ಮಾಜಿ ಸ್ಪೀಕರ್ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಹಿಂದಿದ್ದ ಮೈತ್ರಿ ಸರ್ಕಾರ ಕೆಡವಲು ಈ ಇಬ್ಬರೇ ಕಾರಣ ಎನ್ನಲಾಗಿದೆ.
ಚನ್ನಪಟ್ಟಣ (ಫೆ.27): ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನ ಗೊಂಡಿದ್ದರ ಹಿಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅವರ ಪಾತ್ರ ಇದೆ ಎಂದು ನೇರ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈ ಇಬ್ಬರು ಗ್ರೇಟ್ ಸೆಕ್ಯುಲರ್ ಲೀಡರ್‌ಗಳು ಹುನ್ನಾರ ಮಾಡಿ ಸರ್ಕಾರ ಬೀಳಿಸಿದರು ಎಂದು ವ್ಯಂಗ್ಯವಾಡಿದ್ದಾರೆ.
ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಬಿದ್ದರೆ ಯಡಿಯೂರಪ್ಪ ಸಿಎಂ ಆಗುತ್ತಾರೆ. ಅವರು 6 ತಿಂಗಳಲ್ಲಿ ಹೆಸರು ಕೆಡಿಸಿಕೊಳ್ಳುತ್ತಾರೆ, ಮತ್ತೆ ನಾವೇ ಸಿಎಂ ಆಗಬಹುದು ಎಂಬುದು ಇವರ ಗ್ರೇಟ್ ಪ್ಲಾನ್ ಆಗಿತ್ತು. ನಾನು ರೈತರ ಸಾಲ ಮನ್ನಾ ಆಗಿದ್ದರಿಂದ ಸರ್ಕಾರ ಉಳಿಸಿಕೊಳ್ಳಲು ಆಸಕ್ತಿ ಇಲ್ಲದೆ ಬಿದ್ದರೆ ಬೀಳಲಿ ಎಂದು ಸುಮ್ಮನಾದೆ. ಪ್ರಯತ್ನ ಮಾಡಿದ್ದರೆ ಸರ್ಕಾರ ಉಳಿಸಿಕೊಳ್ಳಬಹುದಾಗಿತ್ತು ಎಂದರು.
1 ಪೀಸ್ ಕುರಿ ಮಾಂಸ ತಿನ್ನಿ, ಕತೆಯೇ ಬೇರೆ : ಕಾಲೆಳೆದ ರಮೇಶ್ ಕುಮಾರ್ ..
ಪಾಪ ಡಿಕೆಶಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಪ, ಸಿಎಂ ಆಗಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ. ಆದರೆ ಇತ್ತ ನಾನೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಬೋರ್ಡು ನೇತುಹಾಕಿಕೊಂಡು ಓಡಾಡುತ್ತಿದ್ದಾರೆ. ಈ ಇಬ್ಬರು ನಾಯಕರು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದರು.
Last Updated Feb 27, 2021, 11:34 AM IST