ಬೆಂಗಳೂರು(ಜೂ. 25)  ಸಚಿವ ನಾರಾಯಣ ಗೌಡ ವಿರುದ್ದ ಮಾಜಿ ಪ್ರಧಾನಿ ಗರಂ ಎಚ್‌ಡಿ. ದೇವೇಗೌಡ ಗರಂ ಆಗಿದ್ದಾರೆ.  ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆಯಲ್ಲಿ ವೈಷಮ್ಯದ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಗೌಡರ ಪ್ರಮುಖ ಆರೋಪ.

ಜಲ್ಲಿ ಕ್ರಷರ್ ನಡೆಸುತ್ತಿರುವ ಎಚ್.ಟಿ. ಮಂಜು ಅವರ ವಿರುದ್ದ ನಾರಾಯಣ ಗೌಡ ಸೇಡಿನ ರಾಜಕಾರಣ ಮಾಡಿದ್ದಾರೆ.  ಸರ್ಕಾರದಿಂದ ಎಲ್ಲ ಪರವಾನಗಿ ಪಡೆದಿದ್ದರೂ ಕೂಡಾ ಕ್ರಷರ್ ನಡೆಸಲು ಸಚಿವರು ಬಿಡುತ್ತಿಲ್ಲ ಎಂದಿರುವ ಗೌಡರು ಮುಖ್ಯಮಂತ್ರಿ, ಕಂದಾಯ ಮಂತ್ರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂತ್ರಿ, ಉಪ ಮುಖ್ಯ ಮಂತ್ರಿಗೆ ಈಗಾಗಲೇ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

ನರೇಂದ್ರ ಮೋದಿಗೆ ದೇವೇಗೌಡ ಕೊಟ್ಟ ಆರು ಸಲಹೆ

ಸಂಬಂಧ ಪಟ್ಟವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡುತ್ತೇನೆ.  ಇದೇ ತಿಂಗಳ 29 ರಂದು ಧರಣಿ ಮಾಡುತ್ತೇನೆ ಎಂದು  ಮಾಧ್ಯಮ ಹೇಳಿಕೆ ಮುಖೇನ ಗೌಡರು ಎಚ್ಚರಿಕೆ ನೀಡಿದ್ದಾರೆ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕರಾಗಿದ್ದ ನಾರಾಯಣ ಗೌಡ ರಾಜೀನಾಮೆ ನೀಡಿ ಬಿಜೆಪಿಯಿಂದ ಮತ್ತೆ ಕೆಆರ್ ಪೇಟೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದಿದ್ದರು.  ಗೆದ್ದು ಬಂದು ಈಗ ಸಚಿವರು ಸಹ ಆಗಿದ್ದಾರೆ.