮಾಡಿದೆ. ಸರ್ಕಾರ ನಂದಿಲ್ಲ ನಾನ್ ಹೇಗೆ ನ್ಯಾಯ ಕೊಡಲಿಕ್ಕೆ ಬರುತ್ತದೆ ಎಂದು ಕಿಡಿಕಾರಿದರು.

 ಪರ ವಿರೋಧದ ಅಭ್ಯರ್ಥಿಗಳು ಹೈಡ್ರಾಮಾ ಮಾಡಿದ್ದಾರೆ ನಾನು ಅವರ ಮನವಿಗಳನ್ನ ಆಲಿಸಿದ್ದೆನೆ, ಒಂದು ಗುಂಪು ಸೆಲೆಕ್ಷನ್ ಆದವರು ಬಂದಿದ್ರು ಇನ್ನೊಂದು ಗುಂಪಿನವರು ಮರು ಪರೀಕ್ಷೆ ಆಗಬೇಕು ಎಂದು ಮನವಿ ಮಾಡಿಕ್ಕೊಂಡಿದ್ದಾರೆ. ಇಬ್ಬರು ಸೇರಿ ಘರ್ಷಣೆ ಮಾಡಿಕ್ಕೊಂಡವರು. ಮರು ಪರಿಕ್ಷೆ ಮಾಡುತ್ತೆವೆ ಎಂದು ಸರಕಾರ ಹೇಳಿದೆ ಯಾವಾಗ ಮಾಡ್ತಾರೆ ಗೊತ್ತಿಲ್ಲ ವಿಧಾನಸಭೆಯ ಕಲಾಪ ಆರಂಭ ಆದ್ರೆ ಅಲ್ಲಿ ಚರ್ಚೆ ಮಾಡಬಹುದು. ಜುಲೈ ನಲ್ಲಿ ಸಭೆ ಕರೆಯಬಹುದು ಆ ಸಂಧರ್ಭದಲ್ಲಿ ಎರಡು ಗುಂಪಿನಿಂದ ಮಾಹಿತಿ ಪಡೆದು ಚರ್ಚೆ ಮಾಡುವೆ ಎಂದ ಕುಮಾರಸ್ವಾಮಿ ಹೇಳಿದರು.

Latest Videos
Follow Us:
Download App:
  • android
  • ios