Asianet Suvarna News Asianet Suvarna News

ರಾಷ್ಟ್ರಧ್ವಜ ಮಾರಾಟಕ್ಕೂ ಜಿಎಸ್‌ಟಿ; ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಆಕ್ರೋಶ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳು ರಾಷ್ಟ್ರ ಧ್ವಜ ಮಾರಾಟಕ್ಕೂ ಜಿಎಸ್‌ಟಿ ಹಾಕಿರುವುದು ದೊಡ್ಡ ದುರಂತ  ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಅನ್ಸಾರಿ ಆಕ್ರೋಶ

GST for sale of national flag Congress leader outraged against central and state government Gangavati rav
Author
Hubli, First Published Aug 12, 2022, 3:50 PM IST

ಗಂಗಾವತಿ (ಆ.12) ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳು ರಾಷ್ಟ್ರ ಧ್ವಜ ಮಾರಾಟಕ್ಕೂ ಜಿಎಸ್‌ಟಿ ಹಾಕಿರುವುದು ದೊಡ್ಡ ದುರಂತ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಇಕ್ಬಾಲ್‌ ಅನ್ಸಾರಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಶ್ರೀಚೆನ್ನಬಸವಸ್ವಾಮಿ ಸಮುದಾಯ ಭವನದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ನಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸರ್ಕಾರ ಉಚಿತವಾಗಿ ಧ್ವಜಗಳನ್ನು ನೀಡಬೇಕಾಗಿತ್ತು. ಆದರೆ ಸರ್ಕಾರ ಎಲ್ಲ ಕಾಮಗಾರಿಗಳಲ್ಲಿಯೂ ಶೇ. 40 ಪರ್ಸೇಂಟ್‌ ಪಡೆಯುತ್ತಾರೆ. ಆದರೆ ರಾಷ್ಟ್ರಧ್ವಜಗಳಿಗೆ ಜಿಎಸ್‌ಟಿ ಹಾಕುವ ಕೆಲಸ ಮಾಡಿದ್ದಾರೆ. ಇದು ರಾಷ್ಟ್ರಪ್ರೇಮವೇ ಎಂದು ಪ್ರಶ್ನಿಸಿದರು.\

ಜಗತ್ತಲ್ಲಿ ಆಗಿದ್ದಾಗಲಿ ನಮಗಂತೂ ನೋ ಟೆನ್ಷನ್: ಭಾರತಕ್ಕೆ ನಿರ್ಮಲಾ ಸೀತಾರಾಮನ್ ಅಭಯ!‌

ಬಿಜೆಪಿ ಸರ್ಕಾರ(BJP Govt) ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಕಾಂಗ್ರೆಸ್‌ ನಾಯಕರು ಎಂದು ಸ್ಮರಿಸಿದರು. ಬಿಜೆಪಿ ನಾಯಕರಿಗೆ ಯಾರಾದರೂ ವಿರೋಧಿಸಿದರೆ ಅಂಥವರ ವಿರುದ್ಧ ಇಡಿ, ಸಿಬಿಐ, ತೆರಿಗೆ ದಾಳಿ, ಪೊಲೀಸ್‌ ಠಾಣೆಯಲ್ಲಿ ದೇಶದ್ರೋಹಿ ಪ್ರಕರಣಗಳನ್ನು ದಾಖಲಿಸುವ ಕೆಲಸ ಮಾಡುತ್ತಿದ್ದಾರೆಂದು ದೂರಿದ ಅವರು ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ ತಮಗೆ ಬೇಕಾದ ಇತಿಹಾಸಕಾರರ ಬಗ್ಗೆ ಸೇರಿಸುತ್ತಾರೆ. ಆದರೆ ಟಿಪ್ಪು ಸುಲ್ತಾನರಂತಹ ಹೋರಾಟಗಾರರನನ್ನು ದೂರ ಇಟ್ಟಿದ್ದಾರೆ ಎಂದರು.

ಶೃಂಗೇರಿ ಶಾರದಾ ಪೀಠಕ್ಕೆ ಭೂಮಿ ನೀಡಿದ್ದು ಟಿಪ್ಪು ಸುಲ್ತಾನರು. ಇದನ್ನು ಬಿಜೆಪಿಯವರು ಅರಿತು ಕೊಳ್ಳಬೇಕೆಂದರು. ಗಂಗಾವತಿಯ ಅಭಿವೃದ್ಧಿಯೇ ನಮ್ಮ ಮಂತ್ರವಾಗಿದ್ದು, ಬರುವ ದಿನಗಳಲ್ಲಿ ಜನರು ಮತ್ತೇ ಆಶೀರ್ವದಿಸಿದರೆ ನಗರವನ್ನು ಸರ್ವಾಂಗೀಣ ಅಭಿವೃದ್ಧಿಗೊಳಿಸಿ ಮಾದರಿ ಕ್ಷೇತ್ರ ಮಾಡುವುದಾಗಿ ತಿಳಿಸಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿಯವರಲ್ಲಿ ಡೊಂಗಿ ರಾಷ್ಟ್ರ ಭಕ್ತಿ ಇದೆ ಎಂದು ದೂರಿದ ಅವರು, ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ, ತ್ಯಾಗ ಬಲಿದಾನ ಮಾಡಿಲ್ಲ. ಕೇವಲ ಡೊಂಗಿ ರಾಷ್ಟ್ರ ಭಕ್ತಿ ತೋರಿಸುತ್ತಿದ್ದಾರೆಂದು ಹೇಳಿದರು.

ಮಾಜಿ ಸಚಿವ ಕೆ.ಎಸ…. ಈಶ್ವರಪ್ಪ ಅವರು ದೆಹಲಿ ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದನ್ನು ಗಮನಿಸಿದರೆ ಅವರಿಗೆ ದೇಶಭಕ್ತಿ ಎಷ್ಟರ ಮಟ್ಟಿಗೆ ಇದೆ ಎಂಬದು ತೋರಿಸಿ ಕೊಡುತ್ತದೆ ಎಂದರು.ದೇಶದಲ್ಲಿ ಧ್ವಜ ತಯಾರಿಸುವುದನ್ನು ಬಿಟ್ಟು ಚೀನಾದಿಂದ ಧ್ವಜಗಳನ್ನು ತರಿಸಿ ಮಾರಾಟ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಎಸ್‌ಟಿ ತಪ್ಪಿಸಲು ಇನ್ಮುಂದೆ 26 ಕೇಜಿ ಚೀಲದಲ್ಲಿ ಅಕ್ಕಿ..!

ಮಾಜಿ ಸಂಸದ ಶಿವರಾಮಗೌಡ, ಜ್ಯೋತಿ ಗೊಂಡಬಾಳ, ಎಸ್‌.ಬಿ. ಖಾದ್ರಿ, ನಗರ ಕಾಂಗ್ರೆಸ್‌ ಅಧ್ಯಕ್ಷ ಶ್ಯಾಮೀದ್‌ ಮನಿಯಾರ ಮಾತನಾಡಿದರು. ಕಾಂಗ್ರೆಸ್‌ ಯುವ ಮುಖಂಡ ಇಮ್ತೀತಿಯಾಜ ಅನ್ಸಾರಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶರಣೇಗೌಡ ಬಸಾಪಟ್ಟಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮರೇಶ ಗೋನಾಳ, ನಗರಸಬಾ ಸದಸ್ಯರಾದ ಮನೋಹರಸ್ವಾಮಿ, ಎಫ್‌. ರಾಘವೇಂದ್ರ, ಕಾಸಿಂಸಾಬ ಗದ್ವಾಲ…, ಹುಸೇನಪ್ಪ ಹಂಚಿನಾಳ, ಸೋಮನಾಥ ಭಂಡಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios