ಬೆಂಗಳೂರು, [ಜ.02]: ಮೈತ್ರಿ ಸರ್ಕಾರದಲ್ಲಿ ದಿನಕ್ಕೊಂದು ಮುಸುಕಿನ ಗುದ್ದಾಟ ನಡೆಯುತ್ತಿದೆ ಎನ್ನುವುದಕ್ಕೆ ಮತ್ತೊಮ್ಮೆ ಸಾಬೀತಾಗಿದೆ.

ದೋಸ್ತಿ ಪಕ್ಷಗಳ ನಡುವೆ ಅಧಿಕಾರ ಹಂಚಿಕೆಯಲ್ಲಿ ಭಾರೀ ಬಿರುಕು ಉಂಟಾಗಿರುವ ಬೆನ್ನಲ್ಲೇ ಮುಂಬರುವ ಲೋಕಸಭಾ ಚುನಾವಣೆ ಸೀಟು ಹಂಚಿಕೆಯಲ್ಲಿ ಮತ್ತೊಂದು ಮುಸುಕಿನ ಗುದ್ದಾಟ ಜೋರಾಗಿ ನಡೆದಿದೆ.

ಲೋಕಕ್ಕೂ ದೋಸ್ತಿ ಫಿಕ್ಸ್...ಜೆಡಿಎಸ್‌ಗೆ ಎಷ್ಟು ಸೀಟು? ಗೌಡರ ಶರಾ!

ಕಾಂಗ್ರೆಸ್ ಜೊತೆಗೂಡಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಜೊತೆಗೆ ಜೆಡಿಎಸ್ ಪಕ್ಷವನ್ನು ಬಲಪಡಿಸಬೇಕು ಅನ್ನೋದು ದೇವೇಗೌಡರ ಪ್ಲಾನ್ ಆಗಿದೆ. ಇದ್ರಿಂದ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ದೊಡ್ಡಗೌಡ್ರು ಕಣ್ಣು ಹಾಕಿದ್ದಾರೆ.

ಬೆಂಗಳೂರು ಉತ್ತರದಲ್ಲಿ ಒಕ್ಕಲಿಗರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ದೇವೇಗೌಡ ಅವರದ್ದಾಗಿದ್ದು, ದೇವೇಗೌಡ ಅವರ ಈ ದಾಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿದಾಳ ನಡೆಸಿದ್ದಾರೆ.

ಲೋಕಸಭೆ ಚುನಾವಣೆ: ದೋಸ್ತಿ ಸರ್ಕಾರದಲ್ಲಿ ಮೈತ್ರಿನಾ? ಕುಸ್ತಿನಾ?

ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯಲ್ಲಿ 8 ಕ್ಷೇತ್ರಗಳ ಪೈಕಿ 5 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅಷ್ಟೇ ಅಲ್ಲದೇ ಅಹಿಂದ ಮತಗಳಿಂದ ಕಾಂಗ್ರೆಸ್ ಗೆಲ್ಲುವ ಅವಕಾಶವಿದ್ದು, ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಡದಿರಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಎಚ್.ಎಮ್ ರೇವಣ್ಣ ಅವರನ್ನ ಮುಂದೆ ಬಿಟ್ಟಿರುವ ಸಿದ್ದರಾಮಯ್ಯ ದೊಡ್ಡಗೌಡ್ರಿಗೆ ಟಾಂಗ್ ಕೊಡಲು ಮುಂದಾಗಿದ್ದು, ತಮ್ಮ ಸಮುದಾಯದ ಎಚ್.ಎಮ್ ರೇವಣ್ಣ ಅವರನ್ನ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ರಣತಂತ್ರ ರೂಪಿಸಿದ್ದಾರೆ.

ಬೆಂಗಳೂರು‌ ಉತ್ತರದ ಮೇಲೆ ಗೌಡರ ಕಣ್ಣು ಬೀಳುತ್ತಿದ್ದಂತೆ ನಾನು ಆಂಕಾಂಕ್ಷಿ  ಎಂದು ಇಚ್ಚೆ ವ್ಯಕ್ತಪಡಿಸಿದ ಎಚ್.ಎಮ್ ರೇವಣ್ಣ, ರಾಹುಲ್ ಗಾಂಧಿ ಅವರ ಒತ್ತಾಯಕ್ಕೆ ಚೆನ್ನಪಟ್ಟಣದಿಂದ ಸ್ಪರ್ಧಿಸಿದ್ದೆ. 

ಈಗ ಬೆಂಗಳೂರು ಉತ್ತರದಿಂದ ಸ್ಪರ್ಧಿಸಬೇಕು ಎಂದಿದ್ದೇನೆ. ಮೈತ್ರಿ ವಿಚಾರದಲ್ಲಿ ಏನಾಗುತ್ತೋ ಗೊತ್ತಿಲ್ಲ. ಪಕ್ಷ ಏನು ಹೇಳುತ್ತೆ ನೋಡೊಣ ಎಂದ ಎಚ್.ಎಮ್ ರೇವಣ್ಣ ಹೇಳಿದ್ದಾರೆ. ಇದ್ರಿಂದ ದೇವೇಗೌಡರಿಗೆ ನಿದ್ದೆಗೆಡೆಸಿದೆ. 

ಬೆಂಗಳೂರು ಉತ್ತರದಲ್ಲಿ ದೇವೇಗೌಡರು ಸ್ಪರ್ಧಿಸುವ ಹಿಂಟ್ ಸಿಕ್ಕ ಹಿನ್ನೆಲೆಯಲ್ಲಿ ಕ್ಷೇತ್ರ ಬದಲಿಸುವ ಪ್ಲಾನ್ ಮಾಡಿದ್ದ ಹಾಲಿ ಸಂಸದ ಡಿ.ವಿ ಸದಾನಂದ ಗೌಡ ಅವರು  ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮೇಲೆ ಕಣ್ಣೀಟ್ಟಿದ್ದಾರೆ. 

ಒಟ್ಟಿನಲ್ಲಿ ದೇವೇಗೌಡರ ದಾಳಕ್ಕೆ ಸಿದ್ದರಾಮಯ್ಯ ಪ್ರತಿದಾಳ ಉರುಳಿಸಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.