ಜೆಡಿಎಸ್ ಹಾಸನ ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಮಾಜಿ ಪ್ರಧಾನಿ ದೇವೇಗೌಡರು ಮಣಿಪಾಲ್ ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ದಾರೆ.

ಬೆಂಗಳೂರು (ಏ.2): ಜೆಡಿಎಸ್ ಹಾಸನ ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ಮಾಜಿ ಪ್ರಧಾನಿ ದೇವೇಗೌಡರು ಮಣಿಪಾಲ್ ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ದಾರೆ. ಆರೋಗ್ಯ ತಪಾಸಣೆಗಾಗಿ ದೇವೇಗೌಡರು ವೈದ್ಯಕೀಯ ಪರೀಕ್ಷೆಗೆ ತೆರಳಿದ್ದರು. ಸದ್ಯ ದೇವೇಗೌಡರು ಮನೆಗೆ ಹಿಂತಿರುಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಹಾಗೂ ಹೆಚ್‌ ಡಿ ರೇವಣ್ಣ ಮನೆಗೆ ಬರಲಿದ್ದಾರೆ. ಬಳಿಕ ಹಾಸನ ಟಿಕೆಟ್ ವಿಚಾರ ಮುಖಂಡರು ಚರ್ಚಿಸಲಿದ್ದಾರೆ. ಹಾಸನ ಟಿಕೆಟ್ ಯಾರಿಗೆ ಕೊಡಬೇಕು ಎಂದು ಈ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ.

ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಇಂದು ಸಂಜೆ ದೇವೆಗೌಡರ ಸಭೆ ಕರೆದಿದ್ದಾರೆ. ನಾನು ಕೂಡ ಸಭೆಗೆ ಹೋಗ್ತಿದ್ದೇನೆ. ದೇವೆಗೌಡರು ನೊಂದು ಮಾತನಾಡಿದ್ದಾರೆ. ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಬಾರದು ಎಂದು ಹೇಳಿದ್ದಾರೆ. ದೇವೆಗೌಡರ ಆರೋಗ್ಯ, ಆಯಸ್ಸು ನನಗೆ ಮುಖ್ಯವಾದುದು. ದೇವೆಗೌಡರಿಗೂ ಮನವರಿಕೆ ಇದೆ. ಜನರ ಅಭಿಪ್ರಾಯ ಅವರು ಸಂಗ್ರಹ ಮಾಡಿದ್ದಾರೆ.

ಸೆಮಿ ಫೈನಲ್‌ ಹಂತ ತಲುಪಿದ ಹಾಸನ ಟಿಕೆಟ್‌ ದಂಗಲ್, ನಾಳೆ 2ನೇ ಪಟ್ಟಿ ಬಿಡುಗಡೆ

ನಾವೆಲ್ಲರೂ ಮೊದಲಿನಿಂದಲೂ ನಮ್ಮ ನಿರ್ಣಯ ಏನೇ ಇದ್ರೂ ದೇವೆಗೌಡರ ನಿರ್ಣಯಕ್ಕೆ ತಲೆಬಾಗಿದ್ದೇವೆ. ದೇವೆಗೌಡರ ಮಧ್ಯಸ್ಥಿಕೆ ಎಲ್ಲಾ ಸಮಸ್ಯೆಗೆ ತೆರೆ ಎಳೆಯಲಿದೆ. ಇಷ್ಟು ದಿನಗಳ ಚರ್ಚೆಯಲ್ಲಿದ್ದ ಹಾಸನ ಟಿಕೆಟ್ ಗೊಂದಲಕ್ಕೆ ತೆರೆ ಬೀಳಲಿದೆ. ಯಾವುದೇ ಗೊಂದಲವಿಲ್ಲದೆ ದೇವೆಗೌಡರು ಸಮಸ್ಯೆ ಬಗೆಹರಿಸುತ್ತಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯರನ್ನ ಮೂಲೆ ಗುಂಪು ಮಾಡಲು ಕಾಂಗ್ರೆಸ್ ನಲ್ಲಿ ನಡೆದಿದ್ಯಾ ಹುನ್ನಾರ?

ಏನಿದು ಗೌಡರ ಕುಟುಂಬದ ಭಿನ್ನಾಭಿಪ್ರಾಯ:
ಜೆಡಿಎಸ್ ಹಾಸನ ಟಿಕೆಟ್‌ಗಾಗಿ ಪಟ್ಟು ಹಿಡಿದಿರುವ ಭವಾನಿ ರೇವಣ್ಣ ಅವರನ್ನು ಸಮಾಧಾನ ಮಾಡಲಾಗುತ್ತಿಲ್ಲ. ರೇವಣ್ಣ ಕುಟುಂಬ ಭವಾನಿ ಪರ ಬ್ಯಾಟಿಂಗ್ ಮಾಡುತ್ತಿದ್ದರೆ. ಹೆಚ್‌ ಡಿಕೆ ಮಾತ್ರ ಹಾಸನ ಟಿಕೆಟ್ ಕಾರ್ಯಕರ್ತರಿಗೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಕಾರ್ಯಕರ್ತ ಸ್ವರೂಪ್ ಪರ ಹೆಚ್ ಡಿ ಕೆ ಒಲವು ಹೊಂದಿದ್ದಾರೆ. ಭವಾನಿ ರೇವಣ್ಣ‌ಗೆ ಟಿಕೆಟ್ ಇಲ್ಲ ಎಂದು ಹೆಚ್ ಡಿ ಕೆ ನಿರಾಕರಿಸುವ ಹಿಂದಿದೆ ಅನೇಕ ರಾಜಕೀಯ ಲೆಕ್ಕಾಚಾರವಿದೆ. ಏನೀ ಲೆಕ್ಕಾಚಾರ ಇಲ್ಲಿದೆ ಓದಿ....

* ಹಾಸನದಲ್ಲಿ ಭವಾನಿ ರೇವಣ್ಣನಿಗಿಂತ ಸ್ವರೂಪ್ ಪರವಿರುವ ಚುನಾವಣಾ ಟ್ರೆಂಡ್

* ಭವಾನಿ ರೇವಣ್ಣಗೆ ಒಕ್ಕಲಿಗ ಒಳಪಂಗಡದ ಮತಗಳ ಧೃವೀಕರಣದಿಂದ ಹಿನ್ನೆಡೆ ಸಾಧ್ಯತೆ

* ಪ್ರೀತಂಗೌಡ ಸ್ಲೆಡ್ಜಿಂಗ್ ಪಾಲಿಟಿಕ್ಸ್‌ಗೆ ಮಣಿಯುವ ಸಾಧ್ಯತೆ

* ಎಮೋಷನಲ್ ಚಿಂತನೆಗಳಿಂದ ಕ್ಷೇತ್ರ ಕಳೆದುಕೊಳ್ಳುವ ಸಾಧ್ಯತೆ

* ಕುಟುಂಬದಿಂದ ಮತ್ತೊಬ್ಬರು ರಾಜಕೀಯ ಎಂಟ್ರಿಯಿಂದ ಫ್ಯಾಮಿಲಿ ಪಾಲಿಟಿಕ್ಸ್ ಹಣೆಪಟ್ಟಿಗೆ ಮತ್ತೊಂದು ಪೆಟ್ಟು

* ಫ್ಯಾಮಿಲಿ ಪಾಲಿಟಿಕ್ಸ್ ಎಂದೆ ಟಾರ್ಗೆಟ್ ಮಾಡಲಿರುವ ವಿಪಕ್ಷಗಳು 

* ಕಾರ್ಯಕರ್ತನಿಗೆ ಟಿಕೆಟ್ ನೀಡಿದರೆ ಪಕ್ಷದ ಆಂತರಿಕ ವಲಯದಲ್ಲಿ ಉತ್ತಮ ಸಂದೇಶ ರವಾನೆ

* ಕಾರ್ಯಕರ್ತರ ಪರ ಪಕ್ಷವಿದೆ ಎಂಬ ಸಂದೇಶದಿಂದ ಪಕ್ಷಕ್ಕೆ ಲಾಭ

* ಭವಾನಿ ರೇವಣ್ಣ ಸ್ಪರ್ಧೆಯಿಂದ ಉಳಿದ ಜೆಡಿಎಸ್ ಕ್ಷೇತ್ರಗಳ ಮೇಲೆ ಇಂಪ್ಯಾಕ್ಟ್ ಸಾಧ್ಯತೆ

* ಕುಟುಂಬದಲ್ಲಿ ಬಣ ರಾಜಕೀಯಕ್ಕೆ ವೇದಿಕೆಯಾಗಲಿದೆ

ಹೀಗಾಗಿ ಈ ಎಲ್ಲಾ ರಾಜಕೀಯ ಲೆಕ್ಕಾಚಾರದಿಂದ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎನ್ನುತ್ತಿರುವ ಹೆಚ್ ಡಿ ಕುಮಾರಸ್ವಾಮಿ.