Asianet Suvarna News Asianet Suvarna News

ರಾಮಾಯಣದಲ್ಲಿ ಹನುಮಂತನಂತೆ, ಈಗ ಮೋದಿ ದೇಶಕ್ಕಾಗಿ ತ್ಯಾಗ ಮಾಡ್ತಿದ್ದಾರೆ: ಯೋಗಿ ಆದಿತ್ಯನಾಥ

ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಆಗುತ್ತಿದೆ. ರಾಮಾಯಣ ಕಾಲದಲ್ಲಿ ಹನುಮಂತ ತ್ಯಾಗ ಮಾಡಿದಂತೆ ಈಗಿನ ಕಾಲದಲ್ಲಿ ದೇಶಕ್ಕಾಗಿ ಮೋದಿ ತ್ಯಾಗ ಮಾಡುತ್ತಿದ್ದಾರೆ.

Hanuman like in Ramayana Narendra Modi now sacrificing for country Yogi Adityanath sat
Author
First Published Apr 30, 2023, 2:34 PM IST | Last Updated Apr 30, 2023, 3:46 PM IST

ರಾಯಚೂರು (ಏ.30): ನಾನು ಅಯೋಧ್ಯೆ ಪುಣ್ಯ ಭೂಮಿಯಿಂದ ಹನುಮಂತನ ಭೂಮಿಗೆ ಬಂದಿದ್ದಕ್ಕೆ ಖುಷಿಯಾಗಿದೆ. ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಆಗುತ್ತಿದೆ. ರಾಮಾಯಣ ಕಾಲದಲ್ಲಿ ಹನುಮಂತ ತ್ಯಾಗ ಮಾಡಿದಂತೆ ಈಗಿನ ಕಾಲದಲ್ಲಿ ದೇಶಕ್ಕಾಗಿ ಮೋದಿ ತ್ಯಾಗ ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಕರ್ನಾಟಕ ವಿಧಾನಸಭಾ ಚುನಾಚಣೆ ಹಿನ್ನೆಲೆಯಲ್ಲಿ ರಾಯಚೂರಿನ ಮತದಾರರನ್ನ ಉದ್ದೇಶಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಭಾಷಣ ಆರಂಭಿಸಿ 'ತುಂಗಾ, ಕೃಷ್ಣ ನದಿ ಹರಿಯುವ ಹರಿದಾಸರ ನಾಡಿನ ಜನರಿಗೆ ನಮಸ್ಕಾರ' ಎಂದರು. ಇದು ಹರಿದಾಸರ ಭೂಮಿಯಾಗಿದೆ. ಭಾರತದ ಸನಾತನ ಧರ್ಮದ ಸಂದೇಶ ನಾಡಿನ ತುಂಬಾ ಹರಡಿದ್ದಾರೆ. ನಿಜಾಮರ ವಿರುದ್ಧ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ನಾಗರಿಕರಿಗೆ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು.

ತಮಿಳುನಾಡಿನವರು ಕನ್ನಡಿಗರ ಮೇಲೆ ಸವಾರಿ ಮಾಡ್ತಿದ್ದಾರೆ! ಮಾಜಿ ಪ್ರಧಾನಿ ದೇವೇಗೌಡರ ಆತಂಕ

ಹನುಮಂತನ ಭೂಮಿಗೆ ಬಂದಿದ್ದಕ್ಕೆ ಸಂತಸ: ನಾನು ಅಯೋಧ್ಯೆ ಪುಣ್ಯ ಭೂಮಿಯಿಂದ ಇಲ್ಲಿಗೆ ಬಂದಿದ್ದೇನೆ. ಉತ್ತರ ಪ್ರದೇಶ ಮತ್ತು ಕರ್ನಾಟಕಕಕ್ಕೆ ರಾಮ- ಹನುಮಂತನ ಸಂಬಂಧ ಇದ್ದಂತೆ. ನಾನು ಇವತ್ತು ಹನುಮಂತನ ಭೂಮಿಗೆ ಬಂದಿದ್ದಕ್ಕೆ ಖುಷಿಯಾಗಿದೆ. ಭಾರತ ಮೋದಿ ನೇತೃತ್ವದ ಅಭಿವೃದ್ಧಿ ಆಗುತ್ತಿದೆ ರಾಮಾಯಣ ಕಾಲದಲ್ಲಿ ಹನುಮಂತ ತ್ಯಾಗ ಮಾಡಿದಂತೆ ಈಗಿನ ಕಾಲದಲ್ಲಿ ದೇಶಕ್ಕಾಗಿ ಮೋದಿ ತ್ಯಾಗ ಮಾಡುತ್ತಿದ್ದಾರೆ. ಭಾರತದ ಅಭಿವೃದ್ಧಿ ಇಡೀ ವಿಶ್ವವೇ ಎದುರು ನೋಡುವಂತೆ ಆಗುತ್ತಿದೆ. ರಾಮಾಯಣ ಕಾಲದಲ್ಲಿ ಹನುಮಂತ ತ್ಯಾಗ ಮಾಡಿದಂತೆ, ಈಗಿನ ಕಾಲದಲ್ಲಿ ದೇಶಕ್ಕಾಗಿ ಮೋದಿ ತ್ಯಾಗ ಮಾಡುತ್ತಿದ್ದಾರೆ ಎಂದು ಹೇಳಿದರು.

ಡಬಲ್‌ ಇಂಜಿನ್ ಸರ್ಕಾರದಿಂದ ಉತ್ತರ ಪ್ರದೇಶ ರಾಮರಾಜ್ಯವಾಗಿದೆ: ರಾಯಚೂರಿನಲ್ಲಿ ರೈಲು, ವಿಮಾನ, ಏಮ್ಸ್, ಹೀಗೆ ಹತ್ತಾರು ಅಭಿವೃದ್ಧಿ ಮಾಡಿದ್ದೇವೆ. ಟೆಕ್ಸ್ ಟೈಲ್ ಪಾರ್ಕ್ ಆಗಲಿದೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ರೈತರು ತಲೆಬಾಗಿಕೊಂಡು ಓಡಾಟ ಮಾಡುತ್ತಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ರೈತರು ತಲೆಎತ್ತಿ ಓಡಾಡುತ್ತಿದ್ದಾರೆ. ಐಟಿ ಹಬ್ ಹಿಂದಿನ ಕಾಲದ ನಳಂದ ವಿಶ್ವವಿದ್ಯಾಲಯ ನೆನಪಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಜನರು ಇಷ್ಟು ಏಕೆ ಪ್ರೀತಿ ಮಾಡುತ್ತಾರೆ ಅಂದರೆ, ಇದು ಡಬಲ್ ಎಂಜಿನ್ ಸರ್ಕಾರದ ಸಾಧನೆ ಆಗಿದೆ. ರಾಮರಾಜ್ಯ ಕಲ್ಪನೆ ಉತ್ತರ ಪ್ರದೇಶದಲ್ಲಿ ಮತ್ತೆ ಡಬಲ್ ಎಂಜಿನ್ ಸರ್ಕಾರದಿಂದ ಆಗಿದೆ ಎಂದರು.

ರಾಮಮಂದಿರ ಉದ್ಘಾಟನೆಗೆ ಹನುಮ ನಾಡಿನವರಿಗೆ ಸ್ವಾಗತ: ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿಯೂ ನಮ್ಮ ಕೊಡುಗೆ ಆಗಿದೆ. ಪಿಎಫ್ ಐ ಸೊಕ್ಕನ್ನು ನಾವು ಮುರಿದಿದ್ದೇವೆ. ಈ PFI ಇನ್ನು ಮುಂದೆ ತಲೆನೇ ಎತ್ತುವುದೇ ಇಲ್ಲ. ಉತ್ತರ ಪ್ರದೇಶದಲ್ಲಿ ವಾಲ್ಮೀಕಿ ಜಯಂತಿ ದಿನ ಎಲ್ಲಾ ದೇವಸ್ಥಾನದಲ್ಲಿ ಪೂಜೆ ನಡೆಯುತ್ತದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ನಡೆದಿದೆ. ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯುತ್ತಾ ಬಂದಿದೆ. ಆ ಶುಭ ಕಾರ್ಯಕ್ಕೆ ನಿಮಗೆ ಕರೆಯಲು ನಾನು ಬಂದಿದ್ದೇನೆ. ಹೊಸ ಅಯೋಧ್ಯೆ ದರ್ಶನ ನಿಮಗೆ ಸಿಗಲಿದೆ. ರಾಮನೇ ಇಲ್ಲವೆಂದು ಹೇಳುವರೇ ಈಗ ರಾಮನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. 

ಗಂಗಾವತಿ: ಮನ್ ಕೀ ಬಾತ್ 142 ಜನರ ಭಾವನೆ, ಯುಪಿ ಸಿಎಂ ಯೋಗಿ ಆದಿತ್ಯನಾಥ್‌

ಟೀಂ ಇಂಡಿಯಾ ಕ್ಯಾಪ್ಟನ್‌ ರೀತಿ ಮೋದಿ ಕೆಲಸ: ಡಬಲ್ ಎಂಜಿನ್ ಸರ್ಕಾರವೂ ಸಬ್ ಕಾ ಸಾಥ್ ಸಬ್ ವಿಕಾಸ್ ನಡೆಸುವ ಸರ್ಕಾರವಾಗಿದೆ. ಕೊರೊನಾ ಕಾಲದಲ್ಲಿ 200 ಕೋಟಿ ರೂ. ಜನರಿಗೆ ವ್ಯಾಕ್ಸಿನೇಷನ್‌ ಮಾಡಿದ್ದೇವೆ. 4 ಕೋಟಿ ಜನರಿಗೆ ಪಿಎಂ ಆವಾಸ್ ಅಡಿಯಲ್ಲಿ ಮನೆ ನೀಡಿದ್ದೇವೆ. ಕಾಂಗ್ರೆಸ್ ರಿವರ್ಸ್‌ ಗೇರ್‌ ಆಗಿತ್ತು. ಕಾಂಗ್ರೆಸ್ ಯುವ ಜನತೆ ಜೊತೆಗೆ ಭೇದಭಾವ ಮಾಡುತ್ತಿದೆ. ಟೀಂ ಇಂಡಿಯಾದ ಕ್ಯಾಪ್ಟನ್ ತರ ಮೋದಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios