ಕೋಲಾರ, (ಜ.07): ನನಗೆ ಇಂಧನ ಖಾತೆ ಕೊಡಲಿ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಅವರು ಸಿಎಂ ಬಿಎಸ್ ಯಡಿಯೂರಪ್ಪ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ.

ಸಂಪುಟ ವಿಸ್ತರಣೆ ಕುರಿತು ಮುಳಬಾಗಿಲು ತಾಲೂಕಿನಲ್ಲಿ ಇಂದು (ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು.. ಸಂಪುಟ ವಿಸ್ತರಣೆ ಬೇಗ ಆಗಲೇಬೇಕು. ನಾಳೆ ನಾಳೆ ಅಂತ ಮುಂದೂಡಲಾಗುತ್ತಿದೆ. ಸಂಕ್ರಾಂತಿ ಮುಗಿದ ಬಳಿಕ ಸಂಪುಟ ವಿಸ್ತರಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಖಾತೆ ಬದಲಾವಣೆ ಆದ್ರೆ ಇಂಧನ ಖಾತೆ ಕೊಡಲಿ ಎಂದು ಒತ್ತಾಯಿಸಿದರು.

ಇವರಿಬ್ಬರಿಗೆ ಸಚಿವ ಸ್ಥಾನ ನೀಡಲು ಒಪ್ಪಿಗೆ ಸಿಕ್ಕಿದೆ: ಹೆಸರು ಬಹಿರಂಗಪಡಿಸಿದ ಸಚಿವ

ಎಲ್ಲರಿಗಿಂತ ಚೆನ್ನಾಗಿ ನಾನು ನಿಭಾಯಿಸಬಲ್ಲೆ. ಇಂಧನ ಇಲಾಖೆಯಲ್ಲಿ ನಂಗೆ 34 ವರ್ಷ ಅನುಭವ ಇದೆ. ನನ್ನ ಹಿನ್ನೆಲೆಯನ್ನ ಅಧ್ಯಯನ ಮಾಡಿ ಸಿಎಂ ಇಂಧನ ಖಾತೆ ಕೊಡಲಿ. ಕಾರಣಾಂತರಗಳಿಂದ ನನಗೆ ಇಂಧನ ಖಾತೆ ತಪ್ಪಿತು. ಸಿಎಂಗೂ ನನ್ನ ಬಗ್ಗೆ ಗೊತ್ತಿದೆ, ಕೊಟ್ರೆ ನಿಭಾಯಿಸುವೆ ಎಂದು ಹೇಳಿದರು.