* ಇಂಡಿಯನ್ ಪ್ರೀಮಿಯರ್ ಲೀಗ್ 2020* ಈ ಬಾರಿ ಐಪಿಎಲ್‌ ಚಾಂಪಿಯನ್‌ ಆಗುವ ತಂಡ ಯಾವುದು?* ಭವಿಷ್ಯ ನುಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ

ಬೆಂಗಳೂರು, (ಮೇ.15): ಕಾಂಗ್ರೆಸ್ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಈ ಬಾರಿ ಐಪಿಎಲ್‌ ಅಂತಿಮ ಫಲಿತಾಂಶ ಏನಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಐಪಿಎಲ್ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಸ್ಪಷ್ಟ ಕಾರಣಗಳಿಗಾಗಿ ಗುಜರಾತ್ ಟೈಟನ್ಸ್‌ ಐಪಿಎಲ್ 2022ರ ಕಪ್‌ ಗೆಲ್ಲಲಿದೆ. ಮೋಟಾ ಭಾಯಿ ಮತ್ತು ಮಗ ಅದನ್ನು ಖಾತ್ರಿಪಡಿಸುತ್ತಾರೆ. ಐಟಿ, ಇಡಿ, ಸಿಬಿಐ ಸೇರಿದಂತೆ ಇತರೆ ಸಂಸ್ಥೆಗಳು ಯಾವಾಗ ಕೆಲಸಕ್ಕೆ ಬರುತ್ತವೆ?' ಎಂದು ಬರೆದುಕೊಂಡಿದ್ದಾರೆ.

Scroll to load tweet…

ಈ ಮೂಲಕ ಅವರು ಪರೋಕ್ಷವಾಗಿ ಅಮಿತ್‌ ಶಾ ಮತ್ತು ಅವರ ಪುತ್ರ ಜೈ ಶಾ ಅವರನ್ನು ಕೆಣಕಿದ್ದಾರೆ. ಜೈ ಶಾ ಬಿಸಿಸಿಐನ ಕಾರ್ಯದರ್ಶಿಯೂ ಹೌದು. ಗುಜರಾತ್‌ನ ಅಹಮದಾಬಾದ್‌ನ ಸಿವಿಸಿ ಕ್ಯಾಪಿಟಲ್ಸ್‌ ಸಂಸ್ಥೆಯು ಗುಜರಾತ್‌ ಟೈಟನ್ಸ್‌ನ ಪ್ರಾಂಚೈಸಿ ಹೊಂದಿದೆ.

ಚಿಕ್ಕ ಚಿಕ್ಕ ಮೀನುಗಳನ್ನು ಬಿಡಿ, ದೊಡ್ಡ ತಿಮಿಂಗಿಲಗಳನ್ನು ಹಿಡಿಯಿರಿ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಹೊಸದಾಗಿ ಗುಜರಾತ್ ಗುಜರಾತ್ ಎಂಟ್ರಿ ಕೊಟ್ಟಿದೆ. ಈಗಾಗಲೇ ಗುಜರಾತ್ ಆಡಿದ 12 ಪಂದ್ಯಗಳಲ್ಲಿ ಮೂರು ಸೋತು 9ರಲ್ಲಿ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 

 ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಶಾಸಕ ಪ್ರಿಯಾಂಕ್‌ ಖರ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸಕ್ರಿಯ. ತಮ್ಮ ಟ್ವೀಟ್‌ಗಳ ಮೂಲಕ ಆಡಳಿತ ಪಕ್ಷವನ್ನು ಸದಾ ವಿಮರ್ಶೆಗೆ ಒಳಪಡಿಸುವ ಪ್ರಿಯಾಂಕ್‌ ಈ ಬಾರಿ ಐಪಿಎಲ್‌ ಅಂತಿಮ ಫಲಿತಾಂಶ ಏನಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಸಾಮಾಜಿಮ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಕ್ರೀಡೆಯಲ್ಲೂ ರಾಜಕೀಯ ಮಾಡುತ್ತೀರಾ ಎಂದು ಕೆಲವರು ಪ್ರಿಯಾಂಕ್ ಖರ್ಗೆ ಟ್ವೀಟ್‌ಗೆ ಟೀಕಿಸಿದ್ದಾರೆ. ಇನ್ನು ಕೆಲವರು ಹೌದು ಗುಜರಾತ್ ಈ ಬಾರಿ ಐಪಿಎಲ್ ಗೆಲ್ಲುತ್ತೆ ಎಂದಿದ್ದಾರೆ.