ನವದೆಹಲಿ[ಜ.01]  ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು 10-11 ಸೀಟ್‌ಗಳನ್ನು ಕಾಂಗ್ರೆಸ್ ಬಿಟ್ಟುಕೊಡಲಿದೆ. ಲೋಕಸಭೆಯಲ್ಲಿ ಮೂರನೇ ಒಂದು ಭಾಗ ಜೆಡಿಎಸ್ ಗೆ ಕೊಡುವ ಬಗ್ಗೆ ಮಾತು ಆಗಿದೆ. ಸೀಟ್ ತೀರ್ಮಾನ ಆಗಿಲ್ಲ. ಜನವರಿ ಒಳಗೆ ಎಲ್ಲವೂ ಅಂತಿಮವಾಗಲಿದೆ‌ ಎಂದು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಹೇಳಿದ್ದಾರೆ. 

"

ನವದೆಹಲಿಯಲ್ಲಿ ಮಾತನಾಡಿದ ದೇವೇಗೌಡರು,  ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ 6500 ಕೋಟಿ ಮತ್ತು ಕುಮಾರಸ್ವಾಮಿ ಸರ್ಕಾರದ 3500 ಕೋಟಿ ಸೇರಿ ಒಟ್ಟು 10 ಸಾವಿರ ಕೋಟಿ ರೂ. ಅಪೇಕ್ಸ್ ಬ್ಯಾಂಕ್ ಗೆ ಸಾಲ ಮನ್ನಾ ಆಗಿದೆ.

ದೋಸ್ತಿ ಸರ್ಕಾರದ ಬಗ್ಗೆ ದೇವೇಗೌಡರ ಎಚ್ಚರಿಕೆ ಸಂದೇಶ

ರಾಜ್ಯದ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪಾರದರ್ಶಕ ರೀತಿಯಲ್ಲಿ 60 ಸಾವಿರ ರೈತರ ಸಾಲ ಮನ್ನಾ ಮಾಡಿದೆ.  ಪ್ರಧಾನಿ ಅವರು ಇದನ್ನು ವ್ಯಂಗ್ಯವಾಗಿ ಟೀಕಿಸುತ್ತಿರುವುದು ಸರಿಯಲ್ಲ  ನಾನು ಅವರಿಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಲಾರೆ‌.

ನಾಡಿದ್ದು ಜಾತ್ಯತೀತ ಕರ್ನಾಟಕದ ಎಲ್ಲ ಮುಖಂಡರ ಸಭೆ ಕರೆಯಲಾಗಿದೆ‌. ಬೋರ್ಡ್ ಗಳಿಗೆ ಮೆಂಬರ್ ಗಳ ಬಗ್ಗೆ ಸದಸ್ಯರ ಬಗ್ಗೆ ಚರ್ಚೆ ಮಾಡುತ್ತೇವೆ. ಪೋರ್ಟ್ ಪೊಲಿಯೋ ಸೇರಿದಂತೆ ಎಲ್ಲವೂ ಈ ಫಾರ್ಮುಲಾದ ಪ್ರಕಾರವೇ ಹಂಚಿಕೆಯಾಗಿದೆ.  ಕುಮಾರಸ್ವಾಮಿ ಅವರ ಆರೋಗ್ಯ ಸರಿಯಿಲ್ಲ ಎಂದು ವದಂತಿ ಆಗಿತ್ತು.