ಸರ್ಕಾರ ಪಿಎಸ್‌ಐ ಹಗರಣ ತನಿಖೆ ನಡೆ​ಸ​ಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

ಪಿಎಸ್‌ಐ ಹಗರಣ ಸೇರಿದಂತೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರ ಅವಧಿಯಲ್ಲಿ ಆಗಿರುವ ಸಮಗ್ರ ಹಗರಣಗಳು ಮತ್ತು ಅವರ ಕುಟುಂಬಸ್ಥರ ಮೇಲಿರುವ ರಿಯಲ್‌ ಎಸ್ಟೇಟ್‌ ಆರೋಪದ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಿ ಪಕ್ಷದ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.

Govt should investigate PSI scam Says Former minister Kimmane Ratnakar gvd

ತೀರ್ಥಹಳ್ಳಿ (ಮೇ.23): ಪಿಎಸ್‌ಐ ಹಗರಣ ಸೇರಿದಂತೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರ ಅವಧಿಯಲ್ಲಿ ಆಗಿರುವ ಸಮಗ್ರ ಹಗರಣಗಳು ಮತ್ತು ಅವರ ಕುಟುಂಬಸ್ಥರ ಮೇಲಿರುವ ರಿಯಲ್‌ ಎಸ್ಟೇಟ್‌ ಆರೋಪದ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಿ ಪಕ್ಷದ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು. ಚುನಾವಣೆಯಲ್ಲಿ ನಾನು ಆರಗ ಜ್ಞಾನೇಂದ್ರರ ಹಣದೆದುರು ಸೋತಿದ್ದೇನೆಯೇ ಹೊರತು, ಈ ಕ್ಷೇತ್ರದ ಮತದಾರರಿಂದ ನನಗೆ ಸೋಲಾಗಿಲ್ಲ. ಈ ಸೋಲಿಗೆ ನಾನೇ ಹೊಣೆಗಾರನಾಗಿದ್ದೇನೆ. ಇದಕ್ಕೆ ಯಾರನ್ನೂ ಹೊಣೆ ಮಾಡುವುದಿಲ್ಲ. 

ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದ ಅವಧಿಯಲ್ಲಿ ನಡೆದಿರುವ ಪಿಎಸ್‌ಐ ಹಗರಣವನ್ನು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಪಟ್ಟಣದ ಗಾಯತ್ರಿ ಮಂದಿರದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ .65 ಕೋಟಿಯಷ್ಟುಹಣವನ್ನು ವೆಚ್ಚ ಮಾಡಿದ್ದು ಹಣ ಬಲದಿಂದ ಮತದಾರರನ್ನು ಸೆಳೆಯಲು ಎರಡು ತಿಂಗಳಿಂದಲೇ ತಂತ್ರಗಾರಿಕೆ ನಡೆಸಿದೆ. ಅದಕ್ಕೆ ಸಮನಾಗಿ ಹಣ ಹೊಂದಿಸುವುದು ನನ್ನಿಂದಾಗಿಲ್ಲ. ನಮ್ಮ ಸೋಲು ಆರಗ ವಿರುದ್ಧದ ಸೋಲಲ್ಲ, ಹಣದ ವಿರುದ್ಧ ಸೋಲು. 

ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ!

ರಾಜ್ಯದಲ್ಲಿ ಪಕ್ಷದ ಬಲಿಷ್ಠ ಸರ್ಕಾರ ಇರುವ ಕಾರಣ ನಮಗಾಗಿರುವ ಸೋಲಿಗೆ ಕಾರ್ಯಕರ್ತರು ಅಧೀರರಾಗುವ ಅಗತ್ಯವಿಲ್ಲ. ರಕ್ತಸಂಬಂಧಿಗಳಂತೆ ಕೆಲಸ ಮಾಡಿರುವ ಪಕ್ಷದ ಕಾರ್ಯಕರ್ತರಿಗೆ ಆಭಾರಿಯಾಗಿದ್ದೇನೆ ಎಂದೂ ಹೇಳಿದರು. ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್‌.ಎಂ. ಮಂಜುನಾಥಗೌಡ ಮಾತನಾಡಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದ್ದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದ್ದ ಕಾರಣ ನೈತಿಕವಾಗಿ ಈ ಸೋಲಿಗೆ ನಾವೆಲ್ಲರೂ ಕಾರಣರಾಗಿದ್ದೇವೆ. ಚುನಾವಣೆಯ ಎರಡು ದಿನಗಳ ಹಿಂದಿನವರೆಗೂ ಸೋಲಿನ ಸೂಚನೆಯೇ ಇರಲಿಲ್ಲ. ಬಿಜೆಪಿಯವರಿಗೆ ಸರಿಯಾಗಿ ಹಣವನ್ನು ಹೊಂದಿಸುವ ಶಕ್ತಿ ಇಲ್ಲದ ಕಾರಣ ಸೋಲಾಗಿದೆ ಎಂದರು.

ಕಾಂಗ್ರೆಸ್‌ ಪಕ್ಷ ಜನರಿಗೆ ನೀಡಿರುವ ಎಲ್ಲಾ ಆಶ್ವಾಸನೆಗಳನ್ನೂ ಪೂರೈಸುತ್ತದೆ. ತಾಲೂಕಿನಲ್ಲಿ ಬಿಜೆಪಿ ಹ್ಯಾಂಗ್‌ ಓವರ್‌ನಲ್ಲಿರುವ ಅಧಿಕಾರಿಗಳು ಪಕ್ಷಪಾತವಿಲ್ಲದೇ ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕು. ಹಿಂದಿನಂತೆ ಬಿಜೆಪಿಯೇತರರಿಗೆ ತೊಂದರೆ ಕೊಟ್ಟರೆ ಸಹಿಸುವುದಿಲ್ಲ ಎಂದೂ ಎಚ್ಚರಿಸಿದ ಗೌಡರು, ಕಿಮ್ಮನೆ ರತ್ನಾಕರ್‌ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತೇವೆ. ಗೆದ್ದವರಿಗೇ ಸ್ಥಾನಮಾನ ನೀಡಲು ಪಕ್ಷಕ್ಕೆ ಕಷ್ಟವಾಗಿದೆ. ಮತ್ತು ಸಚಿವ ಸ್ಥಾನವನ್ನೇ ಬಿಟ್ಟು ಬಂದಿರುವ ನಾನು ಯಾವುದೇ ಸ್ಥಾನಮಾನಗಳಿಗೆ ಆಕಾಂಕ್ಷಿಯೂ ಆಗಿಲ್ಲ ಎಂದ​ರು.

ಪ್ರಕೃತಿ ಯಾರ ಕೈಯಲ್ಲೂ ಇಲ್ಲ, ಎಚ್ಚರಿಕೆ ಇರಬೇಕು: ಡಿ.ಕೆ.ಶಿವಕುಮಾರ್‌

ಬಿಜೆಪಿಯವರು ಹರಿಸಿದ ಹಣದ ಹೊಳೆ ನಡುವೆಯೂ ಕಳೆದ ಬಾರಿಗಿಂತ ನನಗೆ 26 ಸಾವಿರ ಮತಗಳು ಹೆಚ್ಚು ಬರುವುದಕ್ಕೆ ಕಾರ್ಯಕರ್ತರ ಶ್ರಮವೇ ಕಾರಣವಾಗಿದೆ. ಪ್ರಜ್ಞಾವಂತರ ಈ ಕ್ಷೇತ್ರದ ಮತದಾರರು ಹಣಕ್ಕೆ ಕೈ ಚಾಚಿರುವುದು ವಿಷಾದನೀಯ ಸಂಗತಿ. ಕುವೆಂಪು, ಅನಂತಮೂರ್ತಿ, ಶಾಂತವೇರಿಯವರು ಜನಿಸಿದ ಈ ನೆಲದ ಘನತೆಯನ್ನು ಕೆಡಿಸಿದ ಕೀರ್ತಿ ಚುನಾವಣೆಯಲ್ಲಿ ಅಕ್ರಮ ಎಸಗಿದ ಜ್ಞಾನೇಂದ್ರ ಅವ​ರಿಗೆ ಸಲ್ಲುತ್ತದೆ
- ಕಿಮ್ಮನೆ ರತ್ನಾ​ಕರ್‌, ಪರಾ​ಜಿತ ಕಾಂಗ್ರೆಸ್‌ ಅಭ್ಯರ್ಥಿ

Latest Videos
Follow Us:
Download App:
  • android
  • ios