Asianet Suvarna News Asianet Suvarna News

ಗುಂಡ್ಲುಪೇಟೆ: ಬಿಜೆಪಿ ಸದಸ್ಯರಾಗಿ ಕಾಂಗ್ರೆಸ್‌ನಿಂದ ಅಧ್ಯಕ್ಷ, ಪುರಸಭೆ ಇತಿಹಾಸದಲ್ಲೇ ಮೊದಲು..!

36 ವರ್ಷ ವಯಸ್ಸಿಗೆ ಪುರಸಭೆಗೆ ಕಿರಣ್‌ ಗೌಡ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಸದಸ್ಯರಾದ ಕಿರಣ್‌ ಗೌಡ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾಗಿದ್ದಾರೆ. ಇದು ಪುರಸಭೆ ಇತಿಹಾಸದಲ್ಲಿ ಪ್ರಥಮ. 2019ರ ಪುರಸಭೆ ಚುನಾವಣೆಗೂ ಮುನ್ನ ಇಲ್ಲಿನ ಪುರಸಭೆಗೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ)ಗೆ ಮೀಸಲಾದ ಕಾರಣ ಕಿರಣ್‌ ಗೌಡ ಅತೀ ಹೆಚ್ಚು ಹಣ ಖರ್ಚು ಮಾಡಿ ಗೆದ್ದರು. ಆದರೆ ಪುರಸಭೆ ಅಧ್ಯಕ್ಷ ಸ್ಥಾನದ ಮೀಸಲು ಬದಲಾದ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.

Gundlupete Town Municipal Council President from Congress as BJP member grg
Author
First Published Sep 9, 2024, 10:36 AM IST | Last Updated Sep 9, 2024, 10:36 AM IST

ಗುಂಡ್ಲುಪೇಟೆ(ಸೆ.09):  ಪುರಸಭೆ ನೂತನ ಅಧ್ಯಕ್ಷ ಕಿರಣ್‌ ಗೌಡ ಅತಿ ಕಿರಿಯ ವಯಸ್ಸಿಗೆ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಪುರಸಭೆಗೆ ಮೀಸಲು ಬಂದ ಬಳಿಕ ಬಿಸಿಎಂ (ಬಿ) ಮೀಸಲಿನಲ್ಲಿ ಒಕ್ಕಲಿಗ ಸಮಾಜದ ಮೊದಲ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಸದಸ್ಯರಾಗಿ ಕಾಂಗ್ರೆಸ್‌ನಿಂದ ಪುರಸಭೆ ಚುಕ್ಕಾಣಿ ಹಿಡಿದಿದ್ದಾರೆ. ೩೬ ವರ್ಷ ವಯಸ್ಸಿಗೆ ಪುರಸಭೆಗೆ ಕಿರಣ್‌ ಗೌಡ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಸದಸ್ಯರಾದ ಕಿರಣ್‌ ಗೌಡ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾಗಿದ್ದಾರೆ. ಇದು ಪುರಸಭೆ ಇತಿಹಾಸದಲ್ಲಿ ಪ್ರಥಮ.

೨೦೧೯ರ ಪುರಸಭೆ ಚುನಾವಣೆಗೂ ಮುನ್ನ ಇಲ್ಲಿನ ಪುರಸಭೆಗೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ)ಗೆ ಮೀಸಲಾದ ಕಾರಣ ಕಿರಣ್‌ ಗೌಡ ಅತೀ ಹೆಚ್ಚು ಹಣ ಖರ್ಚು ಮಾಡಿ ಗೆದ್ದರು. ಆದರೆ ಪುರಸಭೆ ಅಧ್ಯಕ್ಷ ಸ್ಥಾನದ ಮೀಸಲು ಬದಲಾದ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.

ಚಾಮರಾಜನಗರ: ಚಾಲನೆ ವೇಳೆ ಚಾಲಕನಿಗೆ ಮೂರ್ಛೆ, ವಿದ್ಯುತ್ ಕಂಬಕ್ಕೆ ಕೆಎಸ್‌ಆರ್‌ಟಸಿ ಬಸ್‌ ಡಿಕ್ಕಿ ..!

ಆದರೀಗ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ೨ನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಮತ್ತೆ ಬಿಸಿಎಂ (ಬಿ)ಗೆ ಬಂತು. ಬಿಜೆಪಿ ಪುರಸಭೆಯಲ್ಲಿ ಸ್ಪಷ್ಟ ಬಹುಮತವಿತ್ತು. ಬಿಜೆಪಿ ಸದಸ್ಯರಲ್ಲಿ ಇಬ್ಬರು ಬಿಜೆಪಿಗೆ ದೂರವಾದ ಹಿನ್ನೆಲೆ ಪುರಸಭೆಯಲ್ಲಿ ಪಕ್ಷೇತರ ಸದಸ್ಯರ ಬೆಂಬಲ ಪಡೆದು ಪುರಸಭೆ ಅಧ್ಯಕ್ಷ ಸ್ಥಾನ ಮೊದಲ ಅವಧಿಗೆ ಸಿಗಲ್ಲ ಎಂಬುದನ್ನು ಮನಗಂಡ ಕಿರಣ್‌ ಗೌಡ ಕಾಂಗ್ರೆಸ್‌ ಸೇರಿ ಅಧ್ಯಕ್ಷರಾಗಿದ್ದಾರೆ.

ಮೊದಲ ಬಾರಿಗೆ ಪುರಸಭೆಗೆ ಗೆದ್ದ ಬಿಜೆಪಿ ಸದಸ್ಯ, ಪುರಸಭೆಗೆ ಮೀಸಲು ಬಂದ ಬಳಿಕ ಒಕ್ಕಲಿಗ ಸಮಾಜದ ಮೊದಲ ಅಧ್ಯಕ್ಷ, ಪುರಸಭೆ ಇತಿಹಾಸದಲ್ಲಿ ಬಿಜೆಪೀಲಿ ಗೆದ್ದು ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾದ ಮೊದಲಿಗರಾದ ಪುರಸಭೆ ನೂತನ ಅಧ್ಯಕ್ಷ ಕಿರಣ್‌ ಗೌಡ ಹೊರಹೊಮ್ಮಿದ್ದಾರೆ.

Latest Videos
Follow Us:
Download App:
  • android
  • ios