ಹಿರಿಯ ನಾಯಕಿ, ಹಾಲಿ ಶಾಸಕಿ ಕಿರಣ್ ಚೌಧರಿ ಮತ್ತು ಅವರ ಪುತ್ರಿ, ಮಾಜಿ ಸಂಸದೆ , ಹರಿಯಾಣ ಕಾಂಗ್ರೆಸ್‌ ಕಾರ್ಯಾಧ್ಯಕ್ಷೆ ಶ್ರುತಿ ಚೌಧರಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಚಂಡೀಗಢ: ಹರ್ಯಾಣದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ತಯಾರಾಗುತ್ತಿರುವ ಹೊತ್ತಲ್ಲಿಯೇ ಆಘಾತ ಎದುರಾಗಿದೆ. ಹಿರಿಯ ನಾಯಕಿ, ಹಾಲಿ ಶಾಸಕಿ ಕಿರಣ್ ಚೌಧರಿ ಮತ್ತು ಅವರ ಪುತ್ರಿ, ಮಾಜಿ ಸಂಸದೆ , ಹರಿಯಾಣ ಕಾಂಗ್ರೆಸ್‌ ಕಾರ್ಯಾಧ್ಯಕ್ಷೆ ಶ್ರುತಿ ಚೌಧರಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಕಿರಣ್‌ ಚೌಧರಿ ಹರ್ಯಾಣದ ಮಾಜಿ ಸಿಎಂ ಬನ್ಸಿ ಲಾಲ್ ಅವರ ಸೊಸೆ. ಮಂಗಳವಾರ ಮಾತನಾಡಿದ ಕಿರಣ್ ಚೌಧರಿ ಬುಧವಾರ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಶ್ರುತಿ, ಭಿವಾನಿ- ಮಹೇಂದ್ರಗಢ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತ ಪಡಿಸಿದ್ದರು. ಆದರೆ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಈ ಕಾರಣಕ್ಕಾಗಿಯೇ ಅಸಮಾಧಾನಗೊಂಡು ಬಿಜೆಪಿ ಸೇರುತ್ತಿದ್ದಾರೆ ಎನ್ನಲಾಗಿದೆ.