ಬೊಮ್ಮಾಯಿ ಸರ್ಕಾರದಲ್ಲಿ ಹುದ್ದೆಗಾಗಿ ಪೈಪೋಟಿ : ಹಳಬರಿಗೆ ಕೊಕ್?

  • ಹಾಲಿ ಇರುವ ವಿವಿಧ ನಿಗಮ ಮಂಡಳಿ ಅಧ್ಯಕ್ಷರು ನಿರ್ದೇಶಕರನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸಬರಿಗೆ ಅವಕಾಶ 
  • ಹೊಸಬರಿಗೆ ಅವಕಾಶ ಕಲ್ಪಿಸುವ ಮಾತುಗಳು  ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಕೂಡ ಆಕಾಂಕ್ಷಿತರು ಲಾಬಿ
mandya leaders   lobbying for top posts in boards and corporations snr

ಮಂಡ್ಯ (ಸೆ.13): ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಹಾಲಿ ಇರುವ ವಿವಿಧ ನಿಗಮ ಮಂಡಳಿ ಅಧ್ಯಕ್ಷರು ನಿರ್ದೇಶಕರನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸಬರಿಗೆ ಅವಕಾಶ ಕಲ್ಪಿಸುವ ಮಾತುಗಳು  ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಕೂಡ ಆಕಾಂಕ್ಷಿತರು ಲಾಬಿ ಮುಂದುವರಿಸಿದ್ದಾರೆ. 

ಬಿ ಎಸ್ ಯಡಿಯೂರಪ್ಪ ನೆತೃತ್ವದ ಸರ್ಕಾರದಲ್ಲಿ  ಅಧಿಕಾರ ಅನುಭವಿಸಿದ್ದ ಬಹುತೇಕರಿಗೆ ಕೊಕ್ ನೀಡುವ ಸಾಧ್ಯತೆ ಸ್ಪಷ್ಟವಾಗಿದ್ದು ಪಕ್ಷದ ನಿಷ್ಟಾವಂತರು ಮತ್ತು ಬಿಜೆಪಿ  ನಾಯಕರ ಒಡನಾಡಿಗಳು ಈಗ ಪೈಪೋಟಿಗೆ ಇಳಿದಿದ್ದಾರೆ. 

ಮುಂದಿನ ಬಜೆಟ್‌ನಲ್ಲಿ ಪರಿಸರ ವೃದ್ಧಿಗೆ ಯೋಜನೆ: ಸಿಎಂ ಬೊಮ್ಮಾಯಿ

ಜಿಲ್ಲೆಯಲ್ಲಿಯೂ ಕೂಡ ನಿಗಮ ಮಂಡಳಿ  ಗದ್ದುಗೆಗಾಗಿ ಪೈಪೋಟಿ ಬಿರುಸುಕೊಂಡಿದ್ದು ಇಲ್ಲಿನ ಮೈಷುಗರ್ , ಮುಡಾ, ಕಾಡಾ ಸೇರಿದಂತೆ ವಿವಿಧ ಹುದ್ದೆಗಳ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ಬದಲಾಯಿಸುವರೆಂಬ ಸ್ಪಷ್ಟ ಸುಳಿವಿನ ಮೇರೆಗೆ ಪೈಪೋಟಿ ಶುರುವಾಗಿದೆ. 

ಈಗಾಗಲೇ ಬಿಜೆಪಿಯ ಜಿಲ್ಲಾ ಮಟ್ಟದ ಮೊದಲ ಹಂತದ ಮುಖಂಡರಾದ  ಡಾ. ಸಿದ್ದರಾಮಯ್ಯ, ಕೆ.ಎಸ್ ನಂಜುಂಡೆ ಗೌಡ ಕಿಕ್ಕೇರಿ ಪ್ರಭಾಕರ್, ಅರವಿಂದ್, ಎಚ್‌ ಪಿ ಮಹೇಶ್, ಸ್ವಾಮಿ ಸೇರಿದಂತೆ ಹಲವರು ಜಿಲ್ಲೆಯ ಪ್ರತಿಷ್ಠಿತ ಹುದ್ದೆಗಾಗಿ ಪೈಪೋಟಿ  ನಡೆಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಇದರ ಜೊತೆಗೆ ಇನ್ನಷ್ಟು ಮುಖಂಡರೂ ಕೂಡ ಎರಡನೆ ಅವಧಿಯ ಅವಕಾಶವನ್ನು ಪಡೆದುಕೊಳ್ಳಲು ಮುಂಚೂಣಿಯ ಹೋರಾಟ ನಡೆಸಿದ್ದಾರೆ.  

Latest Videos
Follow Us:
Download App:
  • android
  • ios