ಕೊಳ್ಳೇಗಾಲದಿಂದ ಹೊರಟಿದ್ದ ಬಸ್ಸು ಪುದುರಾಮಾಪುರ ಬಳಿ ತೆರಳುತ್ತಿತ್ತು. ಈ ವೇಳೆ ಚಾಲಕ ಸುಭಾಷ್‌ಗೆ ಏಕಾಏಕಿ ಮೂರ್ಛೆ ಕಾಣಿಸಿಕೊಂಡಿದೆ. ತಕ್ಷಣ ಕೆಳಗೆ ಬಿದ್ದಿದ್ದಾರೆ. ಆಗ ನಿಯಂತ್ರಣ ತಪ್ಪಿದ ಬಸ್‌ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ನಿಂತಿದೆ. 

ಹನೂರು(ಸೆ.09):  ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಿಗೆ ಚಾಲನೆ ವೇಳೆಯೇ ಮೂರ್ಛೆರೋಗ ಕಾಣಿಸಿಕೊಂಡು ಕೆಳಗೆ ಬಿದ್ದ ಪರಿಣಾಮ ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಹನೂರು ತಾಲೂಕಿನ‌ ಪುದುರಾಮಾಪುರದಲ್ಲಿ ಜರುಗಿದೆ. 

ಕೊಳ್ಳೇಗಾಲದಿಂದ ಹೊರಟಿದ್ದ ಬಸ್ಸು ಪುದುರಾಮಾಪುರ ಬಳಿ ತೆರಳುತ್ತಿತ್ತು. ಈ ವೇಳೆ ಚಾಲಕ ಸುಭಾಷ್‌ಗೆ ಏಕಾಏಕಿ ಮೂರ್ಛೆ ಕಾಣಿಸಿಕೊಂಡಿದೆ. ತಕ್ಷಣ ಕೆಳಗೆ ಬಿದ್ದಿದ್ದಾರೆ. ಆಗ ನಿಯಂತ್ರಣ ತಪ್ಪಿದ ಬಸ್‌ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ನಿಂತಿದೆ. 

ಹಬ್ಬದ ಖುಷಿಯನ್ನೇ ಕಸಿದ ಜವರಾಯ, ತುಮಕೂರು ಬಳಿ ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ: 6 ಮಂದಿ ದುರ್ಮರಣ..!

ಬಸ್‌ನಲ್ಲಿ ಕಂಡಕ್ಟರ್‌ ಮತ್ತು ಒಬ್ಬ ಪ್ರಯಾಣಿಕ ಮಾತ್ರ ಇದ್ದರು. ಡಿಕ್ಕಿಯಾದಾಗ ವಿದ್ಯುತ್ ಇರಲಿಲ್ಲ. ಹೀಗಾಗಿ ಅಪಾಯ ತಪ್ಪಿದೆ.