ತುಮಕೂರು, (ಜೂನ್. 05): ಮೈಸೂರು ಐಎಎಸ್ ಅಧಿಕಾರಿಗಳು ರಂಪಾಟ ಇದೀಗ ಬೀದಿಗೆ ಬಂದಿದ್ದು, ಪರ ವಿರೋಧಗಳ ಚರ್ಚೆಗಳು ನಡೆಯುತ್ತಿವೆ.

ಇನ್ನು ಈ ಬಗ್ಗೆ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದು, ಮೈಸೂರಲ್ಲಿ ಐಎಎಸ್ ಅಧಿಕಾರಿಗಳ ಗಲಾಟೆಯಲ್ಲಿ ಎಲ್ಲೋ ಒಂದು ಕಡೆ ತಪ್ಪಾಗಿದೆ ಅದನ್ನ ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಗೆಹರಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.

ಸಿಂಧೂರಿ v/s ಶಿಲ್ಪಾನಾಗ್‌: ಏನಿದು ಇನ್‌ಸೈಡ್ ಪಾಲಿಟಿಕ್ಸ್..? 

ಸಾರ್ವಜನಿಕರು ಕಷ್ಟದಲ್ಲಿರಬೇಕಾದ್ರೆ ಅಧಿಕಾರಿಗಳ ಗಲಾಟೆ‌ ಸರಿಯಲ್ಲ. ಅಂಗನವಾಡಿ ನೌಕರರಿಗೆ, ಆಶಾಕಾರ್ಯಕರ್ತೆಯರಿಗೆ ಸಂಬಳ‌ ಕೊಟ್ಟಿಲ್ಲ. ಈ ವೇಳೆ ರೋಹಿಣಿ ಸಿಂಧೂರಿ ಅವರ ಬಗ್ಗೆ ಒಂದು ಮಾತು ಹೇಳ್ಬೇಕಾಗುತ್ತೆ.

ಸ್ವಿಮ್ಮಿಂಗ್ ಪೂಲ್ ಕಟ್ಟೋದು ಮೋಜು ಮಸ್ತಿಗೆ ಹಣ ಖರ್ಚು ಮಾಡೋದು ಸೂಕ್ತವಲ್ಲ. ಇಂತಹ ಸಂದರ್ಭದಲ್ಲಿ‌ ಇದೆಲ್ಲಾ ಮಾಡೋಕೆ‌ ಹೋಗಬಾರದು. ಇಂತಹ ಕೆಲಸಗಳು ಕೆಟ್ಟ ಪ್ರೆಸಿಡಿಂಗ್ಸ್​ ಸೆಟ್ ಮಾಡುತ್ತೆ, ಇದಕ್ಕೆ ನನ್ನ ವಿರೋಧ ಇದೆ. ಒಬ್ಬ ಶಾಸಕ ಹೇಳಿದ್ರೆ ಅವರ ವಿರುದ್ಧ ಇದ್ದಾರೆ ಅನ್ನಬಹುದು. ಎಲ್ಲಾ ಶಾಸಕರು, ಎಲ್ಲಾ ಪಕ್ಷದವರು, ಎಲ್ಲರೂ ವಿರೋಧ ಇರೋದ್ರಿಂದ ಎಲ್ಲೋ ಒಂದ್ ಕಡೆ ಏನೋ ತಪ್ಪಾಗಿರುತ್ತೆ. ಅದನ್ನ ಸಿಎಸ್, ಸಿಎಂ ಪರಿಶೀಲಿಸಿ ಸರಿಪಡಿಸಬೇಕು ಎಂದು ಹೇಳಿದರು.