Gujarat Election Result 2022: ಗುಜರಾತ್‌ನ 8 ಹಾಟ್‌ ಸೀಟ್‌ಗಳಲ್ಲಿ ಹೇಗಿದೆ ಪರಿಸ್ಥಿತಿ?

ಗುಜರಾತ್‌ನಲ್ಲಿ ಬಿಜೆಪಿ ಸ್ಪಷ್ಟವಾಗಿ ಬಹುಮತದತ್ತ ಮುನ್ನಡೆಯುತ್ತಿದೆ. ಆರಂಭಿಕ ಟ್ರೆಂಡ್‌ಗಳಲ್ಲಿ ಗುಜರಾತ್‌ನಲ್ಲಿ ಬಿಜೆಪಿ ದಾಖಲೆಯ ಗೆಲುವು ಕಾಣುವುದು ನಿಶ್ಚಿತವಾಗಿದೆ. ಅದರ ನಡುವೆ ಗುಜರಾತ್‌ನ ಎಂಟು ಹಾಟ್‌ ಸೀಟ್‌ಗಳ ಬಗ್ಗೆ ಕುತೂಹಲ ಆರಂಭವಾಗಿದೆ.
 

Gujarat Election Result 2022 8 hot seats in Gujarat including Narendra Modi Amit Shah and Rewaba san

ಅಹಮದಾಬಾದ್‌ (ಡಿ.8): ದಾಖಲೆಯ 7ನೇ ಬಾರಿಗೆ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವುದು ಬಹುತೇಕ ನಿಶ್ಚಿತವಾಗಿದೆ. ಆರಂಭಿಕ ಟ್ರೆಂಡ್‌ಗಳಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜು ಮಾಡಲಾಗಿದೆ. ಮೊರ್ಬಿ ಸೇತುವೆ ಕುಸಿತ, ಆಡಳಿತ ವಿರೋಧಿ ಅಲೆ ಈ ಎಲ್ಲದರ ನಡುವೆಯೂ ಗುಜರಾತ್‌ ಮತದಾರ ಮತ್ತೊಮ್ಮೆ ಬಿಜೆಪಿಯ ಕೈಹಿಡಿಯುವುದು ಬಹುತೇಕ ನಿಶ್ಚಯವಾಗಿದೆ. ಅದರೊಂದಿಗೆ ಗುಜರಾತ್‌ನ ಎಂಟು ಹಾಟ್‌ ಸೀಟ್‌ಗಳಾದ ಜಾಮ್‌ನಗರ ಉತ್ತರ, ಮಣಿನಗರದಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದರ ರಿಪೋರ್ಟ್‌.

ಜಾಮ್‌ನಗರ ಉತ್ತರ: ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ನಿಂದ ಹಿರಿಯ ನಾಯಕ ಬಿಪೇಂದ್ರ ಸಿನ್ಹಾ ಜಡೇಜಾ ಹಾಗೂ ಆಪ್‌ನಿಂದ ಕರ್ಸನ್ ಕಾರ್ಮೋರ್ ಸ್ಪರ್ಧೆ ಮಾಡಿದ್ದಾರೆ. ವಿಶೇಷವೆಂದರೆ ರಿವಾಬಾ ಅವರ ಸಂಬಂಧಿ ನಯಾಬಾ ಸ್ವತಃ ರಿವಾಬಾ ವಿರುದ್ಧ ಪ್ರಚಾರ ಮಾಡಿದ್ದರು. ಅವರು ಜಾಮ್‌ನಗರ ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಿವಾಬಾ ಅವರ ಮಾವ ಅನಿರುದ್ಧ್ ಜಡೇಜಾ ಕೂಡ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು.
ಮುನ್ನಡೆ: ಬಿಪೇಂದ್ರ ಸಿನ್ಹಾ ಜಡೇಜಾ (ಕಾಂಗ್ರೆಸ್‌)

ಮಣಿನಗರ (ಅಹಮದಾಬಾದ್): ರಾಜ್‌ಕೋಟ್‌ ಪಶ್ಚಿಮದ ಮಣಿನಗರ ಕ್ಷೇತ್ರದಿಂದ ನರೇಂದ್ರ ಮೋದಿ 2002ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆ ಬಳಿಕ, 2007 ಹಾಗೂ 2012ರ ಚುನಾವಣೆಯನ್ನೂ ಅಹಮದಾಬಾದ್ ಕ್ಷೇತ್ರದ ಮಣಿನಗರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಕಳೆದ 8 ಚುನಾವಣೆಗಳಿಂದ ಈ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಪಕ್ಷ ಇಲ್ಲಿಂದ ಅಮುಲ್ ಭಟ್ ಗೆ ಈ ಬಾರಿ ಟಿಕೆಟ್ ನೀಡಿದೆ. ಎಎಪಿ ವಿಪುಲ್ ಭಾಯ್ ಪಟೇಲ್ ಮತ್ತು ಕಾಂಗ್ರೆಸ್ ಸಿಎಂ ರಜಪೂತ್ ಅವರನ್ನು ಕಣಕ್ಕಿಳಿಸಿದೆ.
ಮುನ್ನಡೆ:  ಅಮುಲ್ ಭಟ್ (ಬಿಜೆಪಿ)

ನಾರಣಪುರ (ಅಹಮದಾಬಾದ್): ಅಹಮದಾಬಾದ್‌ನ ನಾರಣಪುರ ವಿಧಾನಸಭಾ ಕ್ಷೇತ್ರವು 2008 ರಲ್ಲಿ ಡಿಲಿಮಿಟೇಶನ್ ನಂತರ 2012 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಮೊದಲ ಬಾರಿಗೆ ಅಮಿತ್ ಶಾ ಇಲ್ಲಿಂದ ದೊಡ್ಡ ಗೆಲುವು ದಾಖಲಿಸಿದ್ದರು. ಇದಾದ ನಂತರ 2017ರಲ್ಲಿ ಬಿಜೆಪಿಯ ಕೌಶಿಕಭಾಯ್ ಪಟೇಲ್ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ಈ ಬಾರಿ ಬಿಜೆಪಿ ಜಿತೇಂದ್ರಭಾಯಿ ಪಟೇಲ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ನಿಂದ ಸೋನಾಲ್ ಪಟೇಲ್ ಮತ್ತು ಆಪ್ ನಿಂದ ಪಂಕಜ್ ಪಟೇಲ್ ಕಣದಲ್ಲಿದ್ದಾರೆ.
ಮುನ್ನಡೆ: ಜಿತೇಂದ್ರಭಾಯಿ ಪಟೇಲ್ (ಬಿಜೆಪಿ)

ಘಟ್ಲೋಡಿಯಾ (ಅಹಮದಾಬಾದ್): ಗುಜರಾತ್‌ಗೆ ಇಬ್ಬರು ಮುಖ್ಯಮಂತ್ರಿಗಳನ್ನು (ಭೂಪೇಂದ್ರ ಪಟೇಲ್ ಮತ್ತು ಆನಂದಿಬೆನ್ ಪಟೇಲ್) ನೀಡಿದ ಘಟ್ಲೋಡಿಯಾ ಸ್ಥಾನದಿಂದ ಈ ಬಾರಿ ರಾಜ್ಯದ ಸಿಎಂ ಭೂಪೇಂದ್ರ ಪಟೇಲ್ ಕಣದಲ್ಲಿದ್ದಾರೆ. ಪಾಟಿದಾರ್ ಮತದಾರರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಜ್ಯಸಭಾ ಸಂಸದ ಅಮಿ ಬೆನ್ ಯಾಗ್ನಿಕ್ ಅವರಿಗೆ ಟಿಕೆಟ್ ನೀಡಿದೆ. ವಿಜಯ್ ಪಟೇಲ್ ಆಪ್ ನಿಂದ ಸ್ಪರ್ಧಿಸಿದ್ದಾರೆ.
ಮುನ್ನಡೆ: ಭೂಪೇಂದ್ರ ಪಟೇಲ್ (ಬಿಜೆಪಿ)

ವಿರಾಮಗಾಂ (ಅಹಮದಾಬಾದ್): ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹಾರ್ದಿಕ್ ಪಟೇಲ್ ವಿರಾಮಗಾಂ ಕ್ಷೇತ್ರದ ಅಭ್ಯರ್ಥಿ. ಕಳೆದ ಎರಡು ಅವಧಿಯಿಂದ ಕಾಂಗ್ರೆಸ್ ಈ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. 2002 ಮತ್ತು 2007ರಲ್ಲಿ ಗೆದ್ದಿದ್ದ ಕಾಂಗ್ರೆಸ್‌, ಅನುಭವಿ ಲಖಾಭಾಯಿ ಭಾರವಾಡ್‌ ಅವರನ್ನು ಕಣಕ್ಕಿಳಿಸಿದೆ. ಎಎಪಿ ಚುನಾವಣೆಯಲ್ಲಿ ಅಮರ್ ಸಿಂಗ್ ಠಾಕೂರ್ ಅವರನ್ನು ಕಣಕ್ಕಿಳಿಸಿದೆ.
ಮುನ್ನಡೆ: ಹಾರ್ದಿಕ್‌ ಪಟೇಲ್‌ (ಬಿಜೆಪಿ)

Gujarat Assembly Elections: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ದಾಖಲೆಯ ಬಹುಮತ, ಮತ್ತೆ ಅಧಿಕಾರಕ್ಕೆ..!

ಮೊರ್ಬಿ: ಕಾಂತಿಲಾಲ್‌ ಅಮೃತಿಯ ಅವರು ಬಿಜೆಪಿ ಟಿಕೆಟ್‌ನಲ್ಲಿ ಐದು ಬಾರಿ ಮೋರ್ಬಿಯಿಂದ ಗೆದ್ದಿದ್ದಾರೆ. 2017 ರಲ್ಲಿ, ಅವರು INC ಯ ಬ್ರಿಜೇಶ್ ಮೆರ್ಜಾ ಅವರನ್ನು ಸೋಲಿಸಿದರು. ಚುನಾವಣೆಯ ನಂತರ, ಮೆರ್ಜಾ  ಬಿಜೆಪಿ ಸೇರಿದ್ದರು. ಇದರಿಂದಾಗಿ 2018 ರಲ್ಲಿ ಉಪಚುನಾವಣೆ ನಡೆಯಿತು. ಇದರಲ್ಲಿ ಮೆರ್ಜಾ ಜಯ ಸಾಧಿಸಿದ್ದರು.  ಮೋರ್ಬಿ ಸೇತುವೆ ಅಪಘಾತದ ಸಮಯದಲ್ಲಿ, ಜನರ ಜೀವ ಉಳಿಸಿದ್ದ ಕಾಂತಿಲಾಲ್‌ ಅಮೃತಿಯ ಅನ್ನು ಬಿಜೆಪಿ ಕಣಕ್ಕಿಳಿಸಿದೆ.  ಕಾಂಗ್ರೆಸ್ ಜಯಂತಿ ಪಟೇಲ್ ಮತ್ತು ಆಪ್ ಪಂಕಜ್ ರಂಸಾರಿಯಾಗೆ ಟಿಕೆಟ್ ನೀಡಿದೆ.
ಮುನ್ನಡೆ: ಕಾಂತಿಲಾಲ್‌ ಅಮೃತಿಯ  (ಬಿಜೆಪಿ)

Himachal Pradesh Exit Polls ಹಿಮಾಚಲದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ!

ಖಂಭಾಲಿಯಾ (ದ್ವಾರಕಾ): ಖಂಭಾಲಿಯಾ ಕ್ಷೇತ್ರ ಇಲ್ಲಿ ಎಎಪಿಯ ಸಿಎಂ ಅಭ್ಯರ್ಥಿ ಇಸುದನ್‌ ಗಧ್ವಿ ಸ್ಪರ್ಧೆ ಮಾಡುತ್ತಿದ್ದಾರೆ. ಮುಳುಬಾಯಿ ಹರದಾಸಭಾಯಿ ಬೇರಾ ಅವರಿಗೆ ಬಿಜೆಪಿ ಹಾಗೂ ಹಾಲಿ ಶಾಸಕ ವಿಕ್ರಮ್ ಮೇಡಂ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. 2017ರಲ್ಲಿ ಬಿಜೆಪಿ ಅಭ್ಯರ್ಥಿಯನ್ನು 11 ಸಾವಿರದ 46 ಮತಗಳಿಂದ ಇವರು ಸೋಲಿಸಿದ್ದರು. ಈ ಸೀಟಿನ ಕುತೂಹಲಕಾರಿ ಅಂಶವೆಂದರೆ ಓವೈಸಿ ಅವರ ಎಐಎಂಐಎಂ ಕೂಡ ಇಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಓವೈಸಿಯ ಕಣ್ಣು ಮುಸ್ಲಿಂ ಜನಸಂಖ್ಯೆಯ ಮೀನುಗಾರರ ಮೇಲಿದೆ.
ಮುನ್ನಡೆ: ಇಸುದನ್‌ ಗಧ್ವಿ (ಆಪ್‌)

ಬಯಾದ್ ಅರಾವಳಿ): ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಅವರ ಪುತ್ರ ಮಹೇಂದ್ರ ವಘೇಲಾ ಇಲ್ಲಿಂದ ಕಣದಲ್ಲಿದ್ದಾರೆ. 2012ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಗೆದ್ದಿದ್ದರು. 2017ರ ಚುನಾವಣೆಯಲ್ಲಿ ಸ್ಪರ್ಧಿಸದೆ ಬಿಜೆಪಿ ಸೇರಿದ್ದರು. ಆದರೆ, ಮೂರು ತಿಂಗಳ ನಂತರ ಕಾಂಗ್ರೆಸ್‌ಗೆ ಮರಳಿದರು. ಇಲ್ಲಿ ಬಿಜೆಪಿ ಭಿಖಿಬೆನ್ ಪರ್ಮಾರ್‌ಗೆ ಮತ್ತು ಎಎಪಿ ಚುನಿಭಾಯ್ ಪಟೇಲ್‌ಗೆ ಟಿಕೆಟ್ ನೀಡಿದೆ.
ಮುನ್ನಡೆ: ಭಿಖಿಬೆನ್ ಪರ್ಮಾರ್‌ (ಬಿಜೆಪಿ)
 

Latest Videos
Follow Us:
Download App:
  • android
  • ios