Asianet Suvarna News Asianet Suvarna News

ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಘಾತ, ಪಕ್ಷಕ್ಕೆ ರಾಜೀನಾಮೆ ನೀಡಿದ ಹಾರ್ದಿಕ್ ಪಟೇಲ್!

ಹಾರ್ದಿಕ್ ಪಟೇಲ್ ಕೊನೆಗೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.  ರಾಜೀನಾಮೆ ನೀಡಲು ಸಾಕಷ್ಟು ಧೈರ್ಯವನ್ನು ಸಂಗ್ರಹಿಸಬೇಕು ಎಂದೂ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
 

Hardik Patel resigns from Congress a big blow to the party before the Gujarat elections san
Author
Bengaluru, First Published May 18, 2022, 11:08 AM IST

ಅಹಮದಾಬಾದ್ (ಮೇ.18): ಗುಜರಾತ್ ಹಾಗೂ ರಾಷ್ಟ್ರಮಟ್ಟದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಿದ್ದ ಪಾಟೀದಾರ್ ಆಂದೋಲನದ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಹಾರ್ದಿಕ್ ಪಟೇಲ್ ಕೊನೆಗೂ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಇದು ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆ ಎಂದೇ ಪರಿಗಣಿಸಲಾಗುತ್ತಿದೆ.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಹಾರ್ದಿಕ್ ಕೆಲ ದಿನಗಳಿಂದ ಕಾಂಗ್ರೆಸ್ ನಾಯಕರ ವಿರುದ್ಧ ಕೋಪಗೊಂಡಿದ್ದು, ಅವರು ಪಕ್ಷ ತೊರೆಯುವ ಬಗ್ಗೆ ಆಗಲೇ ಊಹಾಪೋಹಗಳು ಎದ್ದಿದ್ದವು.

ಕಾಂಗ್ರೆಸ್ ತೊರೆದಿರುವ ಹಾರ್ದಿಕ್ ಪಟೇಲ್ ಟ್ವೀಟ್ ನಲ್ಲಿ ಇಂದು ನಾನು ಧೈರ್ಯದಿಂದ ಕಾಂಗ್ರೆಸ್ ಪಕ್ಷದ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ನನ್ನ ನಿರ್ಧಾರವನ್ನು ಪ್ರತಿಯೊಬ್ಬ ಸಹೋದ್ಯೋಗಿ ಮತ್ತು ಗುಜರಾತ್ ಜನರು ಸ್ವಾಗತಿಸುತ್ತಾರೆ ಎಂದು ನಾನು ನಂಬುತ್ತೇನೆ.  ನಾನು ಭವಿಷ್ಯದಲ್ಲಿ ಗುಜರಾತ್‌ಗಾಗಿ ನಿಜವಾಗಿಯೂ ಧನಾತ್ಮಕವಾಗಿ ಕೆಲಸ ಮಾಡಲು ಇದರಿಂದ ಸಾಧ್ಯವಾಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ  ಮೇಲೆ ಹಾರ್ದಿಕ್ ಪಟೇಲ್ ಮಾಡಿದ ಆರೋಪಗಳು?
* ಕಾಂಗ್ರೆಸ್ ಪಕ್ಷ ದೇಶದ ಹಿತಾಸಕ್ತಿ ಮತ್ತು ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ.
* ಕಾಂಗ್ರೆಸ್ ಪಕ್ಷ ಪ್ರತಿಭಟನೆಯ ರಾಜಕೀಯಕ್ಕೆ ಸೀಮಿತವಾಗಿದೆ
* ರಾಮಮಂದಿರ ನಿರ್ಮಾಣ, ಸಿಎಎ-ಎನ್‌ಆರ್‌ಸಿ, ಆರ್ಟಿಕಲ್ 370, ಜಿಎಸ್‌ಟಿ ಅನುಷ್ಠಾನಕ್ಕೆ ಕಾಂಗ್ರೆಸ್ ಅಡ್ಡಿಯಾಗಿತ್ತು.
* ದೇಶ ಸಂಕಷ್ಟದಲ್ಲಿದ್ದಾಗ ನಮ್ಮ ನಾಯಕರು ವಿದೇಶದಲ್ಲಿದ್ದರು


ಹಾರ್ದಿಕ್ ಪಟೇಲ್ ಅವರನ್ನು ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಕೆಲ ದಿನಗಳಿಂದ ಅವರು ಕಾಂಗ್ರೆಸ್ ನಾಯಕತ್ವದ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಹಲವು ಬಾರಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನಲ್ಲಿ ಅವರ ಸ್ಥಿತಿ, ಹೊಸ ವರನಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದಂತಾಗಿದೆ ಎಂದು ಹೇಳಿದ್ದರು. ಇಲ್ಲಿ ಅವರು ಪಕ್ಷದಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲ ಎಂದು ಹೇಳಲು ಪ್ರಯತ್ನಿಸುತ್ತಿದ್ದರು.

Hardik Patel Politics ಹಾರ್ದಿಕ್ ಪಟೇಲ್ ಟ್ವಿಟರ್ ಖಾತೆಯಿಂದ ಕಾಂಗ್ರೆಸ್ ಡಿಲೀಟ್, ಪಕ್ಷ ತೊರೆಯುವ ಸೂಚನೆ!

ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಹಲವು ಪ್ರಯತ್ನಗಳ ನಂತರವೂ ಕಾಂಗ್ರೆಸ್ ಪಕ್ಷ ದೇಶದ ಹಿತದೃಷ್ಟಿಯಿಂದ ಮಾಡುವಲ್ಲಿ ವಿಫಲವಾಗುತ್ತಿದೆ ಎಂದು ಬರೆದಿದ್ದಾರೆ. ಸಮಾಜದ ಹಿತಾಸಕ್ತಿಗೆ ಸಂಪೂರ್ಣ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಕಾರಣಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ‘ದೇಶದ ಯುವಕರು ಸಮರ್ಥ ಮತ್ತು ಬಲಿಷ್ಠ ನಾಯಕತ್ವವನ್ನು ಬಯಸುತ್ತಾರೆ, ಆದರೆ ಕಾಂಗ್ರೆಸ್ ಪಕ್ಷವು ಕೇವಲ ಪ್ರತಿಭಟನೆಯ ರಾಜಕೀಯಕ್ಕೆ ಸೀಮಿತವಾಗಿದೆ. ಆದರೆ, ದೇಶದ ಜನರು ಪ್ರತಿಭಟಿಸುವುದಿಲ್ಲ, ಆದರೆ ಭವಿಷ್ಯದ ಬಗ್ಗೆ ಯೋಚಿಸುವ ಪರ್ಯಾಯ ಅಗತ್ಯವಿದೆ' ಎಂದು ಪತ್ರದಲ್ಲಿ ಬರೆದಿದ್ದಾರೆ.

ಅಜ್ಞಾನ, ಅನಿರ್ದಿಷ್ಟತೆ, ಅಸಹಕಾರ... ಕಾಂಗ್ರೆಸ್‌ನಲ್ಲಿ ಹಾರ್ದಿಕ್ ಪಟೇಲ್ ಅಸಮಾಧಾನಕ್ಕೆ ಕಾರಣವೇ ಇದು!

ಪಕ್ಷದ ಉನ್ನತ ನಾಯಕತ್ವಕ್ಕೆ ಗಂಭೀರತೆಯ ಕೊರತೆಯಿದೆ ಎಂದು ಆರೋಪಿಸಿದರು. ನಾನು ಪಕ್ಷದ ಉನ್ನತ ನಾಯಕರನ್ನು ಭೇಟಿಯಾದಾಗಲೆಲ್ಲಾ ಅವರ ಗಮನ ಗುಜರಾತ್‌ನ ಜನರಿಗಿಂತ ಅವರ ಮೊಬೈಲ್ ಮತ್ತು ಇತರ ವಿಷಯಗಳ ಮೇಲೆ ಹೆಚ್ಚು ಎಂದು ತೋರುತ್ತದೆ. ದೇಶದಲ್ಲಿ ಬಿಕ್ಕಟ್ಟು ಉಂಟಾದಾಗ ನಮ್ಮ ನಾಯಕರು ವಿದೇಶದಲ್ಲಿದ್ದರು. ''ನಮ್ಮ ಕಾರ್ಯಕರ್ತರು ಸ್ವಂತ ಖರ್ಚಿನಲ್ಲಿ 500ರಿಂದ 600 ಕಿ.ಮೀ ಸಂಚರಿಸಿ ಸಾರ್ವಜನಿಕರ ಬಳಿ ಹೋಗುತ್ತಿದ್ದರೆ, ಗುಜರಾತ್ ಕಾಂಗ್ರೆಸ್ ನಾಯಕರಿಗೆ, ದಿಲ್ಲಿಯ ನಾಯಕನಿಗೆ ಸಮಯಕ್ಕೆ ಸರಿಯಾಗಿ ಚಿಕನ್ ಸ್ಯಾಂಡ್ ವಿಚ್ ಸಿಕ್ಕಿತೋ ಇಲ್ಲವೋ ಎನ್ನುವುದರತ್ತ ಮಾತ್ರವೇ ಗಮನ ನೀಡುತ್ತಾರೆ ಎಂದು ಬರೆದಿದ್ದಾರೆ.

ಅಹಮದಾಬಾದ್ ನಲ್ಲಿ ನಾಳೆ ಸುದ್ದಿಗೋಷ್ಠಿ: ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿರುವ ಹಾರ್ದಿಕ್ ಪಟೇಲ್, ನಾಳೆ ಅಹಮದಾಬಾದ್ ನಲ್ಲಿ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದಾರೆ.

Follow Us:
Download App:
  • android
  • ios