Asianet Suvarna News Asianet Suvarna News

Gujarat Election Result ಕಾಂಗ್ರೆಸ್ ಕಚೇರಿಯಲ್ಲಿ ಹಾಕಿದ್ದ ಪರಿವರ್ತನ್ ಕ್ಲಾಕ್ ಬಂದ್!

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ಉತ್ತರ ಪ್ರದೇಶದ ಮುಖಭಂಗ ಬಳಿಕ ಇದೀಗ ಗುಜರಾತ್ ಹಿನ್ನಡೆ ಕಾಂಗ್ರೆಸ್ ಪಕ್ಷದ ಬುಡವನ್ನೇ ಅಲುಗಾಡಿಸಿದೆ. ಈ ಫಲಿತಾಂಶ ಪ್ರಕಟವಾಗುತ್ತಿದ್ದ ಬೆನ್ನಲ್ಲೇ ಕಾಂಗ್ರೆಸ್ ಕಚೇರಿಯಲ್ಲಿ ಹಾಕಿದ್ದ ಪರಿವರ್ತನ್ ಕ್ಲಾಕ್ ಬಂದ್ ಮಾಡಲಾಗಿದೆ.
 

Gujarat Election Result congress stops parivartan clock set in Ahmedabad office after humiliating defeat in Assembly poll ckm
Author
First Published Dec 8, 2022, 4:23 PM IST

ಅಹಮ್ಮದಾಬಾದ್(ಡಿ.08): ಗುಜರಾತ್ ಜನರು ಬದಲಾವಣೆ ಬಯಸಿದ್ದಾರೆ. ಆಡಳಿತ ವಿರೋಧಿ ಅಲೆಯಿಂದ ಬಿಜೆಪಿ ಕೊಚ್ಚಿ ಹೋಗಲಿದೆ. ಗುಜರಾತ್‌ನಲ್ಲಿ ಬಿಜೆಪಿ ಅಭಿವೃದ್ದಿ ಮಾಡಿಲ್ಲ. ಕೇವಲ ಹೇಳಿಕೆಗಳನ್ನು ನೀಡುತ್ತಾ ಬಂದಿದೆ. ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್ ಪದೇ ಪದೇ ಹೇಳುತ್ತಲೇ ಬಂದಿದೆ. ಇದಕ್ಕಾಗಿ ಗುಜರಾತ್ ಜನರು ಬದಲಾವಣೆ ಬಯಸಿದ್ದಾರೆ ಎಂದು ಕಾಂಗ್ರೆಸ್ ಕಚೇರಿಯಲ್ಲಿ ಪರಿವರ್ತನ್ ಕ್ಲಾಕ್ ಹಾಕಲಾಗಿತ್ತು. ಇದು ಪರಿವರ್ತನೆ ಕೌಂಟ್‌ಡೌನ್ ಕ್ಲಾಕ್ ಆಗಿತ್ತು. ಗುಜರಾತ್ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಚೇರಿಯಲ್ಲಿ ಈ ಕ್ಲಾಕ್ ಹಾಕಲಾಗಿತ್ತು. ಈ ಗಡಿಯಾರದಲ್ಲಿ ಡಿಸೆಂಬರ್ 8ರ ಸಂಜೆವರೆಗಿನ ಸಮಯ ಸೆಟ್ ಮಾಡಲಾಗಿತ್ತು. ಡಿಸೆಂಬರ್ 8ರಂದು ಗುಜರಾತ್‌ನಲ್ಲಿ ಪರಿವರ್ತನೆ ಆಗಲಿದೆ ಅನ್ನೋ ವಿಶ್ವಾಸದಲ್ಲಿ ಕಾಂಗ್ರೆಸ್ ಈ ಗಡಿಯಾರ ಹಾಕಿತ್ತು. ಆದರೆ ಬಿಜೆಪಿ 150 ಕ್ಷೇತ್ರಗಳಲ್ಲಿ ಮುನ್ನಡೆ ಅನ್ನೋ ಮಾಹಿತಿ ಹೊರಬೀಳುತ್ತಿದ್ದಂತೆ ಕಚೇರಿಯಲ್ಲಿ ಹಾಕಿದ್ದ ಪರಿವರ್ತನ್ ಕ್ಲಾಕ್ ಬಂದ್ ಮಾಡಲಾಗಿದೆ. 

ಅಹಮ್ಮದಾಬಾದ್‌ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಹಾಕಿದ್ದ ಪರಿವರ್ತನ್ ಕ್ಲಾಕ್‌ನ್ನು ಬೆಳಗ್ಗೆ 11.20ಕ್ಕೆ ಬಂದ್ ಮಾಡಲಾಗಿದೆ. ಕ್ಲಾಕ್ ಬಂದ್ ಮಾಡುವ ವೇಳೆ ಪರಿವರ್ತನೆಗೆ ಶೂನ್ಯ ದಿನ, 4 ಗಂಟೆ 50 ನಿಮಿಷ 06 ಸೆಕಂಡ್ ಮಾತ್ರ ಬಾಕಿ ಉಳಿದಿತ್ತು. ಆದರೆ ಇದೀಗ ಗುಜರಾತ್‌ನಲ್ಲಿ ಜನರು ಪರಿವರ್ತನೆ ಬಯಸಿಲ್ಲ. ಆದರೆ ಕಾಂಗ್ರೆಸ್ ಪರಿವರ್ತನೆಯಾಗಬೇಕು ಅನ್ನೋ ಸೂಚನೆಯನ್ನು ಜನರು ನೀಡಿದ್ದಾರೆ.

GUJARAT ELECTION RESULT 2022: ಡಿ.12ಕ್ಕೆ ಭೂಪೇಂದ್ರ ಪಟೇಲ್‌ ಸಿಎಂ ಆಗಿ ಪ್ರಮಾಣವಚನ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 16 ಸ್ಥಾನಕ್ಕೆ ಕುಸಿತ ಕಂಡಿದೆ. ಕಾಂಗ್ರೆಸ್ ಸದ್ಯದ ಸ್ಥಿತಿ ನೋಡಿದರೆ ಗುಜರಾತ್‌ನಲ್ಲಿ ವಿರೋಧ ಪಕ್ಷ ಸ್ಥಾನ ಸಿಗುವುದು ಅನುಮಾನವಾಗುತ್ತಿದೆ. ಗುಜರಾತ್ ವಿಧಾನಸಭೆಯಲ್ಲಿ ವಿರೋದ ಪಕ್ಷವಾಗಲು ಕನಿಷ್ಠ 18 ಸ್ಥಾನಗಳನ್ನು ಗೆಲ್ಲಬೇಕು. ಆದರೆ ಕಾಂಗ್ರೆಸ್ 16ರಲ್ಲೇ ಗಿರಕಿ ಹೊಡೆಯುತ್ತಿದೆ. ಇತ್ತ ಆಮ್ ಆದ್ಮಿ ಪಾರ್ಟಿ 5 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ 5 ಸ್ಥಾನದಲ್ಲಿ ಆಮ್ ಆದ್ಮಿ ಪಾರ್ಟಿ ಬಹುತೇಕ ಗೆಲುವಿನ ನಗೆ ಬೀರಿದೆ. 

ಬಿಜೆಪಿ 157 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕೆಲ ಕ್ಷೇತ್ರಗಳಲ್ಲಿ ಅಂತಿಮ ಸುತ್ತಿನ ಮತ ಎಣಿಕೆ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆ ಸಾಧಿಸಿದರೂ 150 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಈ ಮೂಲಕ ಬಿಜೆಪಿ ಗುಜರಾತ್ ಚುನಾವಣಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.  ಬಿಜೆಪಿ ಅಬ್ಬರಕ್ಕೆ ಕಾಂಗ್ರೆಸ್ ಧೂಳೀಪಟವಾಗಿದೆ. ಇತ್ತ ಆಮ್ ಆದ್ಮಿ ಪಾರ್ಟಿ ಸಾಧನೆ ನಿಜಕ್ಕೂ ಮೆಚ್ಚಲೇಬೇಕು. ಶೂನ್ಯದಿಂದ 5 ಸ್ಥಾನ ಗೆಲ್ಲುವತ್ತ ಆಪ್ ಹೊರಟಿದೆ. ಕಾಂಗ್ರೆಸ್‌ಗೆ ಹೋಲಿಸಿದರೆ ಆಮ್ ಆದ್ಮಿ ಪಾರ್ಟಿಯೇ ಗುಜರಾತ್‌ನಲ್ಲಿ ಬಲಿಷ್ಠವಾಗುತ್ತಿದೆ.

Gujarat election results: ಸೋಲಿಗೆ ಹೆದರಿ ಸಾಯಲು ಯತ್ನಿಸಿದ ಕಾಂಗ್ರೆಸ್ ಅಭ್ಯರ್ಥಿ

2917ರಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಮೂಲಕ ಬಿಜೆಪಿಗೆ ತೀವ್ರ ಸ್ಪರ್ದೆ ಒಡ್ಡಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಭಾರತ್ ಜೋಡೋ ಸೇರಿದಂತೆ ಹಲವು ಯಾತ್ರೆಗಳನ್ನು ದೇಶಾದ್ಯಂತ ಕೈಗೊಂಡಿದೆ. ಆದರೆ ಈ ಯಾತ್ರೆಗಳು ಮತವಾಗಿ ಪರಿವರ್ತನೆಯಾಗಲಿಲ್ಲ. ಕಾಂಗ್ರೆಸ್ ಹಿರಿಯನ ನಾಯಕರು ರಾಹುಲ್ ಗಾಂಧಿ ಸೇರಿದಂತೆ ಹಲವರು ಗುಜರಾತ್ ಸಂಪೂರ್ಣವಾಗಿ ನಿರ್ಲಕ್ಷ್ಯಸಿದ್ದರು. ಮೋದಿ, ಹಾಗೂ ಅರವಿಂದ್ ಕೇಜ್ರಿವಾಲ್ ಸತತ ಸಮಾವೇಶಗಳನ್ನು ಮಾಡಿದ್ದಾರೆ. ಇತ್ತ ಕಾಂಗ್ರೆಸ್ ಗುಜರಾತ್ ಕಡೆ ಮುಖ ಹಾಕಿಲ್ಲ. 

ಗುಜರಾತ್ ಚುನಾವಣಾ ಇತಿಹಾಸದಲ್ಲಿ ಈ ಮಟ್ಟಿನ ಕಳಪೆ ಪ್ರದರ್ಶನ ನೀಡಿಲ್ಲ. 2012ರಲ್ಲಿ 66 ಸ್ಥಾನಗಳನ್ನು ಗೆದ್ದಿತ್ತು. 2007ರಲ್ಲಿ 59 ಸ್ಥಾನ ಗೆದ್ದುಕೊಂಡಿತ್ತು. ಇನ್ನು 2002ರಲ್ಲಿ 51 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದಕ್ಕೂ ಮುನ್ನ ಕಾಂಗ್ರೆಸ್ ಬಹುಮತದೊಂದಿಗೆ ಆಡಳಿತ ನಡೆಸಿತ್ತು. ಗುಜರಾತ್‌ನಲ್ಲಿ ಕಾಂಗ್ರೆಸ್ ಇದೇ ಮೊದಲ ಬಾರಿಗೆ 50ಕ್ಕಿಂತ ಕಡಿಮೆ ಸ್ಥಾನ ಗೆದ್ದುಕೊಂಡಿದೆ. 

Follow Us:
Download App:
  • android
  • ios