Asianet Suvarna News Asianet Suvarna News

ರಾಜಕೀಯ ರ‍್ಯಾಲಿ ಅಸ್ತು : ಕಂಡೀಶನ್ಸ್ ಇದೆ


12 ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆ, ಉಪಚುನಾವಣೆ ಕಾವು ಜೋರಾಗುತ್ತಿರುವಾಗಲೇ ರಾಜಕೀಯ ಪಕ್ಷಗಳ ಚುನಾವಣಾ ರ‍್ಯಾಲಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ

Govt Permission To Political Rally snr
Author
Bengaluru, First Published Oct 9, 2020, 11:56 AM IST
  • Facebook
  • Twitter
  • Whatsapp

ನವದೆಹಲಿ (ಅ.09):  ಬಿಹಾರ ಹಾಗೂ ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆ, ಉಪಚುನಾವಣೆ ಕಾವು ಜೋರಾಗುತ್ತಿರುವಾಗಲೇ ರಾಜಕೀಯ ಪಕ್ಷಗಳ ಚುನಾವಣಾ ರ‍್ಯಾಲಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ಅ.15ರವರೆಗೂ ಗರಿಷ್ಠ 100 ಜನರಿಗಿಂತ ಅಧಿಕ ಮಂದಿ ಒಂದೆಡೆ ಸೇರುವಂತಿಲ್ಲ ಎಂದು ಕೇಂದ್ರ ಸರ್ಕಾರ ಸೆ.30ರಂದು ಅನ್‌ಲಾಕ್‌ 5.0 ಮಾರ್ಗಸೂಚಿಯಲ್ಲಿ ಹೇಳಿತ್ತು. ಇದೀಗ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರು ಆ ಆದೇಶದಲ್ಲಿ ಕೊಂಚ ಮಾರ್ಪಾಡು ಮಾಡಿದ್ದಾರೆ. ವಿಧಾನಸಭೆ/ಸಂಸದೀಯ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿರುವ ಕಡೆ ಅ.15ಕ್ಕೆ ಮುನ್ನ ಕೂಡ 100 ಜನರ ಮಿತಿಯನ್ನು ಮೀರಿದಂತೆ ಜನರ ಸಮಾವೇಶಕ್ಕೆ ಅನುಮತಿ ನೀಡಬಹುದು ಎಂದು ಹೇಳಿದ್ದಾರೆ.

ಶಿವಸೇನೆ ಸರ್ಕಾರ ಕೆಳಗಿಳಿಸ್ತೀವಿ, ಮಹಾರಾಷ್ಟ್ರದಲ್ಲಿ ಶೀಘ್ರ ಬಿಜೆಪಿ ಸರ್ಕಾರ ರಚನೆ: ನಡ್ಡಾ ...

ಒಂದು ವೇಳೆ ಇಂತಹ ಸಮಾವೇಶಗಳು ಒಳಾಂಗಣದಲ್ಲಿ ನಡೆಯುತ್ತಿದ್ದರೆ ಆ ಸಭಾಂಗಣ ಸಾಮರ್ಥ್ಯದ ಶೇ.50ರಷ್ಟುಹಾಗೂ ಗರಿಷ್ಠ 200 ಮಂದಿ ಮಾತ್ರ ಸೇರಬಹುದು. ಆದರೆ ಮಾಸ್ಕ್‌, ಸಾಮಾಜಿಕ ಅಂತರ ಕಡ್ಡಾಯ. ಥರ್ಮಲ್‌ ಸ್ಕಾ್ಯನಿಂಗ್‌, ಹ್ಯಾಂಡ್‌ವಾಶ್‌ ಅಥವಾ ಸ್ಯಾನಿಟೈಸರ್‌ ಬಳಕೆ ಕೂಡ ಕಡ್ಡಾಯವಾಗಿರುತ್ತದೆ. ಬಹಿರಂಗ ಸ್ಥಳಗಳಲ್ಲಿ ಮೈದಾನದ ಜಾಗ ನೋಡಿಕೊಂಡು ಸಾಮಾಜಿಕ ಅಂತರ, ಥರ್ಮಲ್‌ ಸ್ಕಾ್ಯನಿಂಗ್‌, ಹ್ಯಾಂಡ್‌ ವಾಶ್‌ ಅಥವಾ ಸ್ಯಾನಿಟೈಸರ್‌ ನಿಯಮ ಪಾಲಿಸಿಕೊಂಡು ಅನುಮತಿ ನೀಡಬಹುದು. ಕಂಟೇನ್ಮೆಂಟ್‌ ವಲಯಗಳಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳಿಗೆ ಹಾಲಿ 100 ಜನರ ಮಿತಿ ಇದೆ. ಆದರೆ ಇದನ್ನು ಕಂಟೇನ್ಮೆಂಟ್‌ ವಲಯಗಳನ್ನು ಹೊರತುಪಡಿಸಿ ಉಳಿದೆಡೆ ಅ.15ರಿಂದ 200 ಜನರವರೆಗೆ ವಿಸ್ತರಣೆ ಮಾಡಬಹುದು ಎಂದು ಸೆ.30ರ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios