Narendra Modi ಬರ್ತಿದ್ದಾರೆ ಅಂತಾ ರಸ್ತೆ ಗುಂಡಿ ಮುಚ್ಚಿದ್ದಕ್ಕೆ ಸಂತೋಷ: ಡಿಕೆಶಿ

ಬೆಂಗಳೂರಿಗೆ ಮೋದಿ ಬರುತ್ತಿರುವ ಹಿನ್ನೆಲೆ ಚ್‌ಎಎಲ್ ವಿಮಾನ ನಿಲ್ದಾಣದಿಂದ ನಗರದ ವಿವಿಧೆಡೆ ರಸ್ತೆಯಲ್ಲಿ ಸಂಚರಿಸುವ ಸಾಧ್ಯತೆ ಇದ್ದು, ಆಯಾ ರಸ್ತೆಗಳ ಗುಂಡಿಗಳನ್ನು ರಾತ್ರೋ ರಾತ್ರಿ ಮುಚ್ಚಿಸಲಾಗುತ್ತಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸಂತೋಷ ವ್ಯಕ್ತಪಡಿಸಿದ್ದಾರೆ.

Happy that bjp govt road potholes have been closed for Modi has come to bengaluru says DK rav

ಬೆಂಗಳೂರು (ನ.10): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport Bengaluru)ದಲ್ಲಿ ಕೆಂಪೇಗೌಡ  ಪ್ರತಿಮೆ ಹಾಗೂ ಟರ್ಮಿನಲ್ 2ರ ಉದ್ಘಾಟನೆ ಸೇರಿ, ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನಗರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ನಗರದ ವಿವಿಧೆಡೆ ರಸ್ತೆಯಲ್ಲಿ ಸಂಚರಿಸುವ ಸಾಧ್ಯತೆ ಇದ್ದು, ಆಯಾ ರಸ್ತೆಗಳ ಗುಂಡಿಗಳನ್ನು ರಾತ್ರೋ ರಾತ್ರಿ ಮುಚ್ಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಗರಿಕರು ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಸಂತೋಷ ವ್ಯಕ್ತಪಡಿಸಿದ್ದು, ಮೋದಿ ನೆಪದಲ್ಲಾದರೂ ಸಿಲಿಕಾನ್ ಸಿಟಿಯ ರಸ್ತೆಗಳಿಗೆ ಡಾಂಬರೀಕರಣ ಭಾಗ್ಯ ಸಿಗುತ್ತಿದೆಯಲ್ಲವೆಂದು ಸರಕಾರದ ಕಾಲು ಎಳೆದಿದ್ದಾರೆ. 

ಬೆಂಗಳೂರಿಗೆ ಮೋದಿ, ಹಲವು ರಸ್ತೆಗಳಲ್ಲಿ ಸಂಚಾರ, ಪಾರ್ಕಿಂಗ್ ನಿಷೇಧ: ಇಲ್ಲಿದೆ ಪರ್ಯಾಯ ಮಾರ್ಗಗಳು

ಮಳೆ ಹಾಗೂ ಕಳಪೆ ರಸ್ತೆ ಕಾಮಗಾರಿ ಸೇರಿ ಬಿಬಿಎಂಪಿಯ ನಿರ್ಲಕ್ಷ್ಯದಿಂದ ನಗರದ ರಸ್ತೆಗಳಿ ಗುಂಡಿಗಳಿಂದ ತುಂಬಿ ಹೋಗಿದ್ದು, ಇತ್ತೀಚೆಗೆ ಅಪಘಾತ(Accidents) ಗಳಲ್ಲಿ ಮೃತ ಪಡುತ್ತಿರುವ ಸಂಖ್ಯೆಯೂ ಹೆಚ್ಚುತ್ತಿದೆ. ಈ ಬಗ್ಗೆ ಮಾಧ್ಯಮ, ನಾಗರಿಕರು ಎಷ್ಟೇ ಗೋಗರೆದರೂ ಗುಂಡಿ ಮುಚ್ಚುವ ಕಾರ್ಯಕ್ಕೆ ಸರಕಾರವಾಗಲಿ, ಬಿಬಿಎಂಪಿ ಆಗಲಿ ಒಲವು ತೋರುತ್ತಿಲ್ಲ. ಮುಂದಿನ ವರ್ಷ ಚುನಾವಣೆ(Assembly election) ಇದ್ದು, ಈಗಲಾದರೂ ರಸ್ತೆ ರಿಪೇರಿ ಕೆಲಸಕ್ಕೆ ಮುಂದಾಗಿ ಎನ್ನುವುದು ಪ್ರತಿಯೊಬ್ಬ ನಾಗರಿಕನ ಆಗ್ರಹವೂ ಹೌದು. ಆದರೆ, ಇದೀ ಮೋದಿ ಆಗಮಿಸುತ್ತಿರುವ ಹಿನ್ನಲೆಯಲ್ಲಾದರೂ ರಸ್ತೆ ರಿಪೇರಿ ಕಾರ್ಯಕ್ಕೆ ಮುಂದಾಗಿರುವ ಸರಕಾರ ಹಾಗೂ ಬಿಬಿಎಂಪಿ(BBMP)  (BBMP) ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ರಸ್ತೆಗಳು ರಿಪೇರಿ ಆಗುತ್ತೆ ಎನ್ನುವ ಕಾರಣಕ್ಕಾದರೂ ಮೋದಿ ಬೆಂಗಳೂರಿಗೆ ಆಗಾಗ ಭೇಟಿ ನೀಡುತ್ತಿರಲಿ ಎಂದು ನೆಟ್ಟಿಗರು ಸೋಷಿಯಲು ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ. 

ಡಿಕೆಶಿ ಹೇಳಿದ್ದೇನು? 

\ಕರ್ನಾಟಕ ಮುಖ್ಯಮಂತ್ರಿ (Karnataka CM) ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಮೋದಿ(Narendra Modi) ಬರ್ತಿದ್ದಾರೆ ಎಂದು ಗುಂಡಿ ಮುಚ್ಚಲು(Road pathole) ಹೊರಟಿದ್ದಾರೆ. ಪ್ರಧಾನಿ ಅವರು ಬೆಂಗಳೂರಿಗೆ ಒಂದು ಪ್ರೈಸ್ ಕೊಟ್ಟು ಹೋಗಲಿ, ಗುಂಡಿ ನಗರ (Pothole City) ಅಂತಾದರೂ ಕರೆಯಲಿ, ಬೆಸ್ಟ್ ಸಿಟಿ ಅಂತಾದರೂ ಹೆಸರಿಸಲಿ, ಅವರಿಗೆ ಏನು ಮಾಹಿತಿ ಇದೆಯೋ ಆ ರೀತಿ ಕರಪ್ಶನ್ ಕ್ಯಾಪಿಟಲ್ (Corruption Capital) ಅಂತನಾದ್ರೂ ಕರೆಯಲಿ, ಒಟ್ಟಿನಲ್ಲಿ ರಸ್ತೆಗಳು ರಿಪೇರಿ ಆಗಲೆಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಮೋದಿ ಕಾರ್ಯಕ್ರಮಕ್ಕೆ ಸರಕಾರಿ ಶಾಲೆ ಮಕ್ಕಳನ್ನು ಆಗಮಿಸುವಂತೆ ಬೊಮ್ಮಾಯಿ ಅವರು ಮಾಡಿದ್ದು ರಾಜ್ಯ ಸರಕಾರಕ್ಕೆ ಶೇಮ್ ಅಲ್ವಾ? ಇದನ್ನು ನೋಡಿದರೆ ಬಿಜೆಪಿ ವೀಕ್ ಆಗಿದೆ ಎಂದು ಅನಿಸುತ್ತದೆ . ರಸ್ತೆ ಗುಂಡಿಗೆ ನೂರಾರು ಜನ ಸತ್ತರು. ಎಲ್ಲಾ ಪಾರ್ಟಿಯವರು ಗುಂಡಿಗಳ ಹೋಮ ಮಾಡಿದರು, ಪೂಜೆ ಮಾಡಿದ್ರು, ಅಭಿಷೇಕ ಮಾಡಿದರು. ಮೋದಿ ಬರ್ತಿದ್ದಾರೆ ಅಂತ ಗುಂಡಿ ಮುಚ್ಚುತ್ತಿದ್ದಾರೆ ಸಂತೋಷ ಎಂದು ಡಿಕೆಶಿ ಹೇಳಿದ್ದಾರೆ. 

ಮೋದಿ ಆಗಮನ, ರಸ್ತೆ ಸಂಚಾರದಲ್ಲಿ ವ್ಯತ್ಯಯ

ಸಿಟಿಓ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಏರ್‌ಪೋರ್ಟ್ ಎಲಿವೇಟೆಡ್ ಕಾರಿಡಾರ್ ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಮಹಾರಾಣಿ ಬ್ರಿಡ್ಜ್‌ನಿಂದ ರೈಲ್ವೆ ಸ್ಟೇಷನ್ ಪ್ರವೇಶ ದ್ವಾರದವರೆಗೆ, ಕೆ.ಜಿ ರಸ್ತೆಯಲ್ಲಿ ಶಾಂತಲಾ ಜಂಕ್ಷನ್‌ನಿಂದ ಮೈಸೂರು ಬ್ಯಾಂಕ್‌ ಸರ್ಕಲ್‌ವರೆಗೆ, ವಾಟಾಳ್ ನಾಗರಾಜ್ ರಸ್ತೆಯಲ್ಲಿ ಖೋಡೆ ಅಂಡರ್‌ಪಾಸ್‌ನಿಂದ ಪಿ.ಎಫ್‌ವರೆಗೆ, ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನ ಸುತ್ತ ಮತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಮೈಸೂರು ಬ್ಯಾಂಕ್‌ ವೃತ್ತದಿಂದ ಪ್ಯಾಲೇಸ್ ರಸ್ತೆಗೆ ಬರುವ ವಾಹನ ಸವಾರರು ಕೆ.ಜಿ. ರಸ್ತೆಯ ಮೂಲಕ, ಎಲ್‌ಆರ್‌ಡಿಇ ವೃತ್ತದಿಂದ ಬಸವೇಶ್ವರ ವೃತ್ತದ ಕಡೆಗೆ ಸಂಚರಿಸುವವರು ರಾಜಭವನ ರಸ್ತೆ ಮೂಲಕ ಮುಂದೆ, ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಮೂಲಕ ಬರುವವರು ರೇಸ್‌ ವ್ಯೂವ್ ಸರ್ಕಲ್‌ನಲ್ಲಿ ಹಾಗೂ ಶಿವಾನಂದ ಸರ್ಕಲ್‌ನಲ್ಲಿ ಎಡತಿರುವು ತೆಗೆದುಕೊಂಡು ನೆಹರು ಸರ್ಕಲ್ ಮೂಲಕ, ಕೆಕೆ ರಸ್ತೆ ಮೂಲಕ ವಿಂಡ್ಸ್‌ ಮ್ಯಾನರ್ ವೃತ್ತಕ್ಕೆ ತೆರಳುವ ವಾಹನ ಸವಾರರು ಶಿವಾನಂದ ಸರ್ಕಲ್‌ನಿಂದ ನೆಹರು ಸರ್ಕಲ್‌ ಮೂಲಕ, ಬಿಹೆಚ್‌‌ಇಎಲ್ ಸರ್ಕಲ್‌ನಿಂದ ಮೇಕ್ರಿ ಸರ್ಕಲ್ ಕಡೆಗೆ ಬರುವ ವಾಹನ ಸವಾರರು ಸದಾಶಿವನಗರ ಪೊಲೀಸ್ ಠಾಣೆ- ಮಾರಮ್ಮ ಸರ್ಕಲ್- ಮಾರ್ಗೋಸ ರಸ್ತೆ ಮೂಲಕ‌ ಹೋಗಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿಗೆ ನಾಳೆ ಮೋದಿ ಆಗಮನ: ಸಂಚಾರದಲ್ಲಿ ವ್ಯತ್ಯಯ, ಮನೆಯಿಂದ ಹೊರಡುವಾಗ ಹುಷಾರು!

ಭಾಷ್ಯಂ ಸರ್ಕಲ್‌ನಿಂದ ಕಾವೇರಿ ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಮಲ್ಲೇಶ್ವರಂ 18ನೇ ಕ್ರಾಸ್- ಮಾರ್ಗೋಸ ರಸ್ತೆಯ ಮೂಲಕ, ಕ್ವೀನ್ಸ್ ವೃತ್ತದಿಂದ ಸಿ.ಟಿ.ಓ ಕಡೆಗೆ ಬರುವ ವಾಹನ ಸವಾರರು ಸಿದ್ದಲಿಂಗಯ್ಯ ವೃತ್ತ- ಆರ್.ಆರ್.ಎಂ.ಆರ್. ರಸ್ತೆಯ ಮೂಲಕ, ಬಾಳೇಕುಂದ್ರಿ ಜಂಕ್ಷನ್‌ನಿಂದ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ವಾಹನಗಳು ಕನ್ನಿಂಗ್ ಹ್ಯಾಂ ರಸ್ತೆ ಮೂಲಕ ಸಂಚರಿಸಲು‌ ಅವಕಾಶ ಮಾಡಿಕೊಡಲಾಗಿದೆ.

Latest Videos
Follow Us:
Download App:
  • android
  • ios