ಗುಜರಾತ್‌ನಲ್ಲಿ ಆಪ್ ಸರ್ಕಾರ ರಚನೆ, ಫುಲ್ ಟ್ರೋಲ್ ಆಯ್ತು ಕೇಜ್ರಿವಾಲ್ ಐಬಿ ರಿಪೋರ್ಟ್!
ಐಬಿ ವರದಿ ಬಂದಿದೆ. ಗುಜರಾತ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚಿಸಲಿದೆ ಎಂದು ಈ ವರದಿ ಹೇಳುತ್ತಿದೆ. ಇದು ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ ಮಾತು. ಇದೀಗ ಇದೇ ಮಾತು ಕೇಜ್ರಿವಾಲ್‌ಗೆ ಮುಳುವಾಗಿದೆ.
ನವದೆಹಲಿ(ಡಿ.09) ಐಬಿ ಕಿ ರಿಪೋರ್ಟ್ ಆಯಿ ಹೇ. ಗುಜರಾತ್ ಮೇ ಆಮ್ ಆದ್ಮಿ ಪಾರ್ಟಿ ಕಿ ಸರ್ಕಾರ್ ಬನ್‌ನೇ ಜಾರಹಿಹೇ. ಇದು ಸ್ವತ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ ಮಾತು. ಇದೀಗ ಈ ಹೇಳಿಕೆ ಟ್ರೋಲ್ ಆಗುತ್ತಿದೆ. ಗುಜರಾತ್‌ನಲ್ಲಿ ಬಿದೆಪಿ 156 ಸ್ಥಾನ ಗೆದ್ದು ಭಾರಿ ಬಹಮತದೊಂದಿದೆ ಸರ್ಕಾರ ರಚಿಸುವ ತಯಾರಿಯಲ್ಲಿದೆ. ಎಲ್ಲಾ ಸಮೀಕ್ಷೆಗಳ ಲೆಕ್ಕಾಚಾರವನ್ನು ಬಿಜೆಪಿ ತಲೆಕೆಳಗೆ ಮಾಡಿದೆ. ಇದರ ನಡುವೆ ಅರವಿಂದ್ ಕೇಜ್ರಿವಾಲ್ ಹೇಳಿದ ಭವಿಷ್ಯಗಳು ಭಾರಿ ಟ್ರೋಲ್ ಆಗುತ್ತಿದೆ. ಗುಜರಾತ್ ಚುನಾವಣೆಗೂ ಮುನ್ನ ಆಪ್ ಆಯೋಜಿಸಿದ ರ್ಯಾಲಿ ಹಾಗೂ ಸಮಾವೇಶಗಳಲ್ಲಿ ಅರವಿಂದ್ ಕೇಜ್ರಿವಾಲ್ ಹೇಳಿದ ಎಲ್ಲಾ ಭವಿಷ್ಯಗಳು ಸುಳ್ಳಾಗಿದೆ. ಇಷ್ಟೇ ಅಲ್ಲ ಈ ಮಾತುಗಳು ಇದೀಗ ಟ್ರೋಲ್ ಆಗುತ್ತಿದೆ. ಇದರಲ್ಲಿ ಪ್ರಮುಖವಾಗಿ, ಗುಜರಾತ್ ಐಬಿ ರಿಪೋರ್ಟ್ ಬಂದಿದೆ. ಐಬಿ ರಿಪೋರ್ಟ್ ಪ್ರಕಾರ ಗುಜರಾತ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಇದೀಗ ಇದೇ ವಿಡಿಯೋ ಇಟ್ಟುಕೊಂಡು ಟ್ರೋಲಿಗರು ಕೈಸಾ ಲಗಾ ಮೇರಾ ಮಜಾಕ್ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಅರವಿಂದ್ ಕೇಜ್ರಾವಾಲ್(Arvind Kejriwal) ಆಡಿದ ಪ್ರತಿಯೊಂದು ಮಾತುಗಳು ಇದೀಗ ಟ್ರೋಲ್(Trolls) ಆಗುತ್ತಿದೆ. ಕೇಜ್ರಿವಾಲ್ ಅತೀ ದೊಡ್ಡ ಸುಳ್ಳುಗಾರ. ಸುಳ್ಳನ್ನು ತಲೆ ಮೇಲೆ ಹೊಡೆದಂತೆ ಹೇಳುತ್ತಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಅರವಿಂದ್ ಕೇಜ್ರಿವಾಲ್ ಇದೇ ಐಬಿ ರಿಪೋರ್ಟ್ ಹೇಳಿಕೆಯನ್ನು ದೆಹಲಿ ಜವಾಹರ್‌ಲಾಲ್ ನೆಹರೂ ಯೂನಿವರ್ಸಿಟಿ(JNU) ಪ್ರೋಫೆಸರ್ ಆನಂದ್ ರಂಗನಾಥನ್ ಪ್ರಶ್ನಿಸಿದ್ದಾರೆ. ಆಮ್ ಆದ್ಮಿ ಪಾರ್ಟಿ(AAP) ಗುಜರಾತ್‌ನಲ್ಲಿ 5 ಸ್ಥಾನ ಗೆದ್ದುಕೊಂಡಿದೆ(Gujarat Election Result). ಐಬಿ ರಿಪೋರ್ಟ್(AAP IB Report) ಪ್ರಕಾರ 87 ಸ್ಥಾನಗಳು ಕಡಿಮೆಯಾಗಿದೆ. ನಮ್ಮ ಗುಪ್ತಚರ ಇಲಾಖೆ ಇಷ್ಟು ತಪ್ಪು ಮಾಹಿತಿ ನೀಡಲು ಸಾಧ್ಯವೇ? ಇದಕ್ಕೆ ಹೊಣೆ ಯಾರು? ತೆರಿಗೆದಾರರ ಹಣದಲ್ಲಿ ಸವಾರಿ ಮಾಡುತ್ತಿದ್ದೀರಾ? ಎಂದು ಆನಂದ್ ರಂಗನಾಥನ್ ಪ್ರಶ್ನಿಸಿದ್ದಾರೆ.
ಪೇಪರ್‌ನಲ್ಲಿ ಬರ್ದು ಕೊಡ್ತಿನಿ, ಈ ಮೂರ್ ಜನ ಗೆಲ್ತಾರೆ' ಎಂದಿದ್ದ ಕೇಜ್ರಿವಾಲ್, ಅವರ ರಿಸಲ್ಟ್ ನೋಡಿದ್ರಾ?
ಆನಂದ್ ರಂಗನಾಥನ್ ಟ್ವೀಟ್‌ಗೆ ಹಲವರು ಮತ್ತೆ ಅರವಿಂದ್ ಕೇಜ್ರಿವಾಲ್ ಟ್ರೋಲ್ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಪ್ರಕಾರ ಐಬಿ ರಿಪೋರ್ಟ್ ಎಂದರೆ ಇಸುದಾನ್ ಭಾಯಿ ರಿಪೋರ್ಟ್ ಎಂದರ್ಥ. ಇದು ಗುಪ್ತಚರ ಇಲಾಖೆ ವರದಿ ಅಲ್ಲ. ನೀವು ತಪ್ಪಾಗಿ ಅರ್ಥೈಸಿದ್ದೀರಿ ಎಂದಿದ್ದಾರೆ. ಇನ್ನು ಕೆಲವರು ಕೇಜ್ರಿವಾಲ್ ಐಬಿ ರಿಪೋರ್ಟ್ ಎಂದಿರುವುದು ವಿಸ್ಕಿ ಬ್ರ್ಯಾಂಡ್ ಇಂಪಿರಿಯಲ್ ಬ್ಲೂ ಎಂದು ಉಲ್ಲೇಖಿಸಿದ್ದಾರೆ.
ಇದೇ ವೇಳೆ ಐಬಿ ರಾಜೀನಾಮೆ ನೀಡ್ತಾರಾ? ಜಸ್ಟ್ ಆಸ್ಕಿಂಗ್ ಎಂದು ಹಲವರು ಪ್ರಶ್ನಿಸಿದ್ದಾರೆ. ಎಡಪಂಥಿಯ ವಿಚಾರ ಧಾರೆ ಮೂಲಕ ಬಿಜೆಪಿ ಹಾಗೂ ಬಲಪಂಥಿಯವನ್ನು ಪ್ರಶ್ನಿಸುವ ನಟ ಪ್ರಕಾಶ್ ರಾಜ್ ಕಾಲೆಳೆದಿದ್ದಾರೆ.
ಕೇಜ್ರಿವಾಲ್ ಕೆಲ ಭಾಷಣದಲ್ಲಿ ಹಾಗೂ ಸಂದರ್ಶನದಲ್ಲಿ ಲಿಖಿತ ರೂಪದಲ್ಲಿ ಆಮ್ ಆದ್ಮಿ ಪಾರ್ಟಿ ಈ ಬಾರಿ ಗುಜರಾತ್‌ನಲ್ಲಿ ಸರ್ಕಾರ ರಚಿಸಲಿದೆ ಎಂದು ಬರೆದುಕೊಟ್ಟಿದ್ದಾರೆ. ಇಷ್ಟೇ ಅಲ್ಲ ಆಮ್ ಆದ್ಮಿ ಪಾರ್ಟಿಯ ಮೂವರು ಅಭ್ಯರ್ಥಿಗಳು ಭಾರಿ ಅಂತರದಲ್ಲಿ ಗೆಲುವು ದಾಖಲಿಸಲಿದ್ದಾರೆ ಎಂದು ಬರೆದುಕೊಟ್ಟಿದ್ದರು. ಆದರೆ ಇವೆಲ್ಲವೂ ಬುಡ ಮೇಲಾಗಿದೆ.
ಮಹಾನಗರ ಪಾಲಿಕೆ ಗೆದ್ದ ಬೆನ್ನಲ್ಲೇ ಆಮ್ ಆದ್ಮಿಗೆ ಎದುರಾಯ್ತು ಸಂಕಷ್ಟ!
ಅರವಿಂದ್ ಕೇಜ್ರಿವಾಲ್ ಗುಜರಾತ್ ಚುನಾವಣೆಯಲ್ಲಿ ಮಾಡಿದ ಭಾಷಣ ಹಾಗೂ ಗುಜರಾತ್ ಚುನಾವಣೆ ಕುರಿತು ನೀಡಿದ ಸಂದರ್ಶನ ಇದೀಗ ಟ್ರೋಲ್ ಆಗುತ್ತಿದೆ. ಆಪ್ ಸಿಎಂ ಅಭ್ಯರ್ಥಿ ಘೋಷಣೆ ವೇಳೆ ಅರವಿಂದ್ ಕೇಜ್ರಿವಾಲ್ ಮಾಡಿದ ಭಾಷಣವನ್ನು ಕಾಮಿಡಿಯಾಗಿ ಬಳಸಲಾಗುತ್ತಿದೆ. ಡಿಸೆಂಬರ್ 8 ರಂದು ಗುಜರಾತ್‌ನಲ್ಲಿ ಅತೀ ದೊಡ್ಡ ಪರಿವರ್ತನೆ ಬರಲಿದೆ. ಮತ ಏಣಿಕೆ ದಿನ. ಬಿಜೆಪಿ ಕೊಚ್ಚಿ ಹೋಗಿ ಆಮ್ ಆದ್ಮಿ ಪಾರ್ಟಿ ಗುಜರಾತ್‌ನಲ್ಲಿ ಉದಯಿಸಲಿದೆ. ಇಂದು ನಾವು ಆಮ್ ಆದ್ಮಿ ಪಾರ್ಟಿ ಸಿಎಂ ಅಭ್ಯರ್ಥಿ ಹೆಸರನ್ನ ಘೋಷಿಸುತ್ತಿಲ್ಲ. ಬದಲಾಗಿ ಮುಂದಿನ ಗುಜರಾತ್ ಸಿಎಂ ಹೆಸರನ್ನು ಘೋಷಿಸುತ್ತಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದರು.