* ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ* ಸಚಿವ ವಿ. ಸೋಮಣ್ಣ ಬದಲಾವಣೆ* ಸಚಿವ ಹಾಲಪ್ಪ ಆಚಾರ್​ಗೆ ರಾಯಚೂರು ಉಸ್ತುವಾರಿ

ಬೆಂಗಳೂರು, (ಸೆ.13): ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯಾಗಿದೆ. ರಾಯಚೂರಿಗೆ ಹೊಸ ಜಿಲ್ಲಾ ಉಸ್ತುವಾರಿಯ ಆದೇಶವನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಪ್ರಕಟಿಸಿದ್ದಾರೆ.

ಹೌದು... ಸಚಿವ ವಿ. ಸೋಮಣ್ಣ ಬದಲಾಗಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್​ಗೆ ರಾಯಚೂರು ಉಸ್ತುವಾರಿಯನ್ನು ವಹಿಸಲಾಗಿದೆ.

ಬೊಮ್ಮಾಯಿ ಸರ್ಕಾರದಲ್ಲಿ ಹುದ್ದೆಗಾಗಿ ಪೈಪೋಟಿ : ಹಳಬರಿಗೆ ಕೊಕ್?

ಈ ಕುರಿತು ಇಂದು (ಸೆ.13) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಆದೇಶ ಹೊರಡಿದ್ದಾರೆ. ಕೊಪ್ಪಳ ಜಿಲ್ಲೆಯ ಉಸ್ತುವಾರಿಯ ಜೊತೆಗೆ ರಾಯಚೂರು ಜಿಲ್ಲಾ ಉಸ್ತುವಾರಿಯನ್ನು ಸಹ ಸಚಿವ ಹಾಲಪ್ಪ ಆಚಾರ್​ಗೆ ನೀಡಲಾಗಿದೆ.

ವಿ ಸೋಮಣ್ಣ ಅವರು ಬೆಂಗಳೂರಿನಿಂದ ಬರಬೇಕಾಗುತ್ತದೆ. ಹೀಗಾಗಿ ಹಾಲಪ್ಪ ಆಚಾರ್​ ಅವರು ಪಕ್ಕದ ಕೊಪ್ಪಳ ಜಿಲ್ಲೆಯವರಾಗಿದ್ದರಿಂದ ರಾಯಚೂರು ಸಹ ಅವರ ಹೆಗಲಿಗೆ ಹಾಕಲಾಗಿದೆ.