Asianet Suvarna News Asianet Suvarna News

MLC Election ನನ್ನ ಸಹೋದರ ಗೆದ್ದ, ಹಾರಕೂಡ ಶ್ರೀಗಳ ಭವಿಷ್ಯ ನಿಜವಾಯ್ತು ಎಂದ ಕಾಂಗ್ರೆಸ್ ಶಾಸಕ

* ಬೀದರ್ ವಿಧಾನಪರಿಷತ್ ಚುನಾವಣೆ ಫಲಿತಾಂಶ
* ಹಾರಕೂಡ ಶ್ರೀಗಳ ಭವಿಷ್ಯ ನಿಜವಾಯ್ತು
* ಜಾತ್ರಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹೇಳಿಕೆ

hannaveer shivacharya MLC Election predicts true Says Congress MLA Rajashekar Patil  rbj
Author
Bengaluru, First Published Jan 8, 2022, 6:12 PM IST

ಹುಮನಾಬಾದ್, (ಜ.08): ಇತ್ತೀಚೆಗೆ ನಡೆದ ಬೀದರ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸ್ವಾಮೀಜಿಯೊಬ್ಬರು ನುಡಿದಿದ್ದ ಭವಿಷ್ಯ ನಿಜವಾಗಿದೆಯಂತೆ. ಶ್ರೀಗಳು ಹೇಳಿದಂತೆ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಗೆಲುವು ಸಾಧಿಸಿದ್ದಾರಂತೆ..ಈ ಬಗ್ಗೆ ಸ್ವತಃ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಸಹೋದರ ಶಾಸಕ ರಾಜಶೇಖರ್ ಪಾಟೀಲ್ ತಿಳಿಸಿದ್ದಾರೆ.

ಹುಮನಾಬಾದ್ ವೀರಭದ್ರೇಶ್ವರ ಜಾತ್ರಾ ನಿಮಿತ್ಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ (MLC Elections) ಸಂದರ್ಭದಲ್ಲಿ ಹಾರಕೂಡ ಮಠದ ಡಾ। ಚನ್ನವೀರ ಶಿವಾಚಾರ್ಯರು ಭೀಮರಾವ್ ಪಾಟೀಲ್ ನುಡಿದ ಭವಿಷ್ಯ ಸತ್ಯವಾಗಿದೆ ಎಂದರು.

Term End of 25 MLCs: ಮೇಲ್ಮನೆಯ 25 ಸದಸ್ಯರು ಇಂದು ನಿವೃತ್ತಿ, 20 ಹೊಸ ಎಂಟ್ರಿ: ಇಲ್ಲಿದೆ ಪಟ್ಟಿ!

ವಿಧಾನ ಪರಿಷತ್ ಚುನಾವಣೆ ವೇಳೆ ಗೆಲುವಿನ ಕುರಿತು ಮೊದಲೇ ಭವಿಷ್ಯ ಹೇಳಿದ್ದು, ಅವರು ನುಡಿದಂತೆ ಚುನಾವಣೆಯಲ್ಲಿ ನನ್ನ ಸಹೋದರ ಜಯಶಾಲಿಯಾಗಿದ್ದಾರೆ ಎಂದು ಶಾಸಕ ರಾಜಶೇಖರ್ ಪಾಟೀಲ್ ಸಂತಸ ವ್ಯಕ್ತಪಡಿಸಿದರು.

ವಿಧಾನಪರಿಷತ್ ಚುನಾವಣೆ ವೇಳೆ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಸಂದರ್ಭದಲ್ಲಿ ಚುನಾವಣೆಯಲ್ಲಿ ಸಹೋದರ ಭೀಮರಾವ್ ಪಾಟೀಲ್ ಗೆಲುವು ಖಚಿತ ಎಂದು ನುಡಿದಿದ್ದರು. ನಮ್ಮ ಆತ್ಮವಿಶ್ವಾಸ ತುಂಬಿದ್ದರು. ಶ್ರೀಗಳು ನುಡಿದಂತೆ ಫಲಿತಾಂಶ ಬಂದಿದೆ ಎಂದರು. ಈ ವಿಷಯ ಇವರೆಗೆ ಬಹಿರಂಗವಾಗಿ ಹೇಳಿದ್ದಿಲ್ಲ. ಆದ್ರೆ, ಇಂದು ಹೇಳಬೇಕಾಗಿ ಬಂದಿದೆ ಎಂದು ಹೇಳಿದರು.

ನುಡಿದಂತೆ ನಡೆಯುವ ಕೆಲಸ ಮಾಡುತ್ತಿದ್ದು, ದೇವರ ಹಾಗೂ ಶ್ರಿಗಳ ಅನುಗ್ರಹದಿಂದ ಮೂರು ಸಹೋದರರು ಶಾಸಕರಾಗಿದ್ದೇವೆ ಎಂದರು. 

ಇನ್ನು ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶ್ರೇಖರ್ ಪಾಟೀಲ್ ಮಾತಾನಾಡಿ, ಕುಲದೇವ ವೀರಭದ್ರನ ಕೃಪೆ ಹಾಗೂ ಕ್ಷೇತ್ರದ ಜನರ ಆಶೀರ್ವಾದಿಂದ ಮೂರು ಜನ ಸಹೋದರರು ಶಾಸಕರಾಗಿದ್ದೇವೆ. ಆ ಭಾಗದಲ್ಲಿ ದೇವೆಗೌಡರ ಕುಟುಂಬದಂತೆ ಇಲ್ಲಿ ನಮ್ಮ ಕುಟುಂಬದಲ್ಲಿ ಕೂಡ ಮೂರು ಜನ ಸಹೋದರರು ಅಧಿಕಾರದಲ್ಲಿ ಇರಲು ಕ್ಷೇತ್ರದ ಜನರು ಕಾರಣ ಎಂದು ತಿಳಿಸಿದರು.

ಕುತೂಹಲ ಮೂಡಿಸಿದ್ದ ಬೀದರ್ ವಿಧಾನ ಪರಿಷತ್‍ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಭೀಮರಾವ್ ಪಾಟೀಲ್ 227 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

 ಭೀಮರಾವ್ ಪಾಟೀಲ್ 1789 ಮತ ಪಡೆದು ಜಯಭೇರಿ ಬಾರಿಸಿದ್ದರೆ. ಬಿಜೆಪಿ ಅಭ್ಯರ್ಥಿಯಾಗಿ ಪ್ರಕಾಶ್​ ಖಂಡ್ರೆ 1562 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

ಗೆಲುವಿನ ಬಳಿಕೆ ಮಾತನಾಡಿದ್ದ ಭೀಮರಾವ್ ಪಾಟೀಲ್, ಈ ಹಿಂದೆಯೇ ನಾನು ಎಂಎಲ್‍ಸಿ ಆಗಬೇಕು ಎಂದುಕೊಂಡಿದ್ದೆ. ಆದರೆ ಆಗ ವಿಜಯಸಿಂಗ್ ಅವರಿಗೆ ಪಕ್ಷ ಟಿಕೆಟ್ ನೀಡಿತು. ಅವರು ಗೆದ್ದರೂ ಸಹ. ಇದೀಗ ನಾನು ಒಲ್ಲೇ ಎಂದರೂ ಮನೆವರೆಗೆ ಟಿಕೆಟ್ ನೀಡಿದರು. ಎಲ್ಲರೂ ಸೇರಿ ನನ್ನನ್ನು ಗೆಲ್ಲಿಸಿದ್ದಾರೆ. ಅಂತೆಯೇ ಚಂದ್ರಾಸಿಂಗ್ ಅವರಿಗೂ ಒಳ್ಳೆಯ ಸಮಯ ಬಂದೇ ಬರುತ್ತದೆ. ಕ್ಷೇತ್ರದಲ್ಲಿ ಚಂದ್ರಾಸಿಂಗ್ ಅವರ ಒಳ್ಳೆಯ ಟೀಮ್ ಇದೆ. ಉತ್ತಮ ನೆಟ್‍ವರ್ಕ್ ಇದೆ. ನಿಮ್ಮ ಜನ ಸೇವೆ ಹೀಗೆ ಮುಂದೊರೆಯಲಿ. ಯಾವುದಕ್ಕೂ ಹೆದರದಿರಿ. ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ ಎಂದಿದ್ದರು.

Follow Us:
Download App:
  • android
  • ios