* ಎಂಎಲ್‌ಸಿ ಸ್ಥಾನ ನಮ್ಮ ತ್ಯಾಗಕ್ಕೆ ಸಿಕ್ಕ ಪ್ರತಿಫಲವಷ್ಟೆ* ಬಿಜೆಪಿ ಸರ್ಕಾರ ನಮ್ಮ ತ್ಯಾಗದಿಂದ ರಚನೆಯಾಗಿದೆ* ಎಂಎಲ್‌ಸಿ ಸ್ಥಾನ ನಮ್ಮ ತ್ಯಾಗಕ್ಕೆ ಸಿಕ್ಕ ಪ್ರತಿಫಲವಷ್ಟೆ

ಪಿರಿಯಾಪಟ್ಟಣ(ಜೂ.20): ವಿಧಾನ ಪರಿಷತ್‌ ಸ್ಥಾನ ನನಗೆ ಸಿಕ್ಕ ಭಿಕ್ಷೆ ಎಂದು ಹೇಳುವವರು ಏನು ಅವರಪ್ಪನ ಮನೆಯಿಂದ ತಂದು ಕೊಟ್ಟಿದ್ದಾರಾ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಖಾರವಾಗಿ ಪ್ರಶ್ನಿಸಿದ್ದಾರೆ. ಬಿಜೆಪಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಪಡೆದ ವಿಧಾನ ಪರಿಷತ್‌ ಸದಸ್ಯತ್ವ ಸ್ಥಾನದ ಭಿಕ್ಷೆಯನ್ನು ರಾಜೀನಾಮೆ ಕೊಡುವ ಮೂಲಕ ಹಿಂದಿರುಗಿಸಿ ಗೌರವ ಉಳಿಸಿಕೊಳ್ಳಿ ಎಂಬ ಸರ್ಕಾರದ ವಿವಿಧ ನಿಗಮ- ಮಂಡಳಿಗಳ ಅಧ್ಯಕ್ಷರು ಹಾಕಿರುವ ಸವಾಲಿಗೆ ವಿಶ್ವನಾಥ್‌ ಈ ರೀತಿ ತಿರುಗೇಟು ನೀಡಿದ್ದಾರೆ.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಎಲ್‌ಸಿ ಸ್ಥಾನ ನಮ್ಮ ತ್ಯಾಗಕ್ಕೆ ಸಿಕ್ಕ ಪ್ರತಿಫಲವಷ್ಟೆ. ನನ್ನ ಬಗ್ಗೆ ಮಾತನಾಡಲು ಅವರಿಗೆ ಏನು ಅಧಿಕಾರವಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

'ವಿಶ್ವನಾಥ್‌ ರಾಜೀನಾಮೆ ನೀಡಿ, ಇಲ್ಲವೆ ಅಪಮಾನ ಎದುರಿಸಲು ಸಿದ್ಧರಾಗಿ'

ಮುಖ್ಯಮಂತ್ರಿಯಾದಿಯಾಗಿ ಸರ್ಕಾರದ ಅಂಗವಾಗಿರುವ ಎಲ್ಲರೂ ನಮ್ಮ ಮರ್ಜಿಯಲ್ಲಿದ್ದಾರೆಯೇ ಹೊರತು ನಾನು ಅವರ ಮರ್ಜಿಯಲ್ಲಿಲ್ಲ. ಈಗಿನ ಬಿಜೆಪಿ ಸರ್ಕಾರ ನಮ್ಮ ತ್ಯಾಗದಿಂದ ರಚನೆಯಾದದ್ದು, ಸರ್ಕಾರದಲ್ಲಿ ಸಚಿವರು, ನಿಗಮ ಮಂಡಳಿ ಅಧ್ಯಕ್ಷ, ಸದಸ್ಯರಾಗಿರುವ ಎಲ್ಲರೂ ಸೀದಾ ಬಂದಿದ್ದರೆ ಅವರೆಲ್ಲ ನಮ್ಮ ತ್ಯಾಗದಿಂದ ಅಧಿಕಾರ ಪಡೆದವರು ಎಂದರು.